ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಸರ್ಕಾರದ ಕ್ರಮವನ್ನು ವಿರೋಧಿಸಿ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರವು ರಹಸ್ಯವಾಗಿ ನೀರು ಬಿಡುಗಡೆ ಮಾಡಿ, ಅಧಿಕೃತ ಅಂಕಿಅಂಶಗಳನ್ನು ಮುಚ್ಚಿಡುತ್ತಿದೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಲಾಗಿದೆ. ರಾತ್ರಿಯಿಂದಲೇ ಕೆಆರ್ ಎಸ್ ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗಿದೆ. ಇಷ್ಟು ದಿನ ಕಬಿನಿ ಜಲಾಶಯದಿಂದ ಮಾತ್ರ ನೀರು ಬಿಡಲಾಗುತ್ತಿತ್ತು, ಆದರೆ ಕಬಿನಿ ಜಲಾಶಯದ ಒಳ ಹರಿವು ತಗ್ಗಿದ ಹಿನ್ನೆಲೆಯಲ್ಲಿ ಕೆಆರ್ಎಸ್ ಡ್ಯಾಂನಿಂದಲೂ ನೀರು ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಆರ್‌ಎಸ್‌ನಿಂದ 3000 ಕ್ಯೂಸೆಕ್ ನೀರು ತಮಿಳುನಾಡಿಗೆ
ಸರ್ಕಾರದ ಸೂಚನೆಯಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು 80+ ಗೇಟ್ ಮೂಲಕ ನೀರು ಬಿಡುಗಡೆ ಮಾಡಿದ್ದು, 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಮಾಹಿತಿ ಸಿಕ್ಕಿದೆ. ಕೆಆರ್‌ಎಸ್‌ನಿಂದ 3000 ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುಗಡೆ ಹಿನ್ನಲೆಯಲ್ಲಿ ಮಂಡ್ಯದ ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿರುವ ರೈತರು, ತಮಿಳುನಾಡಿಗೆ ನೀರು ಬಿಡಲ್ಲ ಎಂದ ಸರ್ಕಾರ ಹೇಳಿತ್ತು. ಆದರೆ ಕದ್ದು ಮುಚ್ಚಿ ನೀರು ಹರಿಸಲಾಗ್ತಿದೆ ಎಂದು ಆರೋಪ ಮಾಡಿದ್ದಾರೆ. ಇತ್ತ ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡಿದರೆ ನೀರು ಬಿಟ್ಟಿಲ್ಲ ಎಂದು ರೈತರಿಗೆ ಸಮಜಾಯಿಷಿ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರು ಬಿಟ್ಟು ಮಾಹಿತಿ ಮುಚ್ಚಿಟ್ಟ ಸರ್ಕಾರ?
ಇನ್ನು, ಅಧಿಕೃತ ಸರ್ಕಾರ ಕೊಟ್ಟ ಅಧಿಕೃತ ಮಾಹಿತಿಯಲ್ಲೂ ನೀರಿನ ಅಂಕಿ ಅಂಶಗಳನ್ನು ಜಿಲ್ಲಾಡಳಿತ ಮುಚ್ಚಿಟ್ಟಿದೆ ಎಂದು ರೈತರು ಆರೋಪ ಮಾಡಿದ್ದು, ಜಲಾಶಯದಿಂದ ನಾಲೆಗಳಿಗೆ ನೀರು ಬಿಟ್ಟಿರುವ ಮಾಹಿತಿ ಮಾತ್ರ ಜಿಲ್ಲಾಡಳಿತ ಕೊಟ್ಟಿದೆ. ಆದರೆ ಕೆ.ಆರ್.ಎಸ್ ಜಲಾಶಯದ ಗೇಟ್ ನಿಂದ ಹರಿದು ಹೋಗುತ್ತಿದ್ದರು, ತಮಿಳುನಾಡಿಗೆ ನೀರು ಬಿಟ್ಟು ಸರ್ಕಾರ ಮುಚ್ಚಿಟ್ಟಿದೆ. ನದಿಗೆ ನೀರು ಬಿಟ್ಟು ಇದೀಗಾ ಬಿಟ್ಟಿಲ್ಲ ಎನ್ನುತ್ತಿದೆ. ಅಧಿಕೃತ ಅಂಕಿ ಅಂಶವನ್ನೇ ಮುಚ್ಚಿಡುವ ಕೆಲಸ ಮಾಡುತ್ತಿದೆ. ಸದ್ಯ ಜಿಲ್ಲಾಡಳಿತ ನೀಡಿರುವ ಮಾಹಿತಿಯಂತೆ ನಿನ್ನೆ ಸಂಜೆ ಜಲಾಶಯದ ಹೊರಹರಿವು 2410 ಕ್ಯೂಸೆಕ್ ಎಂದು ತಿಳಿಸಿದೆ. ರಾತ್ರಿಯಿಂದ ನದಿಗೆ ನೀರು ಬಿಟ್ಟರು 2699 ಕ್ಯೂಸೆಕ್ ಮಾತ್ರ ಹೊರಹರಿವು ಎಂದು ಮಾಹಿತಿ ನೀಡಿದೆ.
ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ
- ಗರಿಷ್ಠ ಮಟ್ಟ: 124.80 ಅಡಿ.
- ಇಂದಿನ ಮಟ್ಟ : 109.75 ಅಡಿ.
- ಒಳಹರಿವು : 2,274 ಕ್ಯೂಸೆಕ್
- ಹೊರಹರಿವು : 2,699ಕ್ಯೂಸೆಕ್
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ಸಂಗ್ರಹ : 31.471 ಟಿಎಂಸಿ
ಕಬಿನಿ ಜಲಾಶಯ
- ಜಲಾಶಯದ ಗರಿಷ್ಠ ಮಟ್ಟ 2284 ಅಡಿ.
- ಇಂದಿನ ನೀರಿನ ಮಟ್ಟ 2281.63 ಅಡಿ.
- ಒಳ ಹರಿವು : 8,701 ಕ್ಯೂಸೆಕ್.
ಹೊರ ಹರಿವು : 11,896 ಕ್ಯೂಸೆಕ್.
ಕಾಲುವೆಗಳಿಗೆ ಇಂದೂ ನೀರು ಬಿಡುಗಡೆ ಇಲ್ಲ


