Cauvery ನೀರಿನ ಸಮಸ್ಯೆ ಯಾವುದೇ ಹೋರಾಟದಿಂದ ಪರಿಹಾರ ಆಗೋದೆ ಇಲ್ಲ: ಜಗ್ಗೇಶ್
ಕಾನೂನು ಮಾರ್ಗದಲ್ಲಿ ಸಂಕಷ್ಟ ಸೂತ್ರವನ್ನು ರಚನೆ ಮಾಡಿದರೆ ಮಾತ್ರ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರಿನ ಹಂಚಿಕೆ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಚಿತ್ರನಟ ಜಗ್ಗೇಶ್ ಅಭಿಪ್ರಾಯಪಟ್ಟರು.

ಬೆಂಗಳೂರು (ಅ.02): ಕಾನೂನು ಮಾರ್ಗದಲ್ಲಿ ಸಂಕಷ್ಟ ಸೂತ್ರವನ್ನು ರಚನೆ ಮಾಡಿದರೆ ಮಾತ್ರ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರಿನ ಹಂಚಿಕೆ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಚಿತ್ರನಟ ಜಗ್ಗೇಶ್ ಅಭಿಪ್ರಾಯಪಟ್ಟರು. ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಆಗುತ್ತಿರುವ ಸಮಸ್ಯೆ ಇಂದು ನಿನ್ನೆಯದಲ್ಲ. ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಈಸ್ಟ್ ಇಂಡಿಯಾ ಕಂಪನಿ ಮದ್ರಾಸ್‌ನಲ್ಲಿತ್ತು. ಹಾಗಾಗಿ ಅವರ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದರು.
ಸ್ವಾತಂತ್ರ್ಯ ನಂತರ ನ್ಯಾಯಾಧೀಕರಣ ರಚನೆಯಾಯಿತು. ಆಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾವೇರಿ ನೀರಿಗೆ ಕೊನೆ ಮೊಳೆ ಬಿತ್ತು ಎಂದಿದ್ದರು. ಅದು ಈಗ ನಿಜವಾಗುತ್ತಿದೆ ಎಂದರು. ಎರಡು ರಾಜ್ಯಗಳ ನಡುವೆ ಇರುವ ಈ ಕಾವೇರಿ ನೀರಿನ ಸಮಸ್ಯೆಯ ಇತಿಹಾಸ ತಿಳಿಯದೆ ಕೆಲವರು ಮಾತನಾಡುತ್ತಿದ್ದಾರೆ. ಕಾವೇರಿ ಹೋರಾಟಕ್ಕೆ ಸಿನಿಮಾ ಕಲಾವಿದರು ಬಂದ ಕೂಡಲೇ ಸಮಸ್ಯೆ ಬಗೆಹರಿಯುವುದಿಲ್ಲ. ನಾವು ಕಲಾವಿದರು ನಾಡಿನ ಪರ ಇದ್ದೇ ಇರುತ್ತೇವೆ. ನಾವು ಬಂದಿಲ್ಲ ಎಂದು ಕಾವೇರಿ ಹೋರಾಟದ ಸಂದರ್ಭದಲ್ಲಿ ಕಲಾವಿದರನ್ನು ಎಳೆದು ತಂದು ಗೂಬೆ ಕೂರಿಸಬೇಡಿ.
ನಟ Jaggesh ದಿಢೀರ್ ಆಸ್ಪತ್ರೆಗೆ ದಾಖಲು: ಆತಂಕ ಹುಟ್ಟಿಸಿದ ನವರಸ ನಾಯಕನ ಪೋಟೋಸ್!
ಸುಪ್ರೀಂಕೋರ್ಟ್ ಸೂಚನೆಯಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ರಚನೆ ಆಗಿದೆ. ಈಗ ಕೋಟ್೯ ಆದೇಶದಂತೆ ನೀರು ಬಿಡಬೇಕು. ನೀರು ಬಿಡದೆ ಹೋದರೆ ನ್ಯಾಯಾಲಯ ಆದೇಶವನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಹೇಳಿದರು. ನಾವು ಸಿನಿಮಾ ಕಲಾವಿದರು ಬಂದು ಮಾತನಾಡಿದ ಕೂಡಲೇ ಒಂದು ಟ್ರಿಬ್ಯುನಲ್‌ನಲ್ಲಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಟ್ರಿಬ್ಯುನಲ್‌ನಲ್ಲಿ ಕಾನೂನು ಆಗಬೇಕಿದೆ. ನೀರು ಇದ್ದಾಗ ಎಷ್ಟು ನೀರು ತಮಿಳುನಾಡಿಗೆ ಬಿಡಬೇಕು,
ಕಡಿಮೆ ಪ್ರಮಾಣದಲ್ಲಿ ನೀರು ಇದ್ದಾಗ ಎಷ್ಟು ನೀರು ಹರಿಸಬೇಕು ಎಂದು ಕಾನೂನು ಮಾಡಿದ್ದಾರೆಯೇ ಹೊರತು, ನೀರು ಇಲ್ಲದೇ ಇದ್ದಾಗ, ಕನಾ೯ಟಕಕ್ಕೇ ನೀರು ಕೊರತೆ ಇದ್ದಾಗ ಏನು ಮಾಡಬೇಕು ಎಂಬುದರ ಬಗ್ಗೆ ಕಾನೂನು ಮಾಡಿಲ್ಲ. ಅನಾದಿಕಾಲದಿಂದಲೂ ಕಾವೇರಿ ನೀರಿನ ಹಂಚಿಕೆ ಸಮಸ್ಯೆಗೆ ಇದೇ ಕಾರಣ. ಹೀಗಾಗಿ ಕಾನೂನಾತ್ಮಕವಾಗಿ ಒಂದು ಸಂಕಷ್ಟ ಸೂತ್ರ ರಚನೆ ಮಾಡಿದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ನೀರು ಬಿಡುವಂತೆ ಆದೇಶ ಮಾಡಿದಾಗ ರಾಜ್ಯ ಸಕಾ೯ರ ನೀರು ಬಿಡದೆ ಸವರ್ಪಕ್ಷಗಳ ಸಭೆ ಕರೆದು ಚಚಿರ್ಸಿ ಸೂಕ್ತ ತೀಮಾರ್ನ ತೆಗೆದು ಕೊಳ್ಳಬೇಕಿತ್ತು. ನೀರು ಬಿಟ್ಟು ಸಭೆ ಕರೆದರೆ ಏನು ಪ್ರಯೋಜನ ಎಂದು ಸರ್ಕಾರದ ಮೇಲೆ ಜಗ್ಗೇಶ್ ಗರಂ ಆದರು.
ಈರೇಗೌಡನ ಪ್ರೀತಿಯಲ್ಲಿ ಶಕೀಲಾ ಬಾನು: ಬಿಡುಗಡೆಗೆ ರೆಡಿ ಆಗಿದೆ 'ತೋತಾಪುರಿ-2'
‘ಎಂಐಆರ್ ಸ್ಕ್ಯಾನ್ ಟ್ರೋಲ್‌ಗೆ ಉತ್ತರಿಸಲ್ಲ’: ಅನಾರೋಗ್ಯಕ್ಕೆ ತುತ್ತಾಗಿದ್ದ ಜಗ್ಗೇಶ್ ಅವರು ಎಂಆರ್‌ಐ ಸ್ಕ್ಯಾನ್‌ಗೆ ಒಳಗಾಗುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಚಿತ್ರರಂಗ ನಡೆಸಿದ ಪ್ರತಿಭಟನೆಗೆ ಜಗ್ಗೇಶ್ ಅವರು ಬಂದಿಲ್ಲ. ಹಾಗಾಗಿ ಎಂಆರ್‌ಐ ಸ್ಕ್ಯಾನ್ ಡ್ರಾಮಾ ಮಾಡಿದ್ದಾರೆ ಎಂದು ಟ್ರೋಲ್ ಆಗಿತ್ತು. ಈ ಬಗ್ಗೆ ಮಾಧ್ಯಮಗಳು ಕೇಳಿದಾಗ ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುವವರಿಗೆ ನಾನು ಉತ್ತರಿಸಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.