ಕರ್ನಾಟಕದಲ್ಲಿ ವರ್ಷಕ್ಕೆ ಎರಡು ಬಾರಿ ಭರ್ತಿಯಾಗುವ ಏಕೈಕ ಜಲಾಶಯ ಎಂಬ ಕೀರ್ತಿಯನ್ನು ಕಬಿನಿ ಜಲಾಶಯ ಪಡೆದುಕೊಂಡಿದೆ. ಈ ವರ್ಷ ತೀವ್ರ ಬರದ ನಡುವೆಯೂ ಕಬಿನಿ ಜಲಾಶಯ ಭರ್ತಿಯಾಗಿದ್ದು, ರಾಜ್ಯದ ರೈತ ಸಂಘದ ಪದಾಧಿಕಾರಿಗಳು ಬಾಗಿನ ಅರ್ಪಿಸುವ ಕಾರ್ಯವನ್ನು ಮಾಡಿದ್ದಾರೆ.
ಮೈಸೂರು: ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ಜಾರಿಗೊಳಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಲು ತಮಿಳುನಾಡು ಸರ್ಕಾರ ಸುಪ್ರೀ ಕೋರ್ಟ್ ಮೋರೆ ಹೋಗಿದೆ. ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆಗೆ ಕೋರ್ಟ್ ಸಮ್ಮತಿ ಸೂಚಿಸಿದೆ. ಇದರ ನಡುವೆಯೇ ಬಿಗ್ ರಿಲೀಫ್ ನೀಡುವ ಸುದ್ದಿ ಸಿಕ್ಕಿದ್ದು, ತಮಿಳುನಾಡಿನ ನೀರಿನ ದಾಹವನ್ನು ತೀರಿಸುವ ಕಾರ್ಯವನ್ನು ಕಬಿನಿ ಜಲಾಶಯ ಮಾಡುತ್ತಿದೆ.
ತಮಿಳುನಾಡಿಗೆ 13 ಟಿಎಂಸಿ ನೀರು
ಕರ್ನಾಟಕದಲ್ಲಿ ವರ್ಷಕ್ಕೆ ಎರಡು ಬಾರಿ ಭರ್ತಿಯಾಗುವ ಏಕೈಕ ಜಲಾಶಯ ಎಂಬ ಕೀರ್ತಿಯನ್ನು ಕಬಿನಿ ಜಲಾಶಯ ಪಡೆದುಕೊಂಡಿದೆ. ಈ ವರ್ಷ ತೀವ್ರ ಬರದ ನಡುವೆಯೂ ಕಬಿನಿ ಜಲಾಶಯ ಭರ್ತಿಯಾಗಿದ್ದು, ರಾಜ್ಯದ ರೈತ ಸಂಘದ ಪದಾಧಿಕಾರಿಗಳು ಬಾಗಿನ ಅರ್ಪಿಸುವ ಕಾರ್ಯವನ್ನು ಮಾಡಿದ್ದಾರೆ. ಇದರ ನಡುವೆಯೇ ಆಗಸ್ಟ್ 01 ರಿಂದ ಇದುವರೆಗೂ ಕಬಿನಿ ಜಲಾಶಯದಿಂದ ಬರೋಬ್ಬರಿ 13 ಟಿಎಂಸಿ ನೀರು ತಮಿಳುನಾಡಿಗೆ ಹರಿದು ಹೋಗಿದೆ.
ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಕಾರಣ ಕಬಿನಿ ಜಲಾಶಯ ತಡವಾಗಿ ಭರ್ತಿಯಾಗಿತ್ತು. ಇದರ ನಡುವೆಯೂ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಕಾರಣ ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ. ಆದರೆ ಜಲಾಶಯ ತುಂಬಿದ್ದರೂ ಕೂಡ ನಾಲೆಗಳಿಗೆ ನೀರು ಹರಿಸದೆ, ತಮಿಳುನಾಡಿಗೆ ನೀರು ಹರಿಸುತ್ತಿರುವುದು ರೈತರಿಗೆ ತೀವ್ರ ಆಘಾತ ನೀಡಿದೆ. ಸಂಕಷ್ಟದ ಕಾಲದಲ್ಲಿ ಕಬಿನಿ ಜಲಾಶಯ ಭರ್ತಿಯಾಗಿ ಕಾವೇರಿ ಗಲಾಟೆಯನ್ನು ನೀಗಿಸುವ ಕಾರ್ಯ ಮಾಡಿದ್ರು, ನಾಲೆಗಳಿಗೆ ನೀರು ಹರಿಸಿ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ.
ಸುಪ್ರೀಂ ಮೆಟ್ಟಿಲೇರಿದ ವಿಜಯ್ ಸರ್ಕಾರ
ಇನ್ನು, ತಮಿಳುನಾಡು ಸರ್ಕಾರ ಸಲ್ಲಿಕೆ ಮಾಡಿರುವ ಅರ್ಜಿಯನ್ನು ಸ್ವೀಕಾರ ಮಾಡಿರುವ ಸುಪ್ರೀಂ ಕೋರ್ಟ್, ಅರ್ಜಿಯ ವಿಚಾರಣೆಯನ್ನು ಆಗಸ್ಟ್ 13ಕ್ಕೆ ನಿಗದಿಪಡಿಸಿದೆ. ತಮಿಳುನಾಡಿಗೆ ಅದರ ಪಾಲಿನ ನೀರನ್ನು ಹರಿಸಲು ಕರ್ನಾಟಕ ಸರ್ಕಾರ ವಿಫಲವಾಗಿದೆ ಎಂದು ಅರ್ಜಿಯಲ್ಲಿ ಟಿವಿಕೆ ಸರ್ಕಾರ ದೂರಿದೆ. ಜುಲೈ 28ರಂದು ನಡೆದ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ, ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3,500 ಕ್ಯುಸೆಕ್ ನೀರು ಹರಿಸುವಂತೆ ಆದೇಶ ಮಾಡಿತ್ತು. ಜುಲೈ 30ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಈ ಆದೇಶವನ್ನು ಎತ್ತಿ ಹಿಡಿತ್ತು.
ತಮಿಳುನಾಡು ಸರ್ಕಾರ ನೀರಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೆ, ಆಗಸ್ಟ್ 13ರಂದು ಕರ್ನಾಟಕ ಬಂದ್ ಆಚರಣೆ ಮಾಡುವ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದೆ. ಬಂದ್ ನಡೆಸಲು ಕನ್ನಡ ಚಳುವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಪಟ್ಟು ಹಿಡಿದಿದ್ದರೆ, ಕನ್ನಡ ಪರ ಹೋರಾಟ ಸಂಘಟನೆಗಳು ಬಂದ್ ನಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದೆ. ಕರ್ನಾಟಕ ಬಂದ್‌ಗೆ ಹೋಟೆಲ್ ಮಾಲೀಕರ ಸಂಘ ನೈತಿಕ ಬೆಂಬಲ ನೀಡಿದ್ದು, ಆಟೋ ಚಾಲಕರ ಸಂಘ, ಕರ್ನಾಟಕ ರಾಜ್ಯ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆ ಬಂದ್‌ಗೆ ನೈತಿಕ ಬೆಂಬಲ ನೀಡಿದೆ.


