Asianet Suvarna News Asianet Suvarna News

ಸೈಬರ್‌ ಕ್ರೈಂ ಬಗ್ಗೆ ಜಾಗೃತಿ ಅಗತ್ಯ

ಅಪರಾದ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾದದ್ದು. ಕ್ಷಣ ಮಾತ್ರದಲ್ಲಿ ಆಗುವ ಅಹಿತಕರ ಘಟನೆಗಳ ಬಗ್ಗೆ ನಾವು ಎಚ್ಚೆತ್ತುಕೊಳ್ಳದೆ ಹೋದಲ್ಲಿ ನಾವು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ.

Awareness about cybercrime is essential snr
Author
First Published Jan 7, 2023, 6:15 AM IST

 ಮೈಸೂರು (ಜ. 07 ): ಅಪರಾದ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾದದ್ದು. ಕ್ಷಣ ಮಾತ್ರದಲ್ಲಿ ಆಗುವ ಅಹಿತಕರ ಘಟನೆಗಳ ಬಗ್ಗೆ ನಾವು ಎಚ್ಚೆತ್ತುಕೊಳ್ಳದೆ ಹೋದಲ್ಲಿ ನಾವು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಸೈಬರ್‌ ಕ್ರೈಂ ಇವುಗಳ ಬಗ್ಗೆ ಜಾಗೃತಿ ಹೊಂದುವುದು ಅತಿ ಅವಶ್ಯಕ ಎಂದು ಕರ್ನಾಟಕ ಪೊಲೀಸ್‌ ಅಕಾಡೆಮಿಯ ಡಿವೈಎಸ್ಪಿ ಎಚ್‌.ಎಸ್‌.ರೇಣುಕಾರಾಧ್ಯ ತಿಳಿಸಿದರು.

ನಗರದ ಸರಸ್ವತಿಪುರಂನಲ್ಲಿರುವ ಟಿಟಿಎಲ್‌ ಕಾಲೇಜಿನಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್‌ ಮೈಸೂರು ಘಟಕವು ಆಯೋಜಿಸಿದ್ದ ಸೈಬರ್‌ ಅಪರಾಧ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಅಂತರ್ಜಾಲದ ದುರುಪಯೋಗ ಹೆಚ್ಚಾಗುತ್ತಿದೆ. ಜನರು ಒಂದು ಸಣ್ಣ ತಪ್ಪಿನಿಂದಾಗಿ ಹಣ ಹಾಗೂ ಮಹತ್ವದ ಮಾಹಿತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಮೂಲಕ ತಿಳಿದೋ ಅಥವಾ ತಿಳಿಯದೆಯೋ ವಿವಿಧ ಸಂಕಷ್ಟಗಳಿಗೆ ಸಿಲುಕಿ ನಲುಗುತ್ತಿದ್ದಾರೆ ಎಂದರು.

ಸೈಬರ್‌ ಕ್ರೈಂ ತಡೆಯುವ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯಗತ್ಯ. ಸರ್ಕಾರಿ ಸಂಸ್ಥೆಗಳಲ್ಲೂ ಪ್ರತಿ ಕೆಲಸದಲ್ಲಿಯೂ ಕಂಪ್ಯೂಟರ್‌, ವಾಟ್ಸಪ್‌, ಪೇಸ್ಬುಕ್‌ ಹೀಗೆ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತೇವೆ. ಆದ್ದರಿಂದ ಈ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಜಾಗೃತರಾಗಬೇಕು ಎಂದು ಅವರು ಹೇಳಿದರು.

ಟಿಟಿಎಲ್‌ ಟ್ರಸ್ಟ್‌ನ ಆಡಳಿತ ಮತ್ತು ನಿಯೋಜನಾಧಿಕಾರಿ ಡಾ.ಬಿ.ವಿ. ಪ್ರಶಾಂತ್‌, ಅಖಿಲ ಭಾರತೀಯ ಗ್ರಾಹಕ ಪಂಚಾಯತ್‌ ಮೈಸೂರು ಘಟಕದ ಅಧ್ಯಕ್ಷ ಜಿ.ವಿ. ರವಿಶಂಕರ್‌, ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್‌, ಪದವಿ ಕಾಲೇಜು ಪ್ರಾಂಶುಪಾಲೆ ಎಸ್‌.ಆರ್‌. ಶಶಿಕಲಾ, ಪಿಯು ಕಾಲೇಜಿನ ಪ್ರಾಂಶುಪಾಲೆ ಎಸ್‌. ಬ್ರಹ್ಮರಂಬ, ರೆಡ್‌ಕ್ರಾಸ್‌ ಅಧಿಕಾರಿ ಗಿರೀಶ್‌ ಮೊದಲಾದವರು ಇದ್ದರು.

ಬೆಂಗಳೂರು(ಅ.05): ದೇಶದಲ್ಲಿ ಸೈಬರ್ ಕ್ರೈಂ ಕೇಸ್‌ಗಳು ಹೆಚ್ಚಾದ ಹಿನ್ನಲೆಯಲ್ಲಿ ಸಿಬಿಐ ಕರ್ನಾಟಕ ರಾಜ್ಯ ಸೇರಿ ವಿವಿಧ ರಾಜ್ಯಗಳ 115ಕ್ಕೂ ಹೆಚ್ಚು ಕಡೆ ಇಂದು(ಬುಧವಾರ) ದಾಳಿ ನಡೆಸಲಾಗಿದೆ. ಇಂಟರ್‌ಪೋಲ್, ಎಫ್‌ಬಿಐ ಮತ್ತು ವಿವಿಧ ದೇಶಗಳ ಪೊಲೀಸ್ ಪಡೆಗಳ ಸಹಭಾಗಿತ್ವದಲ್ಲಿ ಈ ಶೋಧ ನಡೆಸಲಾಗಿದೆ.

ದೇಶಾದ್ಯಂತ 87 ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ರೆ, 28 ಸ್ಥಳಗಳ ಮೇಲೆ ರಾಜ್ಯ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಇಂಟರ್ ನೆಟ್ ಮೂಲಕ  ಹಣ ವಂಚನೆ ಮಾಡಿರುವ ಸೈಬರ್ ಆರೋಪಿಗಳು ವಿರುದ್ಧ 11 ಪ್ರಕರಣಗಳನ್ನು ದಾಖಲಿಸಲಾಗಿದೆ.

ಡಿಕೆ​ಶಿಗೆ ಸಂಕಷ್ಟ ತಂದೊಡ್ಡಿದ ಕೃಷಿ ಆದಾ​ಯ ಮೂಲ..!

ಸಿಬಿಐನ ಮಹತ್ವದ ದಾಳಿ ವೇಳೆ ಕರ್ನಾಟಕ, ದೆಹಲಿ, ಪಂಜಾಬ್, ರಾಜಸ್ಥಾನ, ಅಸ್ಸಾಂ, ಅಂಡಮಾನ್ ಮತ್ತು ನಿಕೋಬಾರ್, ಚಂಡೀಗಢ ಮತ್ತು ಹರಿಯಾಣ ರಾಜ್ಯಗಳ ಪೊಲೀಸರ ತಂಡ ಪಾಲ್ಗೊಂಡಿದ್ದವು. ದಾಳಿ ವೇಳೆ ಕರ್ನಾಟಕದಲ್ಲಿ ಸುಮಾರು 71.8 ಕೋಟಿ ನಗದು ಮತ್ತು 1.5 ಕೆ.ಜಿ ಚಿನ್ನ, ಅಂದಾಜು ‍1.89 ಕೋಟಿ ಮೌಲ್ಯ ಹಣ ಇರುವ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಅಂತ ತಿಳಿದು ಬಂದಿದೆ.

ಮೊಬೈಲ್‌ ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಅಪಾರ ಪ್ರಮಾಣದ ಡಿಜಿಟಲ್ ಸಾಕ್ಷಿಗಳನ್ನೂ ವಶಕ್ಕೆ ಪಡೆಯಲಾಗಿದೆ. ದೇಶದಾದ್ಯಂತ ನಿರಂತರವಾಗಿ ಅಂತಾರಾಷ್ಟ್ರೀಯ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಇದನ್ನು ತಡೆಗಟ್ಟಲು ಸಿಬಿಐ ತಂಡ ಈ ಮಹತ್ವದ ಕಾರ್ಯಾಚರಣೆ ನಡೆಸಿದೆ. 

ರಾಹುಲ್ ಪಿಎ ಹೆಸರಲ್ಲಿ ನಕಲಿ ಕರೆ

ಮಂಗಳೂರು (ಜ.2): ವಿಪಕ್ಷ ಉಪನಾಯಕ ಯು.ಟಿ.ಖಾದರ್ ಗೆ ರಾಹುಲ್ ಗಾಂಧಿ ಪಿಎ ಹೆಸರಲ್ಲಿ ಯಾಮಾರಿಸಲು ಯತ್ನಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ಈ ಬಗ್ಗೆ ಯು.ಟಿ.ಖಾದರ್ ಮಂಗಳೂರು ಕಮಿಷನರ್ ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ಸೈಬರ್ ಕ್ರೈಂ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ವಿಪಕ್ಷ ಉಪನಾಯಕ ಖಾದರ್ ಗೆ ರಾಹುಲ್ ಗಾಂಧಿ ಪಿಎ ಹೆಸರಲ್ಲಿ ನಕಲಿ ಕರೆ ಬಂದಿದೆ. ಇಂದು ಮಧ್ಯಾಹ್ನ ಹೊತ್ತಿಗೆ ಎರಡು ಬಾರಿ ಕರೆ ಬಂದಿದ್ದು, ಸಭೆಯಲ್ಲಿ ಇದ್ದ ಕಾರಣ  ಯು.ಟಿ.ಖಾದರ್ ಕರೆ ಸ್ವೀಕರಿಸಿಲ್ಲ. 8146006626 ಸಂಖ್ಯೆಯಿಂದ ಖಾದರ್ ನಂಬರ್ ಗೆ ಕರೆ ಬಂದಿದ್ದು, ಬಳಿಕ ಅದೇ ಸಂಖ್ಯೆಯಿಂದ ಖಾದರ್ ನಂಬರ್ ಗೆ ಸಂದೇಶ ಬಂದಿದೆ.

Chikkamagaluru: 20 ವರ್ಷಗಳ ಬಳಿಕ ಸಿ.ಟಿ.ರವಿ ವಿರುದ್ಧ ಬಂಡಾಯದ ಕಹಳೆ

'Gud afternoon this side kanishka Singh pa to Rahul Gandhi ji cl me' ಎಂದು ಮೆಸೇಜ್ ಕಳಿಸಲಾಗಿದೆ. ಟ್ರೂ ಕಾಲರ್ ನಲ್ಲಿ ನಂಬರ್ ಹುಡುಕಿದಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೆಸರಲ್ಲಿ ನಂಬರ್ ಸೇವ್ ಆಗಿರುವುದು ಬೆಳಕಿಗೆ ಬಂದಿದ್ದು, ಬಳಿಕ ಈ ಬಗ್ಗೆ ಪರಿಶೀಲನೆ ವೇಳೆ ನಕಲಿ ಕರೆ ಎನ್ನುವುದು ಗೊತ್ತಾಗಿದೆ.

ಬೆಳಗಾವಿ ಕುಕ್ಕರ್ ಒಡೆದ್ರೆ ಡಿಕೆಶಿ ಮನೆ ಒಡೆಯುತ್ತದೆ: ನಳಿನ್ ಕುಮಾರ್ ಕಟೀಲ್ ವ್ಯಂಗ್ಯ

ಈ ಬಗ್ಗೆ ತನಿಖೆ ನಡೆಸಿ, ಕರೆ ಮಾಡಿದವರು ಯಾರು, ಯಾಕಾಗಿ ಕರೆ ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು ಎಂದು ಯು.ಟಿ. ಖಾದರ್‌ ಅವರು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ಗೆ ದೂರು ನೀಡಿದ್ದಾರೆ. ಮೇಲ್ನೋಟಕ್ಕೆ ನಕಲಿ ಹೆಸರಿನಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಕಡೆಯಿಂದ ಎಂದು ಹೇಳಿ ಕರೆ ಮಾಡಿ, ಶಾಸಕರನ್ನು ಯಾಮಾರಿಸಲು ಯತ್ನಿಸಲು ನಡೆಸಿದ ಕೃತ್ಯ ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios