Asianet Suvarna News Asianet Suvarna News

ಡಿಕೆ​ಶಿಗೆ ಸಂಕಷ್ಟ ತಂದೊಡ್ಡಿದ ಕೃಷಿ ಆದಾ​ಯ ಮೂಲ..!

59 ಎಕರೆ 31 ಗುಂಟೆ ಕೃಷಿ ಭೂಮಿಯ ಒಡೆಯ, ಕನ​ಕ​ಪುರ, ಬಿ.ಎಂ.ಕಾವಲ್‌ನಲ್ಲಿ ಹೆಚ್ಚಿನ ಭೂಮಿ, ಪುತ್ರಿ ಐಶ್ವ​ರ್ಯ ಹೆಸ​ರಲ್ಲೂ 10 ಗುಂಟೆ ಕೃಷಿ ಭೂಮಿ

DK Shivakumar Faces Problems For Agriculture Income grg
Author
First Published Sep 30, 2022, 3:00 AM IST

ಎಂ.ಅಫ್ರೋಜ್‌ ಖಾನ್‌

ರಾಮ​ನ​ಗರ(ಸೆ.30):  ಕನ್ಯಾ​ಕು​ಮಾ​ರಿ​ಯಿಂದ ಆರಂಭ​ಗೊಂಡು ಕರ್ನಾ​ಟ​ಕದ ಮೂಲಕ ಹಾದು ಹೋಗು​ತ್ತಿ​ರುವ ಭಾರತ್‌ ಜೋಡೋ ಯಾತ್ರೆಯನ್ನು ಯಶ​ಸ್ವಿ​ಗೊ​ಳಿ​ಸಲು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಸಿದ್ಧ​ತೆ​ಯಲ್ಲಿ ತೊಡ​ಗಿ​ರು​ವಾ​ಗಲೇ ಸಿಬಿಐ ಶಾಕ್‌ ನೀಡಿ​ದ್ದಾ​ಗಿದೆ. ಆದರೆ, ಈ ದಾಳಿಗೆ ಡಿ.ಕೆ.​ಶಿ​ವ​ಕು​ಮಾರ್‌ ಅವರೇ ಘೋಷಿ​ಸಿ​ಕೊಂಡಿ​ರು​ವಂತೆ ಕೃಷಿ ಆದಾಯ ಕಾರಣ ಎನ್ನ​ಲಾ​ಗಿದೆ. ಯಾತ್ರೆ ಕರ್ನಾ​ಟಕ ಪ್ರವೇ​ಶಿ​ವರು ಹೊತ್ತಿ​ನ​ಲ್ಲಿಯೇ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಸೇರಿದ ಮನೆ, ಫಾಮ್‌ರ್‍ ಹೌಸ್‌ಗಳ ಮೇಲೆ ಸಿಬಿಐ ತಂಡ ದಾಳಿ ನಡೆ​ಸಿ​ದ್ದ​ಲ್ಲದೆ, ಅವರ ಹೆಸ​ರಿ​ನಲ್ಲಿರುವ ಜಮೀ​ನು​ಗ​ಳನ್ನು ವೀಕ್ಷಿಸಿ ಮಾಹಿತಿ ಕಲೆ ಹಾಕಿದ್ದಾರೆ. ಇ.ಡಿ., ಆದಾಯ ತೆರಿಗೆ ಇಲಾಖೆ ದಾಳಿ​ಗಳ ಬೆನ್ನಲ್ಲೆ ಸಿಬಿಐ ದಾಳಿಗೆ ಡಿ.ಕೆ.​ಶಿ​ವ​ಕು​ಮಾರ್‌ ತಮ್ಮ ಆದಾಯ ಕುರಿತು ನೀಡಿದ್ದ ಹೇಳಿ​ಕೆ​ಗಳೇ ಕಾರಣ. ಅದ​ರಲ್ಲಿ ಪ್ರಮು​ಖ​ವಾಗಿ ನಾನು ಮೂಲತಃ ರೈತ​ನಾ​ಗಿದ್ದು ಕೃಷಿ ಆದಾ​ಯದಿಂದ ಹೆಚ್ಚು ಸಂಪಾ​ದನೆ ಮಾಡಿರುವು​ದಾಗಿ ಅವರು ಹೇಳಿ​ಕೊ​ಳ್ಳು​ತ್ತಿ​ದ್ದರು. ಹೀಗಾಗಿ ಕೃಷಿ ಆದಾ​ಯದ ಮೂಲವೇ ಡಿಕೆ​ಶಿಗೆ ಸಂಕ​ಷ್ಟತಂದೊ​ಡ್ಡುವ ಆತಂಕ ಎದು​ರಾ​ಗಿ​ದೆ.

ಮೂರ್ನಾಲ್ಕು ವರ್ಷಗಳ ಹಿಂದೆ ದೆಹಲಿ, ಬೆಂಗಳೂರು ಹಾಗೂ ಕನಕಪುರ ಸೇರಿದಂತೆ ಏಕಕಾಲದಲ್ಲಿ ಡಿಕೆಶಿ ನಿವಾಸ, ಆಸ್ತಿಗಳ ಮೇಲೆ ದಾಳಿ ನಡೆ​ದಿತ್ತು. ಆದಾಯದ ಮೂಲ ಹೇಳಿಕೊಳ್ಳುವ ವೇಳೆ ಡಿಕೆಶಿ, ಕೃಷಿಯಿಂದಲೇ ಅತಿ ಹೆಚ್ಚು ಆದಾಯ ಬಂದಿರುವುದಾಗಿ ಹೇಳಿದ್ದರು. ಬಳಿಕ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್‌ ನೇತೃತ್ವದಲ್ಲಿ ಡಿಕೆಶಿ ಹೊಂದಿರುವ ಕೃಷಿಭೂಮಿಯ ಸರ್ವೆ ನಡೆಸಿ, ಒಂದು ಎಕರೆ ಜಮೀನಿಗೆ ಗಳಿಸಬಹುದಾದ ಲಾಭದ ಕುರಿತು ಅಧಿಕಾರಿಗಳಿಂದಲೇ ಮಾಹಿತಿ ಪಡೆದುಕೊಂಡಿದ್ದರು. ಅದರ ಮುಂದು​ವ​ರೆದ ಭಾಗ​ವಾಗಿ ಸಿಬಿಐ ತಂಡ ಬುಧ​ವಾರ ಕನಕಪುರದಲ್ಲಿನ ನಿವಾಸದ ಮೇಲೆ ದಾಳಿ ನಡೆಸಿ, ತಹಸೀಲ್ದಾರ್‌ ಮೂಲಕ ಡಿಕೆಶಿ ಹಾಗೂ ಸಂಬಂಧಿಕರ ಹೆಸರಿನಲ್ಲಿನ ಕೃಷಿ ಭೂಮಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಭಾರತ್‌ ಜೋಡೋ ಯಾತ್ರೆ ವೇಳೆ ಡಿಕೆಶಿಗೆ ಸಿಬಿಐ ಶಾಕ್‌..!

ಕನ​ಕ​ಪುರ ನಗರದ ಮೈಸೂರು ರಸ್ತೆ​ಯ​ಲ್ಲಿ​ ಹೆಂಚಿನ ಫ್ಯಾಕ್ಟರಿ ಬಳಿ​ಯಿರುವ ಮನೆ, ದೊಡ್ಡಾ​ಲ​ಹಳ್ಳಿಯ ಹಳೇ ಮನೆ ಹಾಗೂ ಸಂತೆ ಕೋಡಿ​ಹಳ್ಳಿಯಲ್ಲಿ​ ಫಾಮ್‌ರ್‍ ಹೌಸ್‌ ಹಾಗೂ ಜಮೀನು ಮತ್ತಿ​ತರ ಸ್ಥಳ​ಗ​ಳಿಗೂ ಸಿಬಿಐ ಅಧಿ​ಕಾ​ರಿ​ಗಳು ಭೇಟಿ ನೀಡಿ ಸಂಪೂರ್ಣ ಮಾಹಿತಿ ಕಲೆ ಹಾಕಿ​ದ್ದಾ​ರೆ. ಡಿಕೆಶಿ ಹೇಳಿಕೊಂಡಿದ್ದ ಆದಾಯದ ಲೆಕ್ಕಕ್ಕೂ, ಅವರು ಬೆಳೆಯುತ್ತಿರುವ ಬೆಳೆಗೂ ತಾಳೆ ಹಾಕಿದ್ದಾರೆ ಎನ್ನಲಾಗಿದೆ.

ಒಂದೆಡೆ ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆ, ಮತ್ತೊಂದೆಡೆ ವಿಧಾ​ನ​ಸಭೆ ಚುನಾ​ವಣೆ ಸನಿ​ಹ​ದ​ಲ್ಲಿ​ರುವ ಕಾರಣ ಡಿಕೆ​ಶಿ​ಯನ್ನು ಕಟ್ಟಿಹಾಕುವ ಪ್ರಯ​ತ್ನ ನಡೆ​ಯು​ತ್ತಿದೆ ಎಂಬ ಮಾತು​ಗಳು ಬಲ​ವಾಗಿ ಕೇಳಿ ಬರು​ತ್ತಿದೆ. ಕೃಷಿ ಆದಾಯಕ್ಕೆ ಆದಾಯ ತೆರಿಗೆ ಕಟ್ಟಬೇಕಿಲ್ಲ. ಹೀಗಾಗಿ ಡಿಕೆಶಿ ತಾತ್ಕಾಲಿಕವಾಗಿ ತಪ್ಪಿಸಿಕೊಳ್ಳುವ ಸಲುವಾಗಿ ತಮ್ಮ ಸಂಪ​ತ್ತಿ​ನ ವೃದ್ಧಿ​ಯಲ್ಲಿ ಕೃಷಿಯಿಂದ ಹೆಚ್ಚು ಆದಾಯ ಬಂದಿ​ರು​ವು​ದಾಗಿ ತೋರಿಸಿದ್ದರು. ಹೀಗಾಗಿ ಕೃಷಿ ಮೂಲವೇ ಡಿಕೆಶಿಗೆ ಮತ್ತೊಮ್ಮೆ ಹುರುಳಾಗಿ ಪರಿಣಮಿಸಿದೆ.

ಡಿಕೆಶಿ ಬಳಿ 59 ಎಕರೆ 31 ಗುಂಟೆ ಕೃಷಿ ಭೂಮಿ

ಡಿ.ಕೆ.​ಶಿ​ವ​ಕು​ಮಾರ್‌ ಅವರ 2018ರ ಅಫಿ​ಡೆ​ವಿಟ್‌ ಪ್ರಕಾರ ಒಟ್ಟು 59 ಎಕರೆ 31 ಗುಂಟೆ ಕೃಷಿ ಭೂಮಿ ಹೊಂದಿ​ದ್ದಾರೆ. ಈ ಪೈಕಿ ಹೆಚ್ಚಿನ ಪ್ರಮಾ​ಣದ ಭೂಮಿ ಪಿತ್ರಾ​ರ್ಜಿ​ತ​ವಾ​ಗಿದ್ದು, ಶೇ.50ರಷ್ಟುಭೂಮಿ ಮಾತ್ರ ತಮ್ಮ​ದೆಂದು ಹೇಳಿ​ಕೊಂಡಿ​ದ್ದಾ​ರೆ. ಆಗ ಇದರ ಮಾರು​ಕಟ್ಟೆಅಂದಾಜು ಮೌಲ್ಯ 12.09 ಕೋಟಿ ರು.ಗ​ಳಾ​ಗಿ​ದೆ.

ಸಿದ್ದ​ರಾ​ಮಯ್ಯ ಕಣ್ಣು ಮಂಕಾ​ಗಿ​ದ್ಯಾ: ಸಿದ್ದ​ರಾ​ಮ​ಯ್ಯ ವಿರುದ್ಧ ಅಶ್ವತ್ಥ ನಾರಾಯಣ ಕಿಡಿ

ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಸ್ವಯಾ​ರ್ಜಿ​ತ 4 ಎಕರೆ, ಪಿತ್ರಾ​ರ್ಜಿತ 6 ಎಕ​ರೆ, ಗರಳಾಪುರ - 12 ಎಕ​ರೆ, ದೆಶುವಳ್ಳಿ - 4 ಎಕ​ರೆ, ಆಲಹಳ್ಳಿ - 5 ಎಕ​ರೆ, ಚೀಲಂದ​ವಾಡಿ - 2 ಎಕ​ರೆ, ಮಹಿಮನಹಳ್ಳಿ - 1 ಎಕ​ರೆ,​ಅ​ರ​ಳಾಳು ಗ್ರಾಮ - ​ಪಿ​ತ್ರಾ​ರ್ಜಿತ 31 ಗುಂಟೆ, ಸಾತನೂರು - 5 ಎಕ​ರೆ, ಮಕಲಂದ ಗ್ರಾಮ - ಪಿತ್ರಾ​ರ್ಜಿ​ತ 13 ಎಕರೆ, ಆನೇಕಲ… ತಾಲೂಕು ಗಟ್ಟಿ​ಹಳ್ಳಿ 3 ಎಕರೆ , ಮತ್ತು ಕೆಂಗೇರಿ ಬಳಿಯ ಬಿ.ಎಂ.ಕಾವಲ್‌ನಲ್ಲಿ ಸ್ವಯಾ​ರ್ಜಿತ 4 ಎಕರೆ ಕೃಷಿ ಭೂಮಿ ಹೊಂದಿ​ದ್ದಾರೆ. ಇನ್ನು ಪುತ್ರಿ ಐಶ್ವ​ರ್ಯ ಹೆಸ​ರಿ​ನಲ್ಲಿ ಬಿ.ಎಂ.​ಕಾ​ವಲ್‌ನಲ್ಲಿ 10 ಗುಂಟೆ ಕೃಷಿ ಭೂಮಿ ಇದೆ.

ಉತ್ತರಹಳ್ಳಿ ಹೋಬಳಿಯ ವಿಶ್ವೇಶ್ವರಯ್ಯ ಕೈಗಾರಿಕಾ ಲೇಔಚ್‌, ಭೂಪಸಂದ್ರ, ಮೈಸೂರು ನಜರಾಬಾದ್‌ ಮೊಹಲ್ಲಾ , ಕನಕಪುರ ಪಟ್ಟಣಗಳಲ್ಲಿ ಕೃಷಿಯೇತರ ಭೂಮಿ ಇದೆ. ಕನಕಪುರ ತಾಲೂಕು ಮರಳೇಬೇಕುಪ್ಪೆ ಗ್ರಾಮದಲ್ಲಿ ಗ್ರಾನೈಚ್‌ ಉಳ್ಳ ಭೂಮಿ, ಬೆಂಗಳೂರು ಉತ್ತರ ಹಳ್ಳಿಯಲ್ಲಿ ವಸತಿಗಾಗಿ ಪರಿವರ್ತನೆಯಾದ ಭೂಮಿ, ದೊಡ್ಡಾಲಹಳ್ಳಿಯಲ್ಲಿ ವಸತಿ ನಿವೇಶನ, ಹುನಸಣಹಳ್ಳಿಯಲ್ಲಿ ವಾಣಿಜ್ಯ ಬಳಕೆಗೆ ಭೂಮಿ ಇರುವುದಾಗಿ ಘೋಷಿಸಿಕೊಂಡಿದ್ದರು.
 

Follow Us:
Download App:
  • android
  • ios