ಬೆಳ್ತಂಗಡಿಯಲ್ಲಿ ಪ್ರಿಯಕರನ ವಂಚನೆಗೆ ಬಲಿಯಾಗಿ 17 ವರ್ಷದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದ ಆರೋಪಿ ಪ್ರವೀಣ್ ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

ಮಂಗಳೂರು (ನ.28): ಲವ್‌, ಸೆಕ್ಸ್‌, ದೋಖಾ ಕೇಸ್‌ನಲ್ಲಿ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಪ್ರಿಯತಮ ಕೈಕೊಟ್ಟ ಕಾರಣಕ್ಕೆ ಅಪ್ರಾಪ್ತ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ಘಟನೆ ನಡೆದಿದೆ. 17 ವರ್ಷದ ಹೃಷ್ಟಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯಗೆ ಪ್ರಯತ್ನ ಮಾಡಿದ್ದಳು. ನವೆಂಬರ್​ 20 ರಂದು ಹೃಷ್ಟಿ ವಿಷ ಸೇವಿಸಿದ್ದರು. ಚಿಕಿತ್ಸೆ ಫಲಿಸದೇ ಅಪ್ರಾಪ್ತ ಯುವತಿ ಹೃಷ್ವಿ ಕೊನೆಯುಸಿರೆಳೆದಿದ್ದಾರೆ. ಹೃಷ್ಟಿ ಹಾಗೂ ಆಕೆಯ ಸಂಬಂಧಿ ಪ್ರವೀಣ್‌ ಪ್ರೀತಿ ಮಾಡುತ್ತಿದ್ದರು. ಮದುವೆ ಆಗೋದಾಗಿ ನಂಬಿಸಿ ವಂಚನೆ ಆರೋಪ ಮಾಡಲಾಗಿದೆ.

ಪ್ರವೀಣ್ ವಿರುದ್ಧ ಹೃಷ್ವಿ ಪೋಷಕರಿಂದ ದೂರು ದಾಖಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಹೃಷ್ವಿ ಆತ್ಮಹತ್ಯೆ ಬಳಿಕ ಆರೋಪಿ ಪ್ರವೀಣ್​ ಪರಾರಿಯಾಗಿದ್ದಾನೆ. ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಸಂಬಂಧಿ ಪ್ರವೀಣ್ ಚಾರ್ಮಾಡಿ ಜೊತೆ ಹೃಷ್ಟಿ ಪ್ರೇಮದಲ್ಲಿದ್ದಳು. ಮದುವೆ ಆಗುವುದಾಗಿ ಆಕೆಯೊಂದಿಗೆ ಪ್ರವೀಣ್‌ ಸೆಕ್ಸ್‌ ಕೂಡ ನಡೆಸಿದ್ದ. ಆ ಬಳಿಕ ಮದುವೆ ಆಗೋದಿಲ್ಲ ಎಂದು ಆಕೆಗೆ ವಂಚನೆ ಮಾಡಿದ್ದಾನೆ. ಇದರಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರು ದಾಖಲಿಸಿದ್ದಾರೆ.

ಮಾಜಿ ಬಾಯ್‌ಫ್ರೆಂಡ್‌ನ ಬಿಟ್‌ಕಾಯಿನ್‌ ಇದ್ದ ಹಾರ್ಡ್‌ಡ್ರೈವ್‌ ಕಸದ ಗಾಡಿಗೆ ಎಸೆದ ಯುವತಿ, ಇದರ ಮೌಲ್ಯ 5900 ಕೋಟಿ!

ಬೆಳ್ತಂಗಡಿ ಮಿತ್ತಬಾಗಿಲಿನ ಕೋಡಿ ನಿವಾಸಿಯಾಗಿರುವ ಹೃಷ್ಟಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಕೆಲ ದಿನಗಳ ಹಿಂದೆ ಆಕೆ ಅಚಾನಕ್‌ ಆಗಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಆಕೆಯನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Chitradurga: 20 ವರ್ಷದ ಯುವತಿಗೆ 40ರ ಅಂಕಲ್‌ ಜೊತೆ ಲವ್‌-ಮದುವೆ; ಅಳಿಯನ ಜೀವ ತೆಗೆದ ಪೋಷಕರು!