Asianet Suvarna News Asianet Suvarna News

Chikkamagaluru: 20 ವರ್ಷಗಳ ಬಳಿಕ ಸಿ.ಟಿ.ರವಿ ವಿರುದ್ಧ ಬಂಡಾಯದ ಕಹಳೆ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ‌ ವಿರುದ್ಧ ತೊಡೆ ತಟ್ಟಿದ ಕಾರ್ಯಕರ್ತ
ನನಗೇ ಟಿಕೆಟ್ ನೀಡಬೇಕೆಂದು ಬಿಜೆಪಿ ಮುಖಂಡ ತಮ್ಮಯ್ಯ ಮನವಿ
15 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ
ಚಿಕ್ಕಮಗಳೂರು ನಗರಸಭೆ ಮಾಜಿ ಅಧ್ಯಕ್ಷ ತಮ್ಮಯ್ಯ

Trumpet of rebellion against CT Ravi after 20 years in Chikkamagaluru sat
Author
First Published Jan 2, 2023, 5:09 PM IST

ಚಿಕ್ಕಮಗಳೂರು (ಜ.02): ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ವಿರುದ್ಧ ಬರೋಬ್ಬರಿ 20 ವರ್ಷದ ಬಳಿಕ ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಬಂಡಾಯದ ಕಹಳೆಯೊಂದು ಆರಂಭವಾಗಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಲಿಂಗಾಯಿತ ಸಮುದಾಯದ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಎಚ್‍.ಡಿ ತಮ್ಮಯ್ಯ ಅವರ ಬೆಂಬಲಿಗರು ಇಂದು ಬಿಜೆಪಿ ಕಚೇರಿಗೆ ತೆರಳಿ ಎಚ್ ಡಿ ತಮ್ಮಯ್ಯ ಸ್ಪರ್ಧಿಸಲು ಕೋರಿಕೆ ಸಲ್ಲಿಸಿದ್ದಾರೆ.

ಹೌದು, ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಸಿ.ಟಿ. ರವಿ ಅವರು ಸಚಿವರಾಗಿದ್ದ ಸಂದರ್ಭದಲ್ಲಿಯೇ ಅವರಿಗೆ ರಾಷ್ಟ್ರ ರಾಜಕಾರಣದ ಹೊಣೆಗಾರಿಕೆಯನ್ನು ನೀಡುವ ಉದ್ದೇಶದಿಂದ ಬಿಜೆಪಿ ಹೈಕಮಾಂಡ್‌ನಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿತ್ತು. ಹಿಂದುತ್ವ ಮತ್ತು ಆರ್‌ಎಸ್‌ಎಸ್‌ ಸೇರಿ ಇತರೆ ವಿಚಾರಗಳಿಂದ ಬಿಜೆಪಿಗೆ ಮತಗಳನ್ನು ತಂದುಕೊಡುತ್ತಿದ್ದ ಸಿ.ಟಿ. ರವಿ ಅವರು ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಸೋಲಿಲ್ಲದ ಸರದಾರ ಆಗಿದ್ದಾರೆ. ಆದರೆ, ಈ ಬಾರಿ ಜಿಲ್ಲೆಯ ಕಾರ್ಯಕರ್ತರು ಮತ್ತು ನಾಯಕರು ತಮ್ಮ ಶಾಸಕನ ವಿರುದ್ಧವೇ ಬಂಡಾಯ ಆರಂಭಿಸಿದ್ದಾರೆ.

ಹಳೆ ಮೈಸೂರಲ್ಲಿ ಒಕ್ಕಲಿಗರ ಸೆಳೆಯಲು ಬಿಜೆಪಿ ತಂತ್ರ: ಸಿ.ಟಿ.ರವಿ

ಗುಜರಾತ್‌ ಮಾದರಿ ಇಲ್ಲಿಯೂ ಅಳವಡಿಸಲು ಪಟ್ಟು: ಇತ್ತೀಚೆಗೆ ಗುಜರಾತ್ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸೇರಿದಂತೆ ಹಲವು ಪ್ರಭಾವಿ ಘಟಾನುಘಟಿ ಶಾಸಕರಿಗೆ ಬಿಜೆಪಿ ಟಿಕೆಟ್‌ ನೀಡದೇ ಹೊಸಬರಿಗೆ ಅವಕಾಶ ಮಾಡಿಕೊಟ್ಟಿತ್ತು. ಈ ಮೂಲಕ ಬಿಜೆಪಿ ತನ್ನ ಮತದಾರರು ಮತ್ತು ನಾಯಕರನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಮತ್ತಷ್ಟು ಹಿಗ್ಗಿಸಿಕೊಂಡಿತ್ತು. ಆದರೆ, ಇದೇ ಚುನಾವಣಾ ಮಾದರಿಯನ್ನು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಳವಡಿಕೆ ಮಾಡುವ ಬಗ್ಗೆ ಈಗಾಗಲೇ ಒಂದು ಸುತ್ತಿನ ಚರ್ಚೆ ಮಾಡಲಾಗಿದೆ. ಹಾಗಾದಲ್ಲಿ ಬಹಳಷ್ಟು ಜನರಿಗೆ ಟಿಕೆಟ್‌ ತಪ್ಪುವ ಸಾಧ್ಯತೆಯೂ ಹೆಚ್ಚಾಗಿದೆ. ಈಗ ಇದನ್ನೇ ದಾಳವನ್ನಾಗಿ ಮಾಡಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿಯ ಕೆಲವು ಮುಖಂಡರು ರಾಜ್ಯದ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಹೋಗಿರುವ ಸಿ.ಟಿ. ರವಿ ಅವರನ್ನು ಬಿಟ್ಟು ತಮಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.

ಬೆಂಬಲಿಗರೊಂದಿಗೆ ತೆರಳಿ ಮನವಿ: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಾಗಿ ಲಿಂಗಾಯಿತ ಸಮುದಾಯದ ಮುಖಂಡ ಎಚ್‍.ಡಿ ತಮ್ಮಯ್ಯ ಅವರ ಬೆಂಬಲಿಗರು ಇಂದು ಬಿಜೆಪಿ ಕಚೇರಿಗೆ ತೆರಳಿ ಎಚ್.ಡಿ. ತಮ್ಮಯ್ಯ ಮನವಿ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಈಗಾಗಲೇ ಸತತವಾಗಿ ನಾಲ್ಕು ಬಾರಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿ.ಟಿ ರವಿಯವರು ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಇದೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ತಮಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಎಚ್.ಡಿ. ತಮ್ಮಯ್ಯ ಅವರು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ತಮ್ಮ ಬೆಂಬಲಿಗರ ಸಮ್ಮುಖದಲ್ಲಿ ಮನವಿ ಸಲ್ಲಿಕೆ ಮಾಡದ್ದೇನೆ. ಹೈಕಮಾಂಡ್‌ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆಯಿದೆ ಎಂದು ತಿಳಿಸಿದರು.

ಹನುಮಪ್ಪ-ಮುಲ್ಲಾಸಾಬ್‌ ನಡುವಿನ ಚುನಾವಣೆ: ಸಿ.ಟಿ.ರವಿ

ಸಿ.ಟಿ.ರವಿ‌ ವಿರುದ್ಧ ತೊಡೆ ತಟ್ಟಿದ ಕಾರ್ಯಕರ್ತ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಬಿಜೆಪಿ ಕಾರ್ಯಕರ್ತರನಾಗಿ ಕೆಲಸ ಮಾಡಿಕೊಂಡು ಬಂದು ಸಿ.ಟಿ. ರವಿ ಅವರ ಗೆಲುವಿನಲ್ಲಿಯೂ ಸಾಕಷ್ಟು ಶ್ರಮವಹಿಸಿದ್ದೇನೆ. ಚಿಕ್ಕಮಗಳೂರು ನಗರಸಭೆ ನಾಲ್ಕು ಬಾರಿ ನಗರಸಭೆ ಸದಸ್ಯನೂ ಆಗಿದ್ದು, ಒಂದು ಬಾರಿ ಅಧ್ಯರಾಗಿಯೂ ಆಡಳಿತ ನಡೆಸಿದ ಅನುಭವ ಇದೆ. ಲಿಂಗಾಯತ ಸಮುದಾಯದ ನನಗೆ ಈ ಬಾರಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಮಾಡಲು ಟಿಕೆಟ್ ನೀಡಬೇಕು ಎಂದು ಮುಖಂಡ ತಮ್ಮಯ್ಯ ಅವರು ಚಿಕ್ಕಮಗಳೂರು ನಗರದ ಪಾಂಚಜನ್ಯದಲ್ಲಿರುವ  ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪಗೆ ಮನವಿ ಮಾಡಿದ್ದಾರೆ.

Follow Us:
Download App:
  • android
  • ios