ಬೆಳಗಾವಿ ಕುಕ್ಕರ್ ಒಡೆದ್ರೆ ಡಿಕೆಶಿ ಮನೆ ಒಡೆಯುತ್ತದೆ: ನಳಿನ್ ಕುಮಾರ್ ಕಟೀಲ್ ವ್ಯಂಗ್ಯ

ಈ ರಾಜ್ಯದ ‌ಕಾಂಗ್ರೆಸ್ ಅಧ್ಯಕ್ಷ ಡಿಕೆಶಿಗೆ ಎರಡು ಕುಕ್ಕರ್ ಮೇಲೆ ವ್ಯಾಮೋಹ. ಒಂದು ಮಂಗಳೂರು ಕುಕ್ಕರ್, ಮತ್ತೊಂದು ಬೆಳಗಾವಿ ಕುಕ್ಕರ್. ಬೆಳಗಾವಿ ಕುಕ್ಕರ್ ಒಡೆದ್ರೆ ಡಿಕೆಶಿ ಮನೆ ಒಡೆಯುತ್ತದೆ. ಮಂಗಳೂರು ಕುಕ್ಕರ್ ಒಡೆದ್ರೆ ಈ ದೇಶವೇ ಒಡೆದು ಹೋಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್ ‌ಕಟೀಲ್ ವ್ಯಂಗ್ಯವಾಡಿದ್ದಾರೆ.

if Belagavi cooker blast effect in DK Shivakumar house making by Nalin Kumar Kateel gow

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಜ.2): ಈ ರಾಜ್ಯದ ‌ಕಾಂಗ್ರೆಸ್ ಅಧ್ಯಕ್ಷ ಡಿಕೆಶಿಗೆ ಎರಡು ಕುಕ್ಕರ್ ಮೇಲೆ ವ್ಯಾಮೋಹ. ಒಂದು ಮಂಗಳೂರು ಕುಕ್ಕರ್, ಮತ್ತೊಂದು ಬೆಳಗಾವಿ ಕುಕ್ಕರ್. ಬೆಳಗಾವಿ ಕುಕ್ಕರ್ ಒಡೆದ್ರೆ ಡಿಕೆಶಿ ಮನೆ ಒಡೆಯುತ್ತದೆ. ಮಂಗಳೂರು ಕುಕ್ಕರ್ ಒಡೆದ್ರೆ ಈ ದೇಶವೇ ಒಡೆದು ಹೋಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್ ‌ಕಟೀಲ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ ಬೂತ್ ವಿಜಯ ಅಭಿಯಾನ ಉದ್ಘಾಟಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದರು. ಇನ್ನು 100 ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ.‌ ಜೆಡಿಎಸ್ ಭದ್ರಕೋಟೆ ಮಂಡ್ಯ, ಹಾಸನ ಅನ್ನೋ ಮಾತಿತ್ತು. ಆದರೆ‌ ಮಂಡ್ಯದಲ್ಲಿ ಅಮಿತ್ ಶಾ ಪ್ರವಾಸದ ಮೂಲಕ ಬಿಜೆಪಿ ಚೈತನ್ಯ ಹೆಚ್ಚಾಗಿದೆ. ಬಿಜೆಪಿ ಇಂದು ಸರ್ವವ್ಯಾಪಿಯಾಗಿದ್ದು, 150 ಸ್ಥಾನ ಪಡೆಯುತ್ತೇವೆ. ಸಂಘಟನಾತ್ಮಕ ಗೆಲುವು ಸಿಗಲಿದೆ, ದ.ಕ ಜಿಲ್ಲೆಯ ಎಂಟು ಸ್ಥಾನ ಗೆಲ್ತೇವೆ. ಅಯೋಧ್ಯೆ ಮಂದಿರಕ್ಕಾಗಿ ಸಂಘದ ಪ್ರಚಾರಕನಾಗಿ ಹೊರಟೆ. ಆಗ ರಾಮನ ಪಾದದ ಮೇಲಾಣೆ, ಮಂದಿರ ಅಲ್ಲೇ ಕಟ್ಟುವೆವು ಅಂದೆವು. ಇವತ್ತು‌ ಪ್ರಧಾನಿ ಮೋದಿಯವರು ಅಲ್ಲೇ ರಾಮನ ಮಂದಿರ ಕಟ್ತಿದಾರೆ.‌ ಬೂತ್ ವಿಜಯದ ಮೂಲಕ ರಾಜ್ಯದ ವಿಜಯದ ಸಂಕಲ್ಪ ಮಾಡಿದ್ದೇವೆ.‌

ಈ ಹತ್ತು ದಿನಗಳ ಕಾಲದಲ್ಲಿ ನಮ್ಮ ಬೂತ್ ಟಾರ್ಗೆಟ್ ಇದೆ. ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಎಲ್ಲರೂ ಮುಖ್ಯಮಂತ್ರಿ ಶರ್ಟ್ ಹೊಲಿಸಿದ್ದಾರೆ.‌ ದ.ಕ ಜಿಲ್ಲೆಯಲ್ಲೂ ಮೂರು ಜನ ಸಚಿವರಾಗಲು ಶರ್ಟ್ ಹೊಲಿಸಿದ್ದಾರೆ. ಯು.ಟಿ.ಖಾದರ್, ರಮಾನಾಥ್ ರೈ, ಲೋಬೋ ಸಚಿವರಾಗಲು ಶರ್ಟ್ ಹೊಲಿಸಿದ್ದಾರೆ. ರಮಾನಾಥ್ ರೈ ಸೋಲಿಸಿ ಅಂತ ಖಾದರ್ ಗುಟ್ಟಾಗಿ ಹೇಳ್ತಾರೆ. ಖಾದರ್ ಸೋಲಿಸಿ ಅಂತ ರಮಾನಾಥ್ ರೈ ಗುಟ್ಟಾಗಿ ಹೇಳ್ತಿದಾರೆ. ಕಾಂಗ್ರೆಸ್ ನಲ್ಲಿ ಪುಸ್ತಕ ‌ಮಾಡಲು ಜನ ಸಿಗಲ್ಲ, ಆದರೆ ಬಿಜೆಪಿಯಲ್ಲಿ ಪೇಜ್ ಗೊಬ್ಬರು ಪ್ರಮುಖರು ಸಿಗ್ತಾರೆ.ಕಾಂಗ್ರೆಸ್ ಗೆ ಬೂತ್ ಗೆ ಒಬ್ಬನೇ ಒಬ್ಬ ಹಿಂದೂ ಸಿಗಲ್ಲ.‌ ಇವತ್ತು ನಡೀತಾ ಇರೋದು ಬೂತ್ ವಿಜಯ ಅಭಿಯಾನ.‌ ಇವತ್ತಿನಿಂದ ನಮ್ಮ ಯಾತ್ರೆ ಆರಂಭ, ಜಿಲ್ಲೆಯ ಮನೆಮನೆಗಳಲ್ಲೂ ಧ್ವಜ ಹಾರಬೇಕು.

ಬಿಜೆಪಿ ಬೂತ್‌ ವಿಜಯಕ್ಕೆ ಇಂದು ಚಾಲನೆ: 10 ದಿನಗಳ ಕಾಲ ರಾಜ್ಯವ್ಯಾಪಿ ಅಭಿಯಾನ

ನಾವು 50 ಲಕ್ಷ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸುವ ಟಾರ್ಗೆಟ್ ಇಟ್ಟಿದ್ದೇವೆ. ಹಲವು ಕಾರ್ಪೋರೆಟರ್ ಗಳು ನಿದ್ದೆ ಮಾಡ್ತಾ ಇದೀರಿ‌. ನಿದ್ದೆ ಮಾಡಲಿಕ್ಕೆ ಅಲ್ಲ ನಿಮ್ಮನ್ನ ಜನರು ಗೆಲ್ಲಿಸಿದ್ದು. ಇನ್ನು ನಿದ್ದೆ ಬಿಟ್ಟು ಎಲ್ಲರೂ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ‌ಮಾಡಿ. ಡಿಕೆಶಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಮೂರು ತುಂಡಾಗಿದೆ.‌ ಆದರೆ ‌ನಳಿನ್‌ಕುಮಾರ್ ಅಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ಬಿಜೆಪಿ ಒಂದೇ ಆಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ಒಡೆದು ಹೋಗಿದೆ, ಬಿಜೆಪಿ ಮನೆ ಮನಗಳನ್ನ ಕಟ್ಟುತ್ತಿದೆ.‌ ಯಕ್ಷಗಾನಗಳಲ್ಲೂ ಬಿಜೆಪಿ ಪರ ಪ್ರಚಾರ ಇವತ್ತಿನಿಂದ ಆರಂಭ ಆಗಬೇಕು. ಕಲಬುರ್ಗಿಯಲ್ಲಿ ಖರ್ಗೆಯ ಅಂಗಡಿ ಬಂದ್ ಆಗಿದೆ, ಹಾಗಾಗಿ ಪ್ರಿಯಾಂಕ್ ಖರ್ಗೆ ಬಾಯಿ ಓಪನ್ ಆಗಿದೆ‌.

 

ರಾಜ್ಯಕ್ಕೆ ಅಮಿತ್ ಶಾ ಬಂದು ಹೋದ ಬೆನ್ನಲ್ಲೇ ಬೂತ್ ವಿಜಯ ಅಭಿಯಾನ ಘೋಷಿಸಿದ ಪ್ರಹ್ಲಾದ್ ಜೋಶಿ

ಸಿದ್ದರಾಮಯ್ಯ ಏಜೆಂಟ್ ಕೆಂಪಣ್ಣ ಕೇಸ್ ಹಾಕಿದ, ಗಲಾಟೆ ಮಾಡಿದ. 40% ದಾಖಲೆ ಇದ್ರೆ ಲೋಕಾಯುಕ್ತಕ್ಕೆ ದೂರು ಕೊಡಿ ಅಂತ ನಾನು ಹೇಳಿದೆ. ದಾಖಲೆ ಇದ್ರೆ ಯಾವ ಪ್ರಭಾವಿ ಶಾಸಕ, ಸಚಿವನಾದರೂ ಕಿತ್ತೆಸೆಯುತ್ತೇವೆ ಅಂದೆ.‌ ಮುಂದಿನ ಚುನಾವಣೆ ಒಳಗೆ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ‌. ಅವರ ಎಲ್ಲಾ ಹಗರಣಗಳನ್ನು ನಾವು ಬಯಲು ಮಾಡ್ತೇವೆ. ಈ ರಾಷ್ಟ್ರದಲ್ಲಿ ಟಿಪ್ಪು ಸ್ಮರಣೆ ಮಾಡಬೇಕಾ? ಸಾವರ್ಕರ್ ಸ್ಮರಣೆ ಮಾಡಬೇಕಾ, ಇವತ್ತು ಸಾವರ್ಕರ್ ಗೆ ಗೌರವ ಕೊಟ್ಟು ಸುವರ್ಣ ಸೌಧದಲ್ಲಿ ಅವರ ಫೋಟೋ ಹಾಕಿದೆವು. ಲವ್ ಜಿಹಾದ್ ನಿಲ್ಲಿಸಲು ‌ಭಾರತೀಯ ಜನತಾ ಪಾರ್ಟಿ ಬೇಕು. ಲವ್ ಜಿಹಾದ್ ವಿರುದ್ದ ಕಾನೂನನ್ನ ಬಿಜೆಪಿ ಸರ್ಕಾರ ತರುತ್ತೆ‌. ಡಿಕೆಶಿ ಮುಖ್ಯಮಂತ್ರಿ ಆದ್ರೆ ಎಲ್ಲಾ ಭಯೋತ್ಪಾದಕರು ಮತ್ತೆ ರಸ್ತೆ ಗೆ ಬರ್ತಾರೆ. ಉಗ್ರರು, ಪಿಎಫ್ ಐನವರು ಎಲ್ಲರೂ ಮತ್ತೆ ರಸ್ತೆಗೆ ಬರ್ತಾರೆ. ಕಾಂಗ್ರೆಸ್ ಭಯೋತ್ಪಾದಕರ ಪಾರ್ಟಿ, ಭಯೋತ್ಪಾದನೆಗೆ ಕಾಂಗ್ರೆಸ್ ಮತ್ತೊಂದು ಹೆಸರು ಎಂದಿದ್ದಾರೆ.

Latest Videos
Follow Us:
Download App:
  • android
  • ios