ಬೆಂಗಳೂರು, [ಸೆ.23]: ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಾಗಿನಿಂದ ಸಂಚಾರಿ ಪೊಲೀಸ್ ಹಾಗೂ ವಾಹನ ಸವಾರರ ನಡುವೆ ಒಂದಿಲ್ಲೊಂದು ಗಲಾಟೆಗಳು ನಡೆಯುತ್ತಲೇ ಇವೆ. ಇದರ ಮಧ್ಯೆ ವಾಹನ ಸವಾರನೊಬ್ಬ ತನಗೆ ದಂಡ ಹಾಕಿದ ಪೊಲೀಸಪ್ಪನ ವಸ್ತುಗಳನ್ನು ಕದ್ದು ಪರಾರಿಯಾಗಿರುವ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  

ತಾಕತ್ ಇದ್ರೆ ಹಿಡಿರೋ ನನ್ನ..! ಪೊಲೀಸರಿಗೆ ಕಾರ್ ಡ್ರೈವರ್ ಚಾಲೆಂಜ್

ಬೆಂಗಳೂರಿನ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯ PC ಮುಲ್ಲ ಮುಸ್ತಫಾ, ಅಶೋಕ್ ಎನ್ನುವರಿಗೆ ನೋ ಪಾರ್ಕಿಂಗ್ ದಂಡ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಶೋಕ್, ನನಗೆ ಫೈನ್ ಹಾಕ್ತಿಯಾ..? ನಾನ್ಯಾರು ಅಂತ ನಿಂಗೆ ತೋರಿಸ್ತೀನಿ ಎಂದು ಅವಾಜ್ ಹಾಕಿದ್ದಾನೆ.

ಕದ್ದು ‘ಸಾಹೋ‘ ನೋಡಲು ಬಂದವನ ಬದುಕು ಬದಲಿಸಿದ ಹೃದಯವಂತ ಪೊಲೀಸ್

 ಬಳಿಕ ಮುಲ್ಲ ಮುಸ್ತಫಾ ಅವರನ್ನು ವೈ. ಜಿ. ಪಾಳ್ಯ ಪೊಲೀಸ್ ಕ್ವಾಟರ್ಸ್ ವರೆಗೂ ಫಾಲೋ ಮಾಡಿಕೊಂಡು ಬಂದಿದ್ದು, ಅತ್ತ ಮುಸ್ತಫಾ ತಮ್ಮ ಕ್ವಾಟರ್ಸ್ ಒಳಗೆ ಹೋಗುತ್ತಿದ್ದಂತೆಯೇ ಇತ್ತ ಅಶೋಕ್, ಮುಸ್ತಾಫಾ ಬೈಕ್ ನಲ್ಲಿದ್ದ  ರೇನ್‌ ಕೋಟ್‌ ,ಟ್ಯಾಬ್, ಮಾಸ್ಕ್ ಕದ್ದು ಪರಾರಿಯಾಗಿದ್ದಾನೆ. 

ಈ ಬಗ್ಗೆ  ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.