ಲಾಕ್‌ಡೌನ್‌ನಿಂದ ಉಡುಪಿ ಆರ್‌ಟಿಒಗೆ 13 ಕೋಟಿ ರು. ನಷ್ಟ!

ರಾಜ್ಯದಲ್ಲಿಯೇ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ (ರಾಜಸ್ವ)ವನ್ನು ಸಂಗ್ರಹಿಸಿ ನೀಡುತಿದ್ದ ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌.ಟಿ.ಒ.)ಗೆ ಈ ಬಾರಿ ಕೊರೋನಾ ಲಾಕ್‌ಡೌನ್‌ನಿಂದ ಸುಮಾರು 13 ಕೋಟಿ ರು. ನಷ್ಟವಾಗಿದೆ.

13 crore loss to Udupi RTO due to lockdown

ಉಡುಪಿ(ಜೂ.27): ರಾಜ್ಯದಲ್ಲಿಯೇ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ (ರಾಜಸ್ವ)ವನ್ನು ಸಂಗ್ರಹಿಸಿ ನೀಡುತಿದ್ದ ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌.ಟಿ.ಒ.)ಗೆ ಈ ಬಾರಿ ಕೊರೋನಾ ಲಾಕ್‌ಡೌನ್‌ನಿಂದ ಸುಮಾರು 13 ಕೋಟಿ ರು. ನಷ್ಟವಾಗಿದೆ.

ಅಲ್ಲದೆ ಉಡುಪಿ ಆರ್‌​ಟಿಒ ಪ್ರತಿವರ್ಷ ಅತ್ಯುತ್ತಮವಾಗಿ ಗುರಿ ಸಾಧಿಸುವ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ಈ ಬಾರಿ ಲಾಕ್‌ಡೌನ್‌ನ 2 ತಿಂಗಳು ಜಿಲ್ಲೆಯಲ್ಲಿ ವಾಹನಗಳ ನೋಂದಣಿ ಭಾರಿ ಕಡಿಮೆಯಾಗಿದ್ದು, ಈ ಬಾರಿ ಉಡುಪಿ ಆರ್‌​ಟಿಒ ಗುರಿ ಸಾಧಿಸುವಲ್ಲಿಯೂ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ. 2018 - 19ರ ಏಪ್ರಿಲ್‌ ತಿಂಗಳಲ್ಲಿ 11.2 ಕೋಟಿ ರು. (ಗುರಿಯ ಶೇ.95) ಮತ್ತು 2019 - 20ರ ಏಪ್ರಿಲ್‌ ತಿಂಗಳಲ್ಲಿ 10.82 ಕೋಟಿ ರು. (ಶೇ 94) ರಾಜತ್ವ ಸಂಗ್ರಹಿಸಿತ್ತು.

'ಪ್ರಧಾನಿ ಮೋದಿ ಬಿಜೆಪಿ ಸರ್ಕಾರದಿಂದ ದೇಶದಲ್ಲಿ ಐತಿಹಾಸಿಕ ಬದಲಾವಣೆ'

ಆದರೆ ಈ ಬಾರಿ 2020 - 21ರ ಏಪ್ರಿಲ್‌ ತಿಂಗಳಲ್ಲಿ ಕೇವಲ 19.06 ಲಕ್ಷ ರು. (ಶೇ 1.64) ಮಾತ್ರವೇ ಸಂಗ್ರಹವಾಗಿದ್ದರೆ, ಮೇ ತಿಂಗಳಲ್ಲಿ 5.12 ಕೋಟಿ ರು. (ಶೇ 5.12) ಗಳಷ್ಟುರಾಜಸ್ವ ಸಂಗ್ರಹವಾಗಿದೆ. ಇದು ಉಡುಪಿ ಜಿಲ್ಲೆಯ ಆರ್‌​ಟಿಒ ಇತಿಹಾಸದಲ್ಲಿಯೇ ಅತಿ ಕಡಿಮೆ ರಾಜಸ್ವ ಸಂಗ್ರಹವಾಗಿದೆ.

ಶೇ.80 ನೋಂದಣಿ ಕುಸಿ​ತ: 2019ರ ಏಪ್ರಿಲ್‌ನಲ್ಲಿ 1122 ಮತ್ತು ಮೇ ತಿಂಗಳಲ್ಲಿ 2288 ವಾಹನಗಳು ನೋಂದಣಿಯಾಗಿದ್ದರೆ, ಈ ವರ್ಷ ಏಪ್ರಿಲ್‌ ತಿಂಗಳಲ್ಲಿ ಕೇವಲ 155 ವಾಹನಗಳಷ್ಟೇ ನೋಂದಣಿಯಾಗಿವೆ, ಮೇ ತಿಂಗ​ಳಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದು 1233 ವಾಹನಗಳು ನೋಂದಣಿಯಾಗಿವೆ. ಒಟ್ಟಾರೆ ಈ ವರ್ಷ ಜಿಲ್ಲೆಯಲ್ಲಿ ಕೋರೋನಾದ 2 ತಿಂಗಳು ಶೇ.80ರಷ್ಟುವಾಹನ ನೋಂದಣಿಯಲ್ಲಿ ಕೊರತೆಯಾಗಿದೆ. ಸಹಜವಾಗಿಯೇ ರಾಜಸ್ವ ಸಂಗ್ರಹದಲ್ಲಿಯೂ ಕೊರತೆಯಾಗಿದೆ.

ಮನೆ​ಯ​ವ​ರನ್ನು ಕಟ್ಟಿ​ಹಾಕಿ 13 ಲಕ್ಷ ಮೌಲ್ಯದ ನಗ- ನಗದು ದರೋ​ಡೆ

13 ಕೋಟಿ ರು. ಗುರಿ ನಷ್ಟ: ಉಡುಪಿ ಆರ್‌​ಟಿಒ 2018 - 19ರಲ್ಲಿ 135.11 ಕೋಟಿ ರು. (ಶೇ 96.50) ಕೋಟಿ ರುಪಾ​ಯಿ​ಗಳ ರಾಜಸ್ವದ ಗುರಿಯನ್ನು ಸಾಧಿಸಿತ್ತು. 2019 - 20ರಲ್ಲಿ 123 ಕೋಟಿ ರು. (ಶೇ. 87.86) ಗುರಿಯನ್ನು ಸಾಧಿಸಿತ್ತು.

ಆದರೆ 2020- 21ನೇ ಸಾಲಿಗೆ 140.40 ಕೋಟಿ ರು.ಗಳ ಗುರಿಯನ್ನು ಈಗಗಾಲೇ ನಿಗದಿಪಡಿಸಲಾಗಿದೆ. ಅದರಂತೆ ಏಪ್ರಿಲ…, ಮೇ ತಿಂಗಳಲ್ಲಿ 18.00 ಕೋಟಿ ರು. ಸಂಗ್ರಹವಾಗಬೇಕಿತ್ತು. ಆದರೆ ಲಾಕ್‌ಡೌ​ನ್‌​ನಿಂದಾಗಿ ಕೇವಲ 5.31ಕೋಟಿ ರು. (ಶೇ 29.5) ರಾಜಸ್ವ ಮಾತ್ರ ಸಂಗ್ರಹಕ್ಕೆ ಸಾಧ್ಯವಾಗಿದೆ.

ಮುಂದಿನ ತಿಂಗಳಲ್ಲೂ ಗುರಿ ಸಾಧನೆ ಕಷ್ಟ

ಕೊರೋನಾದ ಪರಿಸ್ಥಿತಿ, ಪರಿಣಾಮ ಇನ್ನೂ ಕೊನೆಗೊಂಡಿಲ್ಲದಿರುವುದರಿಂದ ಇನ್ನೂ ಮುಂದಿನ ತಿಂಗಳಲ್ಲಿಯೂ ಗುರಿ ಸಾಧಿಸುವುದು ಕಷ್ಟ, ಆದ್ದರಿಂದ ಒಟ್ಟಾರೆ ಈ ಬಾರಿಯ ಗುರಿ ಸಾಧನೆಯಲ್ಲಿ ಭಾರಿ ಹಿನ್ನಡೆಯಾಗುತ್ತದೆ. ಜೊತೆಗೆ ಸರ್ಕಾರದ ಆದೇಶದಂತೆ ಬಿಎಸ್‌ 4 ವಾಹನಗಳ ನೋಂದಣಿಯನ್ನು ನಿಲ್ಲಿಸಲಾಗಿದೆ. ಇದರಿಂದಲೂ ಸ್ವಲ್ಪಮಟ್ಟಿನ ನಷ್ಟವಾಗುತ್ತಿದೆ ಎಂದು ಉಡುಪಿ ಆರ್‌ಟಿಒ ಅಧಿಕಾರಿ ರಾಮಕೃಷ್ಣ ಹೇಳಿದ್ದಾರೆ.

Latest Videos
Follow Us:
Download App:
  • android
  • ios