'ಪ್ರಧಾನಿ ಮೋದಿ ಬಿಜೆಪಿ ಸರ್ಕಾರದಿಂದ ದೇಶದಲ್ಲಿ ಐತಿಹಾಸಿಕ ಬದಲಾವಣೆ'

ಹಾವೇ​ರಿ​ಯಲ್ಲಿ ಬಿಜೆಪಿ ಓಬಿಸಿ ಮೋಚಾ​ರ್‍ ವಚು​ರ್‍ವಲ್‌ ರ‌್ಯಾಲಿ| ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್‌ ಸರ್ಕಾರ ಮತ ರಾಜಕಾರಣಕ್ಕೋಸ್ಕರ ಹಲವಾರು ಸಮಸ್ಯೆಗಳನ್ನು ಪರಿಹರಿಸದೇ ಇಲ್ಲಿಯವರಿಗೆ ಭಾರತವನ್ನು ಅಭದ್ರ ಸ್ಥಿತಿಯಲ್ಲಿ ಮುನ್ನಡೆಸಿಕೊಂಡು ಬಂದಿತ್ತು| ಪ್ರಧಾನಿ ಮೋದಿ ಸಿಎಎ, ಕಲಂ 370, ತ್ರಿವಳಿ ತಲಾಕ್‌, ಯುಎಪಿಎ ಜಾರಿಗೆ ತರುವ ಮೂಲಕ ನಮಗೆ ಮತ ರಾಜಕೀಯಕ್ಕಿಂತ ದೇಶದ ಭದ್ರತೆ ಹಾಗೂ ಜನರ ಅಭಿವೃದ್ಧಿ ಮುಖ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ|

BJP OBC Morcha State Vice President Nagaraj Talks Over PM Narendra Modi Government

ಹಾವೇರಿ(ಜೂ. 27): ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಹಾವೇರಿ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳ ಓಬಿಸಿ ಮೋರ್ಚಾ ವರ್ಚುವಲ್‌ ರ‌್ಯಾಲಿ ಏರ್ಪಡಿಸಲಾಗಿತ್ತು.

ರ‌್ಯಾಲಿ ಉದ್ದೇಶಿಸಿ ರಾಜ್ಯ ಉಪಾಧ್ಯಕ್ಷ ಡಾ. ಮಾ. ನಾಗರಾಜ ಮಾತನಾಡಿ, 2014ರಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೇರು​ವ ಮೂಲಕ ಭಾರತದಲ್ಲಿ ಐತಿಹಾಸಿಕ ಬದಲಾವಣೆಗಳು ಪ್ರಾರಂಭವಾಗಿವೆ. ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್‌ ಸರ್ಕಾರ ಮತ ರಾಜಕಾರಣಕ್ಕೋಸ್ಕರ ಹಲವಾರು ಸಮಸ್ಯೆಗಳನ್ನು ಪರಿಹರಿಸದೇ ಇಲ್ಲಿಯವರಿಗೆ ಭಾರತವನ್ನು ಅಭದ್ರ ಸ್ಥಿತಿಯಲ್ಲಿ ಮುನ್ನಡೆಸಿಕೊಂಡು ಬಂದಿತ್ತು. ಆದರೆ ಪ್ರಧಾನಿ ಮೋದಿಯವರು ಸಿಎಎ, ಕಲಂ 370, ತ್ರಿವಳಿ ತಲಾಕ್‌, ಯುಎಪಿಎ ಜಾರಿಗೆ ತರುವ ಮೂಲಕ ನಮಗೆ ಮತ ರಾಜಕೀಯಕ್ಕಿಂತ ದೇಶದ ಭದ್ರತೆ ಹಾಗೂ ಜನರ ಅಭಿವೃದ್ಧಿ ಮುಖ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.

'ಯಡಿಯೂರಪ್ಪಗೆ ಧಮ್‌ ಇರೋದಕ್ಕೆ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದು'

ಕೊರೋನಾದಿಂದ ಸಂಕಷ್ಟಕ್ಕೆ ತುತ್ತಾದ ದೇಶದ ಜನರಿಗಾಗಿ 20 ಲಕ್ಷ ಕೋಟಿ ಆತ್ಮ ನಿರ್ಭರ ಭಾರತ ಪ್ಯಾಕೇಜ್‌ ಘೋಷಿಸುವ ಮೂಲಕ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಕಾರ್ಯನಿರ್ವಹಿದ್ದಾರೆ. ಜನರಿಗೆ ಮೂರು ತಿಂಗಳ ಉಚಿತ ಗ್ಯಾಸ್‌, ಆಹಾರ ಸಾಮಗ್ರಿ ಹಾಗೂ ಜನ ಧನ ಖಾತೆ, ಕಾರ್ಮಿಕ, ಚಾಲಕ ಹಾಗೂ ಕಿಸಾನ್‌ ಯೋಜನೆಯ ಮೂಲಕ ಹಣ ಸಂದಾಯ ಮಾಡಿ ಆತ್ಮಸ್ಥೈರ್ಯ ಹೆಚ್ಚಿಸುವ ಮಹತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಅಭಿವೃದ್ಧಿಗೆ 1 ಲಕ್ಷ ಕೋಟಿ ಹಣ ಮೀಸಲಿಡಲಾಗಿದೆ. ಎಂಎಸ್‌ಎಂಇ ಯೋಜನೆಗೆ 3000 ಕೋಟಿ ರು. ಮಂಜೂರು ಮಾಡಲಾಗಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗುತ್ತಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಠವಾಗುತ್ತಿದೆ ಎಂದರು.

ಸಭೆಯಲ್ಲಿ ರಾಜ್ಯ ಪ್ರಧಾನಕಾರ್ಯದರ್ಶಿಗಳಾದ ವರ್ತುರ ಶ್ರೀಧರ ಸಂಘಟನಾತ್ಮಕವಾಗಿ ಮಾರ್ಗದರ್ಶನ ನೀಡಿದರು. ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಚೀನಾ ದೇಶದ ದಾಳಿಯಿಂದ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
 

Latest Videos
Follow Us:
Download App:
  • android
  • ios