ಕರ್ನಾಟಕದಲ್ಲಿ ದಾಖಲೆ ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದ್ದು, ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಹೆಬ್ಬಾಳದ ಒಂದು ಮತಗಟ್ಟೆಯಲ್ಲಿ ಮತದಾನ ಬಾಕಿ ಇದೆ.
ಬೆಂಗಳೂರು (ಮೇ 13) : ಕರ್ನಾಟಕದಲ್ಲಿ ದಾಖಲೆ ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದ್ದು, ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಹೆಬ್ಬಾಳದ ಒಂದು ಮತಗಟ್ಟೆಯಲ್ಲಿ ಮತದಾನ ಬಾಕಿ ಇದೆ.
ಯಡಿಯೂರಪ್ಪ 15ಕ್ಕೆ ದಿಲ್ಲಿಗೆ ಹೋಗ್ತಾರಂತೆ
ಮೇ 13 ರಂದು ಚುನಾವಣಾ ಆಯೋಗ ಎಲ್ಲೆಲ್ಲಿ, ಎಷ್ಟೆಷ್ಟು ಮತದಾನವಾಗಿದೆ ಎಂಬ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಒಟ್ಟು ಶೇ. 72.13ರಷ್ಟು ಮತದಾನವಾಗಿದೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಶೇ. 71.04ರಷ್ಟಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾನವಾಗಿದ್ದು, ಶೇ. 89.97ರಷ್ಟು ದಾಖಲೆ ಮತದಾನವಾಗಿದೆ. ಬೆಂಗಳೂರಿನ ಸಿ.ವಿ.ರಾಮನ್ ನಗರದಲ್ಲಿ ಅತಿ ಕಡಿಮೆ ಶೇ. 48.98ರಷ್ಟು ಮತದಾನವಾಗಿದೆ.
ಸಿದ್ದರಾಮಯ್ಯ ಸಿಎಂ ಆದರೆ ನನ್ನ ಅಭ್ಯಂತರವಿಲ್ಲ: ಪರಮೇಶ್ವರ್
ರಾಜ್ಯದಲ್ಲಿ ನಡೆದ 222 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಶೇಕಡವರು ಮತದಾನವೆಷ್ಟು? ಇಲ್ಲಿದೆ ವಿವರ....













