ಶಿಕಾರಿಪುರ: ಅನೇಕ ಬಾರಿ ರಾಜ್ಯದಲ್ಲಿ ಬಿಜೆಪಿ ಗೆಲುವು ಪಡೆದು ತಾವೇ ಮುಖ್ಯಮಂತ್ರಿಯಾಗುವ ಭರವಸೆ ವ್ಯಕ್ತಪಡಿಸಿದ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. 

ಬಿಜೆಪಿ ಸರ್ಕಾರ ಅಧಿಕಾರಗಳಿಸುವುದು 100ಕ್ಕೆ 100 ನಿಶ್ಚಿತವಾಗಿದ್ದು, 135 ರಿಂದ 150 ಸ್ಥಾನಗಳಲ್ಲಿ ಜಯಗಳಿಸಲಿದೆ. ಇದೇ 15 ರಂದು ದೆಹಲಿಗೆ ತೆರಳಲಿದ್ದು ಪ್ರಧಾನಿ ಮೋದಿ ಮತ್ತಿತರ ಗಣ್ಯರನ್ನು 17 ರಂದು ನಡೆಯಲಿರುವ ಪ್ರಮಾಣ ವಚನ  ಸಮಾರಂಭಕ್ಕೆ ಆಹ್ವಾನಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮತ ಚಲಾಯಿಸಿದ ಬಳಿಕ ಮಾತನಾಡಿದ  ಅವರು, ತಾವು 50 ಸಾವಿರ ಮತಗಳ ಅಂತರದಿಂದ ಜಯಗಳಿಸುವುದಾಗಿ ತಿಳಿಸಿದರು. ಅಲ್ಲದೇ ಇದೇ ವೇಳೆ ಹಣದ ಹೊಳೆ ಹರಿಸುವುದು ಕಾಂಗ್ರೆಸ್ ಸಂಸ್ಕೃತಿ ಎಂದು ಕಿಡಿಕಾರಿದರು.