Asianet Suvarna News Asianet Suvarna News

ಸಿದ್ದರಾಮಯ್ಯ ಸಿಎಂ ಆದರೆ ನನ್ನ ತಕರಾರಿಲ್ಲ : ಪರಮೇಶ್ವರ್

ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾದರೆ ನನ್ನ ತಕರಾರೇನೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ಸ್ಪಷ್ಟಪಡಿಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈಗ ಅವರೇ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಚುನಾವಣೆ ಎದುರಿಸುವ ಸಿದ್ದರಾಮಯ್ಯ ಸಹಜವಾಗಿ ನಾನೇ ಮುಖ್ಯಮಂತ್ರಿ ಅಂತಾ ಹೇಳಿದ್ದಾರೆ. ನನ್ನದು ಹಾಗೂ ಬೇರೆಯಾರದ್ದೂ ತಕರಾರಿಲ್ಲ’ ಎಂದರು. 

Congress High Command will decide CM

ತುಮಕೂರು: ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾದರೆ ನನ್ನ ತಕರಾರೇನೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ಸ್ಪಷ್ಟಪಡಿಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈಗ ಅವರೇ ಮುಖ್ಯಮಂತ್ರಿ, ಮುಖ್ಯಮಂತ್ರಿ ಯಾಗಿ ಚುನಾವಣೆ ಎದುರಿಸುವ ಸಿದ್ದರಾಮಯ್ಯ ಸಹಜವಾಗಿ ನಾನೇ ಮುಖ್ಯಮಂತ್ರಿ ಅಂತಾ ಹೇಳಿದ್ದಾರೆ.  ನನ್ನದು ಹಾಗೂ ಬೇರೆಯಾರದ್ದೂ ತಕರಾರಿಲ್ಲ’ ಎಂದರು. 

‘ಸಿಎಂ ಆಯ್ಕೆ ಕುರಿತಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಅಧ್ಯಕ್ಷನಾಗಿ ಸ್ವತಃ ನಾನೇ ಕರೆಯುತ್ತೇನೆ. ಆ ಸಭೆಗೆ ಎಐಸಿಸಿ ವೀಕ್ಷಕರು ಬರುತ್ತಾರೆ. ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿ ನಿರ್ಧಾರ ಅಲ್ಲಿ ಆಗುತ್ತೆ. ಅದು ಬ್ಯಾಲೆಟ್ ಪೇಪರ್ ಮೂಲಕನಾದರೂ ಆಗಬಹುದು, ಅಥವಾ ವೈಯಕ್ತಿಕ ಅಭಿಪ್ರಾಯ ಪಡೆದೂ ಆಗಬಹುದು. ಇಲ್ಲದಿದ್ದರೆ ಒಮ್ಮತದ ಅಭಿಪ್ರಾಯ ಪಡೆದು ವೀಕ್ಷಕರು ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ಪರಮೇಶ್ವರ್ ತಿಳಿಸಿದರು. 

ಮುಖ್ಯಮಂತ್ರಿಯಾಗುವ ಸಾಮರ್ಥ್ಯ ಉಳ್ಳವರು ಕಾಂಗ್ರೆಸ್‌ನಲ್ಲಿ ಅರ್ಧ ಡಜನ್ ಇದ್ದಾರೆ. ಎಲ್ಲವನ್ನೂ ಶಾಸಕಾಂಗ ಸಭೆ ತೀರ್ಮಾನಿಸುತ್ತದೆ ಎಂದು ಅವರು ಹೇಳಿದರು. ಹಾಗಾದರೆ ದಲಿತ ಮುಖ್ಯಮಂತ್ರಿ ಹಿನ್ನೆಲೆಗೆ ಸರಿಯುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ‘ದಲಿತ ಸಿಎಂ ಬೇಕು ಎಂಬುದು ಸಮುದಾಯದ ಒತ್ತಾಯ. ಹೀಗಾಗಿ ಇದೆಲ್ಲವನ್ನು ಹೈಕಮಾಂಡ್  ಗಮನದಲ್ಲಿಟ್ಟುಕೊಂಡಿರುತ್ತದೆ. ಕಣ್ಣು ಮುಚ್ಚಿಕೊಂಡು ತೀರ್ಮಾನ ಮಾಡೋದಿಲ್ಲ’ ಎಂದರು. ಈ ಬಾರಿಯೂ ನಮಗೆ 124 ಸ್ಥಾನ ಬರಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios