ಶನಿವಾರ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್ ಪ್ರಕಟವಾಗಿದ್ದು, ಯಾವ್ಯಾವ ಸಮೀಕ್ಷೆ ಏನೇನು ಹೇಳಿದೆ? ಇಲ್ಲಿದೆ ಸಮಗ್ರ ವಿವರ. 

ಬೆಂಗಳೂರು [ಮೇ.11]: ಶನಿವಾರ ನಡೆದ ಕರ್ನಾಟಕ ವಿಧಾನ ಸಭೆ ಚುನಾವಣೆಯ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಟವಾಗಿದ್ದು, ಇಂಡಿಯಾ ಟುಡೇ ಸಮೀಕ್ಷೆಯು ಕಾಂಗ್ರೆಸ್‌ಗೆ ಸರಳ ಬಹುಮತ ಬರುತ್ತದೆ ಎಂದು ಹೇಳಿದ್ದರೆ, , ಜನ್ ಕೀ ಬಾತ್ ಸಮೀಕ್ಷೆಯು ಬಿಜೆಪಿಗೆ ಸರಳ ಬಹುಮತದ ಸುಳಿವು ನೀಡಿದೆ. ಅಧಿಕಾರದ ಗದ್ದುಗೆ ಯಾರಿಗೆ? ಯಾವ್ಯಾವ ಪಕ್ಷ ಎಷ್ಟೆಷ್ಟು ಸ್ಥಾನ ಪಡೆಯಬಹುದು? ಯಾರಿಗೆ ಸರಳ ಬಹುಮತ ಸಿಗಬಹುದು? ಇಲ್ಲಿದೆ ಎಕ್ಸಿಟ್ ಪೋಲ್‌ಗಳ ವಿವರ...

ಟುಡೇಸ್ ಚಾಣಕ್ಯ ಎಕ್ಸಿಟ್ ಪೋಲ್:

ಪಕ್ಷಸ್ಥಾನ
ಕಾಂಗ್ರೆಸ್73
ಬಿಜೆಪಿ120
ಜೆಡಿಎಸ್26
ಪಕ್ಷೇತರರು3

ಜನ್ ಕೀ ಬಾತ್ ಸಮೀಕ್ಷೆ 

ಪಕ್ಷಸ್ಥಾನಮತ ಪ್ರಮಾಣ
ಕಾಂಗ್ರೆಸ್73-8238.25%
ಬಿಜೆಪಿ95-11436.50%
ಜೆಡಿಎಸ್32-4322.50%
ಪಕ್ಷೇತರರು2--3

ಇಂಡಿಯಾ ಟುಡೇ ಎಕ್ಸಿಟ್ ಪೋಲ್ 

ಪಕ್ಷಸ್ಥಾನ
ಕಾಂಗ್ರೆಸ್106-118
ಬಿಜೆಪಿ79-92
ಜೆಡಿಎಸ್22-30
ಪಕ್ಷೇತರರು1-4

ಟೈಮ್ಸ್ ನೌ- ವಿಎಮ್‌ಆರ್- ಚಾಣಕ್ಯ ಎಕ್ಸಿಟ್ ಪೋಲ್

ಪಕ್ಷಸ್ಥಾನ
ಕಾಂಗ್ರೆಸ್90-103
ಬಿಜೆಪಿ80-93
ಜೆಡಿಎಸ್31-39
ಪಕ್ಷೇತರರು4

ಎನ್‌ಡಿಟಿವಿ ಎಕ್ಸಿಟ್ ಪೋಲ್ 

ಪಕ್ಷಸ್ಥಾನ
ಕಾಂಗ್ರೆಸ್90-103
ಬಿಜೆಪಿ80-93
ಜೆಡಿಎಸ್31-39
ಪಕ್ಷೇತರರು 2-4

ರಿಪಬ್ಲಿಕ್ ಟಿವಿ, ಏಬಿಪಿ ನ್ಯೂಸ್ ಸೀವೋಟರ್ ಎಕ್ಸಿಟ್ ಪೋಲ್

ಪಕ್ಷಸ್ಥಾನ
ಕಾಂಗ್ರೆಸ್97-109
ಬಿಜೆಪಿ87-99
ಜೆಡಿಎಸ್21-30
ಪಕ್ಷೇತರರು1--8

ಇಂದು ರಾಜ್ಯದ 222 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಮೃತಪಟ್ಟ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ. ಆದರೆ ಹೊಸ ಮತದಾನ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.

ಮತಚೀಟಿ ಅಕ್ರಮ ಕಂಡುಬಂದಿರುವ ಹಿನ್ನಲೆಯಲ್ಲಿ ಆರ್‌.ಆರ್. ನಗರದ ಚುನಾವಣೆಯನ್ನು ಆಯೋಗ ಚುನಾವಣೆಯನ್ನು ಮೇ.28ಕ್ಕೆ ಮುಂದೂಡಿದೆ.