ಅಂತೂ ಇಂತೂ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶಗಳು ಹೊರ ಬಿದ್ದಿದೆ. ಬಹುತೇಕ ಸಮೀಕ್ಷೆಗಳಂತೆ ರಾಜ್ಯದಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗಲಿಲ್ಲ. ಇದೀಗ ಮೂರನೇ ಸ್ಥಾನಕ್ಕೆ ತೃಪ್ತಿ ಪಡುತ್ತಿರುವ ಜೆಡಿಎಸ್, ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸುತ್ತಿದ್ದು, ಕರ್ನಾಟಕ ರಾಜಕೀಯ ರೋಚಕ ತಿರುವು ಪಡೆದುಕೊಂಡಿದೆ.

ಬೆಂಗಳೂರು: ಅಂತೂ ಇಂತೂ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶಗಳು ಹೊರ ಬಿದ್ದಿದೆ. ಬಹುತೇಕ ಸಮೀಕ್ಷೆಗಳಂತೆ ರಾಜ್ಯದಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗಲಿಲ್ಲ.

ಕೆಲವೇ ಗಂಟೆಗಳಲ್ಲಿ ನಡೆದ ರಾಜಕೀಯ ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್‌ನೊಂದಿಗೆ ಕೈ ಜೋಡಿಸಲು ನಿರ್ಧರಿಸಿ, ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾಗಿದೆ. ಇತ್ತ ಬಿಜೆಪಿಯೂ ಸರಕಾರ ರಚಿಸಲು ಉತ್ಸುಕವಾಗಿದ್ದು, ಏನು ಮಾಡಬಹುದೆಂದು ತಿಳಿಯದೇ ಚಡಪಡಿಸುತ್ತಿದೆ. ಇಂದು ಸಂಜೆ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು, ಏನ್ ಮ್ಯಾಜಿಕ್ ಮಾಡ್ತಾರೆ ನೋಡಬೇಕು.

ಹಾವೇರಿಯಲ್ಲಿ ಮತದಾನರ ಒಲವು ಹೇಗಿದೆ?

ಕಾಂಗ್ರೆಸ್-ಜೆಡಿಎಸ್ ಷರತ್ತುಗಳೇನು?

- ಸಿದ್ದರಾಮಯ್ಯ ಸರಕಾರದ ನಿರ್ಧಾರಗಳನ್ನ ಪ್ರಶ್ನಿಸಬಾರದು.
- ಡಿಸಿಎಂ ಆಗಿ ಪರಮೇಶ್ವರ್ ಅವರಿಗೆ ಸ್ಥಾನ ನೀಡಲು ಆಗ್ರಹಿಸಿದ ಕಾಂಗ್ರೆಸ್. ಮೊದಲು ಬೇಡವೆಂದು, ನಂತರ ತಣ್ಣಗಾದ ಎಚ್.ಡಿ.ಕುಮಾರಸ್ವಾಮಿ. 
- ಕುಮಾರಸ್ವಾಮಿ ಪ್ರಮುಖ ಖಾತೆಗಳ ಹಂಚಿಕೆ ಕುಮಾರಸ್ವಾಮಿ ನಿರ್ಧಾರ ಕ್ಕೆ ಬಿಟ್ಟದ್ದು..! 
- ಜೆಡಿಎಸ್‌ ತೊರೆದು, ಕಾಂಗ್ರೆಸ್‌ಗೆ ಸೇರಿ ಬೆಂಗಳೂರಿನ ಚಾಮರಾಜಪೇಟೆಯಿಂದ ಗೆದ್ದ ಜಮೀರ್ ಅಹ್ಮದ್‌ಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡಬಾರದು, ಎಂದು ಖಡಕ್ ವಾರ್ನ್ ಮಾಡಿದ ಕುಮಾರಸ್ವಾಮಿ ಆ್ಯಂಡ್ ಟೀಂ.
- ಕುಮಾರಸ್ವಾಮಿ ವಿರುದ್ದ ಮಾತನಾಡಬಾರದು. ಮಾತನಾಡಿದರೆ ಅದಕ್ಕೆ ಕಾಂಗ್ರೇಸ್ ಪಕ್ಷವೇ ಹೊಣೆ, ಎಂದು ಜೆಡಿಎಸ್.

ಬಿಜೆಪಿ ಭದ್ರಕೋಟೆಯಲ್ಲಿ ಅರಳಿದ ಕಮಲ