ಬಿಜೆಪಿ ಭದ್ರ ಕೋಟೆಯಾಗಿರುವ ದಕ್ಷಿಣ ಕನ್ನಡ ಭಾಗದಲ್ಲಿ ಈ ಬಾರಿ ಒಟ್ಟು 8 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಂಡಿದೆ. ಇಲ್ಲಿ ನಡೆದ ಕೋಮು ಸಂಘರ್ಷಗಳಲ್ಲಿ  ಕಾಂಗ್ರೆಸ್ ಸರ್ಕಾರದ ಧೋರಣೆ, ನಡೆದುಕೊಂಡ ರೀತಿ ಜನರು ಬಿಜೆಪಿಯತ್ತ ವಾಲಲು ಕಾರಣ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ.

ಮಂಗಳೂರು (ಮೇ. 15): ಬಿಜೆಪಿ ಭದ್ರ ಕೋಟೆಯಾಗಿರುವ ದಕ್ಷಿಣ ಕನ್ನಡ ಭಾಗದಲ್ಲಿ ಈ ಬಾರಿ ಒಟ್ಟು 8 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಂಡಿದೆ. ಇಲ್ಲಿ ನಡೆದ ಕೋಮು ಸಂಘರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ಧೋರಣೆ, ನಡೆದುಕೊಂಡ ರೀತಿ ಜನರು ಬಿಜೆಪಿಯತ್ತ ವಾಲಲು ಕಾರಣ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ದಕ್ಷಿಣ ಕನ್ನಡ ಬಿಜೆಪಿ ಪ್ರಾಬಲ್ಯವಿರುವ ಭಾಗವಾಗಿರುವುದರಿಂದ ಗೆಲ್ಲಲು ಸುಲಭವಾಯಿತು ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರ.

ಇಂಟರೆಸ್ಟಿಂಗ್ ವಿಚಾರ ಎಂದರೆ 2013 ರ ಚುನಾವಣೆಯಲ್ಲಿ ಕಾಂಗ್ರೆಸ್ 7 ಸ್ಥಾನಗಳನ್ನು ಪಡೆದು ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೆ ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ ಈ ಬಾರಿ ಚುನಾವಣೆಯಲ್ಲಿ ಲೆಕ್ಕಾಚಾರ ತಲೆಕೆಳಗಾಗಿದೆ. 

ದಕ್ಷಿಣ ಕನ್ನಡ ಒಟ್ಟು ಕ್ಷೇತ್ರಗಳು 08 

ಕ್ಷೇತ್ರ ಅಭ್ಯರ್ಥಿಗಳು ಗೆದ್ದವರು ಮತಗಳ ಅಂತರ 

ಮಂಗಳೂರು ನಗರ ಯು ಟಿ ಖಾದರ್ ಕಾಂಗ್ರೆಸ್ 19,739

ಮಂಗಳೂರು ಉತ್ತರ ಡಾ. ಭರತ್ ಶೆಟ್ಟಿ ಬಿಜೆಪಿ 26,648 

ಮಂಗಳೂರು ದಕ್ಷಿಣ ವೇದವ್ಯಾಸ ಬಿಜೆಪಿ 16, 075 

ಮೂಡಬಿದ್ರೆ ಉಮಾನಾಥ್ ಕೋಟ್ಯಾನ್ ಬಿಜೆಪಿ 29,799

ಪುತ್ತೂರು ಸಂಜೀವ್ ಮಟ್ಟಂದೂರು ಬಿಜೆಪಿ 19,477

ಸುಳ್ಯ ಎಸ್ ಅಂಗಾರ ಬಿಜೆಪಿ 12,512 

ಬಂಟ್ವಾಳ ರಾಜೇಶ್ ನಾಯ್ಕ್ ಬಿಜೆಪಿ 15,971

ಬೆಳ್ತಂಗಡಿ ಹರೀಶ್ ಪೂಂಜಾ ಬಿಜೆಪಿ 22, 974