ಬ್ಯಾಲೇಟ್ ಪೇಪರ್ ಆಗಿದ್ದರೆ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಬರುತ್ತಿತ್ತು

Congress again blames EVMs for loosing in Karnataka Assembly election
Highlights

ಮತ್ತೊಮ್ಮೆ ಸರಕಾರ ರಚಿಸುವ ಉತ್ಸಾಹದಲ್ಲಿದ್ದ ಕಾಂಗ್ರೆಸ್‌ಗೆ ಕರ್ನಾಟಕ ವಿಧಾನಸಭೆ ಫಲಿತಾಂಶ ನಿರಾಶೆ ಉಂಟು ಮಾಡಿದೆ. ಕಡಿಮೆ ಸ್ಥಾನಗಳನ್ನು ಗೆಲ್ಲಲು ಸದಾ ವಿದ್ಯುನ್ಮಾನ ಮತಯಂತ್ರಗಳನ್ನೇ ದೂರುವ ಕಾಂಗ್ರೆಸ್, ಈ ಸೋಲಿಗೆ ಅದನ್ನೇ ದೂಷಿಸುತ್ತಿದೆ.

ಬೆಂಗಳೂರು: ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ದರೂ, ಮ್ಯಾಜಿಕ್ ನಂಬರ್ ಮುಟ್ಟುವಲ್ಲಿ ವಿಫಲವಾಗಿದೆ. ನಿರೀಕ್ಷಿತ ಗೆಲವು ಸಾಧಿಸುವಲ್ಲಿ ವಿಫಲವಾದರೆ, ಕಾಂಗ್ರೆಸ್ ವಿದ್ಯುನ್ಮಾನ ಮತಯಂತ್ರವೇ ಕಾರಣವೆಂದು ಹೇಳುತ್ತಿದೆ.

ಮಂಡ್ಯದಲ್ಲಿ ಜೆಡಿಎಸ್ ಫುಲ್ ಸ್ವೀಪ್

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಸರಕಾರ ರಚಿಸುವಷ್ಟು ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಇಲ್ಲಿಯೂ 'ಬ್ಯಾಲೇಟ್ ಶೀಟ್ ಬಳಸಿದರೆ, ಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳಬಹುದಿತ್ತು. ಇವಿಎಂ ಬಗ್ಗೆ ನಮಗೆ ಅನುಮಾನಗಳಿವೆ,' ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಕಾಂಗ್ರೆಸ್ ಮೈತ್ರಿಗೆ ಎಚ್ಡಿಕೆ ಒಪ್ಪಿಗೆ

'ಸೋಲಿನ ಹೊಣೆಯನ್ನು ಕಾಂಗ್ರೆಸ್‌ನ ಎಲ್ಲ ನಾಯಕರೂ ಹೊರಬೇಕು. ಕುಮಾರಸ್ವಾಮಿ ಅವರಿಗೆ ಅದೃಷ್ಟ ಒಲಿದು ಬಂದಿದೆ. ಅದನ್ನು ಅವರು ಸದುಪಯೋಗ ಪಡಿಸಿಕೊಳ್ಳಬೇಕು. ಕಾಂಗ್ರೆಸ್‌ಗೆ ಡಿಸಿಎಂ ಹುದ್ದೆ ಕೊಡುವ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಜೆಡಿಎಸ್ ಬಿಜೆಪಿ 'ಬಿ' ಟೀಂ ಎಂದು ಎಲ್ಲಿಯೂ ಹೇಳಿಲ್ಲ. ದೇವೇಗೌಡರ ಬಗ್ಗೆ ಹಗುರವಾಗಿ ಎಲ್ಲಿಯೂ ಮಾತಾಡಿಲ್ಲ. ದೇವೇಗೌಡರು ಯಾವಾಗಲೂ ಹೇಳ್ತಿದ್ರು. ಎಲ್ಲದಕ್ಕೂ ಅದೃಷ್ಟ ಕೂಡಿ ಬರಬೇಕೆಂದು. ಈಗ ಅವರ ಮಗನಿಗೆ ಅದೃಷ್ಡ ಕೂಡಿ ಬಂದಿದೆ. ಬಿಜೆಪಿಗೆ ಬಹುಮತವಿಲ್ಲ,' ಎಂದು ಸುವರ್ಣ ನ್ಯೂಸ್‌ಗೆ ಹೇಳಿದ್ದಾರೆ.

loader