AI Replacing Engineers: ಇಂದು ಐಟಿ ಉದ್ಯಮದಲ್ಲಿ ಸಾಕಷ್ಟು ಉದ್ಯೋಗ ಕಡಿತ ಆಗುತ್ತಿವೆ. ಕೆಲಸ ಸಿಗೋದು ಕಷ್ಟ ಆಗಿದೆ. ಹೀಗಿರುವಾಗ ಇಂಜಿನಿಯರ್‌ಗಳ ಕಥೆ ಏನು? ಎಐ ತಂತ್ರಜ್ಞಾನದಿಂದ ಮುಂದೆ ಏನಾಗುವುದು?

AI replacing engineers: ಇಂಜಿನಿಯರ್‌ ಎಂದರೆ ಸಿಕ್ಕಾಪಟ್ಟೆ ಒಳ್ಳೆಯ ಸಂಬಳ ಸಿಗುತ್ತದೆ, ಬೇಡಿಕೆ ಇರುತ್ತದೆ ಎಂದುಕೊಳ್ಳುವ ಕಾಲವಿತ್ತು. ಈಗ ಹಾಗಿಲ್ಲ, ತಿಂಗಳಿಗೆ 15-20 ಸಾವಿರ ರೂಪಾಯಿ ಸಿಗೋದು ಕಷ್ಟ ಆಗಿದೆ. ಕಂಪೆನಿಗಳು ಕ್ಯಾಂಪಸ್‌ ಸೆಲೆಕ್ಷನ್‌ಗೆ ಬರುತ್ತಿಲ್ಲ. ಇನ್ನು AI ಬಂದು ಸಾಕಷ್ಟು ಉದ್ಯೋಗಗಳು ಕಡಿತ ಆಗಿವೆ.

ಈಗಾಗಲೇ AI ಕಾರಣಕ್ಕೆ ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಎಷ್ಟೋ ಲಕ್ಷ ಉದ್ಯೋಗಗಳು ಕಡಿತ ಆಗಿವೆ. ಹಾಗಾದರೆ ಮುಂದೆ ಏನು? ಅತಿ ಹೆಚ್ಚು ಪ್ಯಾಕೇಜ್‌ ಹೊಂದಿರುವವರು ಏನು ಮಾಡಬೇಕು? ಇಂಜಿನಿಯರಿಂಗ್‌ ಓದಿರುವವರು ಏನು ಮಾಡಬೇಕು?

ಇಂಜಿನಿಯರ್‌ಗಳ ಮಾತುಕತೆ

ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್, ಅವರ ಮೇಲಧಿಕಾರಿ (Skip Manager) ಲಿಫ್ಟ್‌ನಲ್ಲಿ 2 ನಿಮಿಷಗಳ ಕಾಲ ಮಾತನಾಡಿಕೊಂಡಿದ್ದಾರೆ. ಇದೀಗ ಈ ವಿಷಯ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಯಾಗಿದೆ. ಮುಂದೆ ಇಂಜಿನಿಯರ್ಸ್‌ ಕಥೆ ಏನು? AI ಇಷ್ಟು ಪವರ್‌ಫುಲ್ ಆಗಿ ಬೆಳೆದು, ಕೋಡ್ (Code) ಬರೆಯುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ.

AI ಒಳ್ಳೆಯ ಟೂಲ್‌ ಆದರೂ ಕೂಡ ಅದಕ್ಕೊಂದು ಮಿತಿ ಇದೆ. AI ಬರೆದ ಕೋಡ್ ಪರಿಶೀಲಿಸಲು ಒಬ್ಬ ಇಂಜಿನಿಯರ್ ಬೇಕೇ ಬೇಕು. ಇಂಜಿನಿಯರ್ ಮಾತನ್ನು ತಳ್ಳಿಹಾಕಿದ ಮ್ಯಾನೇಜರ್ ನಗುತ್ತಾ, "ಅದೂ ಸುಳ್ಳು, ಶೀಘ್ರದಲ್ಲೇ ಯಾವುದೇ ವ್ಯಕ್ತಿಯ ಸಹಾಯ ಇಲ್ಲದೆ, ಕೇವಲ AI ಸಂಪೂರ್ಣ ಸಾಫ್ಟ್‌ವೇರ್ ಫೀಚರ್‌ಗಳನ್ನು ಸೃಷ್ಟಿ ಮಾಡಲಿದೆ" ಎಂದು ಹೇಳಿದ್ದಾರೆ.

"ಇಂದಿನ ದಿನಗಳಲ್ಲಿ ಕಂಪನಿಗಳಿಗೆ ನಮ್ಮ ಮೇಲಿರುವ ಅವಲಂಬನೆ ಮತ್ತು ನಮಗಿರುವ ಮೌಲ್ಯ ಕಡಿಮೆಯಾಗುತ್ತಿದೆ ಎಂಬುದಕ್ಕೆ ಅವರ ಆಲೋಚನೆಯೇ ಸಾಕ್ಷಿ" ಎಂದು ಸಾಫ್ಟ್‌ವೇರ್‌ ಇಂಜಿನಿಯರ್‌ ಹೇಳಿದ್ದಾರೆ.

ಇದೊಂದು ವ್ಯಕ್ತಿಯ ಅನುಭವ, ಆದರೆ ಐಟಿ ಲೋಕದಲ್ಲಿ ಹೆದರಿಕೆ ಹುಟ್ಟಿಸಿದೆ. AI ತಂತ್ರಜ್ಞಾನ ಬೆಳೆದಂತೆ ಹೆಚ್ಚಿನ ಸಂಬಳ ಕೊಡೋದು ಬೇಕಿಲ್ಲ. ಕಂಪನಿಗಳು ಮನುಷ್ಯರ ಶ್ರಮಕ್ಕೆ ಬೆಲೆ ಕೊಡುತ್ತವೆಯಾ? ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.