Asianet Suvarna News Asianet Suvarna News

UPSC Recruitment 2022: ವಿವಿಧ 67ಹುದ್ದೆಗಳಿಗೆ ಯುಪಿಎಸ್‌ಸಿ ನೇಮಕಾತಿ

ಕೇಂದ್ರ ಲೋಕಸೇವಾ ಆಯೋಗ ಖಾಲಿ ಇರುವ ವಿವಿಧ 67 ಹುದ್ದೆಗಳ  ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನ  ಮೇ.12  ಕೊನೆಯ ದಿನವಾಗಿದೆ.

Union Public Service Commission Recruitment 2022 notification for 67 various post gow
Author
Bengaluru, First Published Apr 26, 2022, 3:04 PM IST

ಬೆಂಗಳೂರು (ಏ.26): ಕೇಂದ್ರ ಲೋಕಸೇವಾ ಆಯೋಗ (Union Public Service Commission- UPSC) ಖಾಲಿ ಇರುವ ವಿವಿಧ ಹುದ್ದೆಗಳ  ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಸಹಾಯಕ ರಸಾಯನಶಾಸ್ತ್ರಜ್ಞ (Assistant Chemist), ಜಿಯೋಫಿಸಿಸ್ಟ್  (Geophysicist) ಸೇರಿ ಒಟ್ಟು 67 ವಿವಿಧ ಹುದ್ದೆಗಳು ಖಾಲಿ ಇದ್ದು,  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ.12 ಆಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ upsc.gov.in ಗೆ ಭೇಟಿ ನೀಡಲು ಕೋರಲಾಗಿದೆ. https://www.upsconline.nic.in/  ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಒಟ್ಟು 67 ಹುದ್ದೆಗಳ ಮಾಹಿತಿ ಇಂತಿದೆ
ಸಹಾಯಕ ರಸಾಯನಶಾಸ್ತ್ರಜ್ಞ (Assistant Chemist): 22 ಹುದ್ದೆಗಳು
ಸಹಾಯಕ ಭೂಭೌತಶಾಸ್ತ್ರಜ್ಞ (Posts
Assistant Geophysicist): 40 ಹುದ್ದೆಗಳು 
ಸಹಾಯಕ ನಿರ್ದೇಶಕ (Posts
Assistant Director): 1 ಹುದ್ದೆ
ಹಿರಿಯ ವೈಜ್ಞಾನಿಕ ಅಧಿಕಾರಿ (Senior Scientific Officer): 1 ಹುದ್ದೆ
ಹಿರಿಯ ಉಪನ್ಯಾಸಕರು (Senior Lecturer): 1 ಹುದ್ದೆ
ಉಪ ವಿಭಾಗೀಯ ಇಂಜಿನಿಯರ್ (
Sub Divisional Engineer): 2 ಹುದ್ದೆಗಳು

ಹೂಡಿಕೆ ಇದ್ದರೂ JAMMU AND KASHMIRದಲ್ಲಿ ನಿರುದ್ಯೋಗ ಏಕೆ ಹೆಚ್ಚಿದೆ?

ಶೈಕ್ಷಣಿಕ ವಿದ್ಯಾರ್ಹತೆ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.

ಸಹಾಯಕ ರಸಾಯನಶಾಸ್ತ್ರಜ್ಞ ಹುದ್ದೆಗೆ ಕೆಮಿಕಲ್ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮಾಡಿರಬೇಕು.
ಸಹಾಯಕ ಭೂಭೌತಶಾಸ್ತ್ರಜ್ಞ ಹುದ್ದೆಗೆ  B.E, ಎಲೆಕ್ಟ್ರಾನಿಕ್ಸ್ ಅಥವಾ ಸಂವಹನದಲ್ಲಿ AMIE, ಸ್ನಾತಕೋತ್ತರ ಪದವಿ ಮಾಡಿರಬೇಕು.
ಸಹಾಯಕ ನಿರ್ದೇಶಕ ಹುದ್ದೆಗೆ ಪದವಿ, ಸ್ನಾತಕೋತ್ತರ ಪದವಿ ಮಾಡಿರಬೇಕು.
ಹಿರಿಯ ವೈಜ್ಞಾನಿಕ ಅಧಿಕಾರಿ ಹುದ್ದೆಗೆ  ಪದವಿ, ಸ್ನಾತಕೋತ್ತರ ಪದವಿ ಮಾಡಿರಬೇಕು.
ಹಿರಿಯ ಉಪನ್ಯಾಸಕರು (ಫೊರೆನ್ಸಿಕ್ ಮೆಡಿಸಿನ್) ಹುದ್ದೆಗೆ ಎಂ.ಡಿ ಮಾಡಿರಬೇಕು.
ಉಪ ವಿಭಾಗೀಯ ಇಂಜಿನಿಯರ್  ಹುದ್ದೆಗೆ ಸಿವಿಲ್ ಎಂಜಿನಿಯರಿಂಗ್ ಪದವಿ ಮಾಡಿರಬೇಕು.

ವಯೋಮಿತಿ:  ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವಿದ್ಯಾರ್ಹತೆ ನಿಗದಿಯಾಗಿದೆ.
ಸಹಾಯಕ ರಸಾಯನಶಾಸ್ತ್ರಜ್ಞ: ಗರಿಷ್ಠ 30 ವರ್ಷ
ಸಹಾಯಕ ಭೂಭೌತಶಾಸ್ತ್ರಜ್ಞ:  ಗರಿಷ್ಠ  30 ವರ್ಷ
ಸಹಾಯಕ ನಿರ್ದೇಶಕ:  ಗರಿಷ್ಠ 40 ವರ್ಷ
ಹಿರಿಯ ವೈಜ್ಞಾನಿಕ ಅಧಿಕಾರಿ:  ಗರಿಷ್ಠ 35 ವರ್ಷ
ಹಿರಿಯ ಉಪನ್ಯಾಸಕರು:  ಗರಿಷ್ಠ  50 ವರ್ಷ
ಉಪ ವಿಭಾಗೀಯ ಇಂಜಿನಿಯರ್:  ಗರಿಷ್ಠ 35 ವರ್ಷ

ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು Supreme Court

ಅರ್ಜಿ ಶುಲ್ಕ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ ₹25 ಅರ್ಜಿ ಶುಲ್ಕ ಪಾವತಿಸಬೇಕು. ಇತರ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ವೈದ್ಯಕೀಯ ಮಾನದಂಡಗಳ ಪರೀಕ್ಷೆಗಳು, ಸಂದರ್ಶನ, ವ್ಯಕ್ತಿತ್ವ ಪರೀಕ್ಷೆ. ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ ವಿವರ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ಮಾಸಿಕ ವೇತನ ದೊರೆಯಲಿದೆ.

 

Follow Us:
Download App:
  • android
  • ios