ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು Supreme Court
ಮುಂಬರುವ ಶೈಕ್ಷಣಿಕ ವರ್ಷಕ್ಕೆ ಕೇಂದ್ರೀಯ ವಿದ್ಯಾಲಯದಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ ಆರು ವರ್ಷಗಳ ವಯಸ್ಸಿನ ಮಾನದಂಡವನ್ನು ಪ್ರಶ್ನಿಸಿ ಪೋಷಕರ ಗುಂಪು ಮಾಡಿದ ಮೇಲ್ಮನವಿಯನ್ನು ಪೀಠವು ವಿಚಾರಣೆ ನಡೆಸಿ, ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಶಾಲೆಗೆ ಕಳುಹಿಸಬಾರದು ಎಂದಿದೆ.
ನವದೆಹಲಿ(ಎ.26): ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಶಾಲೆಗೆ ಕಳುಹಿಸಬಾರದು ಎಂದು ಸೋಮವಾರ ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಶಾಲಾ ಶಿಕ್ಷಣದ (School education) ಬಗ್ಗೆ ಪೋಷಕರ ಆತಂಕವನ್ನು ಕಠೋರವಾಗಿ ಪರಿಗಣಿಸಿರುವ ಸುಪ್ರೀಂ ಮಕ್ಕಳ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಚಿಕ್ಕ ವಯಸ್ಸಿನಲ್ಲೇ ಶಾಲೆಗಳಿಗೆ ಕಳುಹಿಸಬಾರದು ಎಂದಿದೆ.
ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಲ್ಲಿ ಒಂದು ರೀತಿಯ ಧಾವಂತವಿದೆ. ಪಾಲಕರು ತಮ್ಮ ಮಕ್ಕಳನ್ನು ಎರಡು ವರ್ಷ ವಯಸ್ಸಾದ ತಕ್ಷಣ ಶಾಲೆಗೆ ಕಳುಹಿಸಲು ಬಯಸುತ್ತಾರೆ. ಇದು ಅವರ ಮಾನಸಿಕ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದ್ರೇಶ್ ಅವರ ಪೀಠ ಟೀಕೆ ವ್ಯಕ್ತಪಡಿಸಿದೆ.
ಮುಂಬರುವ ಶೈಕ್ಷಣಿಕ ವರ್ಷಕ್ಕೆ ಕೇಂದ್ರೀಯ ವಿದ್ಯಾಲಯದಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯಲು ಮಕ್ಕಳಿಗೆ ಕನಿಷ್ಠ ಆರು ವರ್ಷಗಳ ವಯಸ್ಸಿನ ಮಾನದಂಡ ವಿಧಿಸಿರುವುದನ್ನು ಪ್ರಶ್ನಿಸಿ ಪೋಷಕರು ಸಲ್ಲಿಸಿರುವ ಮನವಿಯನ್ನು ನ್ಯಾಯಪೀಠವು ವಿಚಾರಣೆ ನಡೆಸುತ್ತಿದೆ.
NIT KARNATAKA RECRUITMENT 2022: ಕಿರಿಯ ಸಂಶೋಧನಾ ಅಭ್ಯರ್ಥಿ ಹುದ್ದೆಗಳಿಗೆ ನೇಮಕಾತಿ
ದೆಹಲಿ ಹೈಕೋರ್ಟ್‌ನ ಏಪ್ರಿಲ್ 11 ರ ಆದೇಶವನ್ನು ಪ್ರಶ್ನಿಸಿದ ಪೋಷಕರು, ಮಾರ್ಚ್ 2022 ರಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗುವ ಕೇವಲ ನಾಲ್ಕು ದಿನಗಳ ಮೊದಲು ಕೇಂದ್ರೀಯ ವಿದ್ಯಾಲಯ ಸಂಘಟನೆ -ಕೆವಿಎಸ್ (Kendriya Vidyalaya Sangathan) 1 ರಿಂದ 6 ನೇ ತರಗತಿಯ ಪ್ರವೇಶ ಮಾನದಂಡವನ್ನು ಹಠಾತ್ ಬದಲಾಯಿಸಿದೆ ಎಂದು ಪ್ರತಿಪಾದಿಸಿ ಮನವಿ ಸಲ್ಲಿಸಿದ್ದರು. ಈ ಹಿಂದೆ ಕೆವಿಎಸ್ ಮಾನದಂಡಗಳ ಪ್ರಕಾರ ಮಗುವಿಗೆ 5 ವರ್ಷವಾದಾಗ 1 ನೇ ತರಗತಿಗೆ ಸೇರಿಸಬಹುದಿತ್ತು.
ಮಗುವನ್ನು ಶಾಲೆಗೆ ಸೇರಿಸಲು ಸರಿಯಾದ ವಯಸ್ಸು ಇದೆ ಎಂದು ತೋರಿಸಲು ಹಲವು ಅಧ್ಯಯನಗಳಿವೆ. ಮಗುವನ್ನು ಈ ವಿಚಾರದಲ್ಲಿ ಹೆಚ್ಚು ತಳ್ಳಬೇಡಿ. ಇದು ಮಕ್ಕಳ ಗ್ರಹಿಸುವ ಮತ್ತು ಓದುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು ಜೊತೆಗೆ ಮಾನಸಿಕವಾಗಿ ಕೂಡ ಪರಿಣಾಮ ಬೀರಬಹುದು ಎಂದು ನ್ಯಾಯಪೀಠವು ಹೇಳಿದೆ.
ಅರ್ಜಿದಾರರ ವಾದದ ಪ್ರಕಾರ " ಯಾವುದೇ ಪೂರ್ವ ಸೂಚನೆ ಇಲ್ಲದೆ ವಯಸ್ಸಿನ ಮಿತಿಯಲ್ಲಿ ಬದಲಾವಣೆ ಮಾಡಿದರೆ, ಇದು ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹಕ್ಕನ್ನು ಹೊಂದಿರುವ ವಿದ್ಯಾರ್ಥಿಗಳ ಹಿತಾಸಕ್ತಿಗಳಿಗೆ ಹಾನಿಯುಂಟು ಮಾಡುತ್ತದೆ ಮತ್ತು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಕಾಯಿದೆ, 2009 ರ ಅಡಿಯಲ್ಲಿ ಅವರ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದಿದ್ದಾರೆ.
ಆದರೆ ಈ ವಾದಕ್ಕೆ ಮಣೆ ಹಾಕದ ನ್ಯಾಯಪೀಠವು, ಸಮಸ್ಯೆ ಏನೆಂದರೆ ಪ್ರತಿಯೊಬ್ಬ ಪೋಷಕರು ತಮ್ಮ ಮಗು ಯಾವುದೇ ವಯಸ್ಸಿಗೂ ಹೊಂದಿಕೊಳ್ಳುವ ಪ್ರತಿಭೆ ಎಂದು ಭಾವಿಸುವುದು. ಮಗು ಮತ್ತು ಅದರ ಮಾನಸಿಕ ಆರೋಗ್ಯದ ಬಗ್ಗೆ ಯೋಚಿಸಿ. ಎಲ್ಲವನ್ನೂ ಪ್ರಾರಂಭಿಸಲು ಅದಕ್ಕೆ ಅದರದ್ದೇ ಆದ ವಯಸ್ಸಿದೆ ಮತ್ತು ಇದು ಶಾಲೆಗಳನ್ನು ಕೂಡ ಒಳಗೊಂಡಿದೆ. ಮಾತ್ರವಲ್ಲ ವಾಸ್ತವವಾಗಿ ಮಕ್ಕಳು ಬೇಗನೆ ಪ್ರಾರಂಭಿಸದಿದ್ದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ತೋರಿಸಲು ಕೆಲವು ಅಧ್ಯಯನಗಳಿವೆ ಎಂದು ನ್ಯಾಯಪೀಠವು ಪೋಷಕರ ಪರವಾಗಿ ವಾದಿಸುತ್ತಿರುವ ವಕೀಲರಿಗೆ ತಿಳಿಸಿದೆ.
Patna Abhishek Amazon Offer ಪಾಟ್ನಾ ವಿದ್ಯಾರ್ಥಿಗೆ ದಾಖಲೆಯ ₹1.8 ಕೋ ಆಫರ್!
ಪ್ರವೇಶ ವಯಸ್ಸಿನ ಬಗ್ಗೆ ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ವಯಸ್ಸಿನ ಮಾನದಂಡಗಳನ್ನು ನಿಗದಿಪಡಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಆದೇಶದ ಪರವಾಗಿ ಪೀಠವು ಮತ್ತಷ್ಟು ಒಲವು ತೋರಿತು. ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರದ ಪರ ಹಾಜರಾದ ವಕೀಲರು, 2020 ರಲ್ಲಿ ಬಂದ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ 1 ನೇ ತರಗತಿಗೆ ಆರು ಪ್ಲಸ್ ಆಡಳಿತವನ್ನು 21 ರಾಜ್ಯಗಳು ಜಾರಿಗೆ ತಂದಿವೆ ಮತ್ತು ಈ ನೀತಿಯನ್ನು ಪ್ರಶ್ನಿಸಲಾಗಿಲ್ಲ ಎಂದು ಸೂಚಿಸಿದರು