ಕೇಂದ್ರ ಸರ್ಕಾರದ ಅಧೀನದಲ್ಲಿರುವ HLL ಲೈಫ್‌ಕೇರ್ ಲಿಮಿಟೆಡ್‌ನಲ್ಲಿ ಅಸೋಸಿಯೇಟ್ ಮ್ಯಾನೇಜರ್ ಸೇರಿದಂತೆ 55 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ, ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅಕ್ಟೋಬರ್ 21, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ HLL ಲೈಫ್‌ಕೇರ್ ಲಿಮಿಟೆಡ್‌ನಲ್ಲಿ 55 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

ಸಂಸ್ಥೆಯ ಹೆಸರು: HLL ಲೈಫ್‌ಕೇರ್ ಲಿಮಿಟೆಡ್

ಒಟ್ಟು ಹುದ್ದೆಗಳು: 55

ಹುದ್ದೆಗಳ ಹೆಸರು: ಅಸೋಸಿಯೇಟ್ ಮ್ಯಾನೇಜರ್, ಜೂನಿಯರ್ ಮ್ಯಾನೇಜರ್ ಹಾಗೂ ಇತರ ಹುದ್ದೆಗಳು

ಉದ್ಯೋಗ ಸ್ಥಳ: ಅಖಿಲ ಭಾರತ

ವಿದ್ಯಾರ್ಹತೆ ಏನು?

ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ಅಥವಾ ಸಂಬಂಧಿತ ಮಂಡಳಿಯಿಂದ ಪದವಿ, ಐಟಿಐ, ಡಿಪ್ಲೊಮಾ , ಫಾರ್ಮಸಿ ಸ್ನಾತಕೋತ್ತರ ಪದವಿ, M.Sc, MBA/PGDM ಅಥವಾ BMLT ಪೂರ್ಣಗೊಳಿಸಿರಬೇಕು.

ವಯೋಮಿತಿ:

ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಗರಿಷ್ಠ ವಯಸ್ಸು 37 ರಿಂದ 47 ವರ್ಷಗಳು.

ಅರ್ಜಿ ಶುಲ್ಕ:

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿಲ್ಲ

ವೇತನ?

ಗುಣಮಟ್ಟ ಭರವಸೆ ಅಧಿಕಾರಿ: ಮೂಲ ವೇತನ 12,000–₹29,500.

ಜೂನಿಯರ್ ಮ್ಯಾನೇಜರ್ ಹುದ್ದೆಗಳು: ಮೂಲ ವೇತನ ₹20,000–₹40,000.

ಅಸೋಸಿಯೇಟ್ ಮ್ಯಾನೇಜರ್ ಹುದ್ದೆಗಳು: ಮೂಲ ವೇತನ ₹25,000–₹45,000.

ಕಾರ್ಯಾಚರಣೆ ವ್ಯವಸ್ಥಾಪಕ ಹುದ್ದೆಗಳು: ಮೂಲ ವೇತನ ₹30,000–₹50,000.

ಉಪ ಪ್ರಧಾನ ವ್ಯವಸ್ಥಾಪಕ (QA & QC): ಮೂಲ ವೇತನ ₹70,000–₹2,00,000.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಲಭ್ಯವಿರುವ ನೇಮಕಾತಿ ಮಾಹಿತಿಯ ಪ್ರಕಾರ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

HLL ಲೈಫ್‌ಕೇರ್‌ನ ಅಧಿಕೃತ ವೆಬ್‌ಸೈಟ್ lifecarehll.com ಗೆ ಭೇಟಿ ನೀಡಿ.

Careers ವಿಭಾಗವನ್ನು ತೆರೆಯಿರಿ.

ನಿಮಗೆ ಸೂಕ್ತವಾದ ಹುದ್ದೆ ಮತ್ತು ಅದರ ಅಧಿಸೂಚನೆಯನ್ನು ಆಯ್ಕೆಮಾಡಿ.

ಅಧಿಸೂಚನೆಯಲ್ಲಿ ನೀಡಿರುವ Google Form ಲಿಂಕ್ ತೆರೆಯಿರಿ.

ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ, ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ.

ಭರ್ತಿ ಮಾಡಿದ ಅರ್ಜಿಯನ್ನು PDF ಅಥವಾ Word ರೂಪದಲ್ಲಿ ಉಳಿಸಿ.

ಅಗತ್ಯವಿರುವ ವಿದ್ಯಾರ್ಹತೆ, ಅನುಭವ, CV ಮತ್ತು ಇತರ ದಾಖಲೆಗಳನ್ನು ಸೂಚನೆಯಂತೆ ಅಪ್‌ಲೋಡ್ ಮಾಡಿ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ: ಅಕ್ಟೋಬರ್‌ 07-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್‌ 21-2026