MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಡಾಕ್ಟರ್, ಇಂಜಿನೀಯರಿಂಗ್ ಅಲ್ಲ, ಭಾರತದಲ್ಲಿ ಅತಿ ಹೆಚ್ಚು ಸಂಬಳದ ಉದ್ಯೋಗಗಳು ಇವೇ ನೋಡಿ!

ಡಾಕ್ಟರ್, ಇಂಜಿನೀಯರಿಂಗ್ ಅಲ್ಲ, ಭಾರತದಲ್ಲಿ ಅತಿ ಹೆಚ್ಚು ಸಂಬಳದ ಉದ್ಯೋಗಗಳು ಇವೇ ನೋಡಿ!

Highest Paying Jobs in India 2027: ಭಾರತದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಗಳೆಂದರೆ ಡಾಕ್ಟರ್ ಇಂಜಿನಿಯರಿಂಗ್ ಎಂದೇ ಇಷ್ಟು ದಿನ ಭಾರತೀಯರು ನಂಬಿದ್ದರು. ಆದರೀಗ ಕಾಲ ಬದಲಾಗಿದೆ. ಈ ಕೆಳಗಿನ ಉದ್ಯೋಗಗಳು ಅದಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಸಂಬಳ ಪಡೆಯುವ ಉದ್ಯೋಗಗಳಾಗಿವೆ.

2 Min read
Author : Ravi Janekal
Published : Oct 21 2026, 09:08 AM IST
Share this Photo Gallery
  • FB
  • TW
  • Linkdin
  • Whatsapp
16
ಹೆಚ್ಚಿನ ಸಂಬಳ ಪಡೆಯುವ ಉದ್ಯೋಗಗಳು
Image Credit : X

ಹೆಚ್ಚಿನ ಸಂಬಳ ಪಡೆಯುವ ಉದ್ಯೋಗಗಳು

ಭಾರತದಲ್ಲಿ ಸಾಮಾನ್ಯವಾಗಿ ಇಂಜಿನೀಯರಿಂಗ್, ವೈದ್ಯಕೀಯ ಅಥವಾ ಸಿಎ ಓದಲು ಯುವಕರ ಕನಸಾಗಿರುತ್ತದೆ ಮತ್ತು ಪೋಷಕರು ಕೂಡ ತಮ್ಮ ಮಕ್ಕಳು ಇಂಜಿನಿರಿಂಗ್ ಡಾಕ್ಟರ್ ಅಥವಾ ಸಿಎ ಆಗುವುದರಿಂದ ಹೆಚ್ಚಿನ ಸಂಬಳ ಪಡೆಯುತ್ತಾರೆ ಎಂದು ಭಾವಿಸಿದ್ದಾರೆ. ಆದರೆ ಕಾಲ ಈಗ ತುಂಬಾ ಬದಲಾಗಿದೆ. ಕೇವಲ ವೈದ್ಯರು, ಇಂಜಿನಿಯರ್‌ಗಳಷ್ಟೇ ಹೆಚ್ಚಿನ ಸಂಬಳ ಪಡೆಯುವುದಿಲ್ಲ. ಅವರಿಗಿಂತಲೂ ಹೆಚ್ಚಿನ ಸಂಭಾವನೆ ಪಡೆಯಬಲ್ಲ, ದುಡಿಯಬಲ್ಲ ಹಲವು ಕ್ಷೇತ್ರಗಳು ಇಂದು ಅವಕಾಶ ಸೃಷ್ಟಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಡಾಟಾ ಸೈಂಟಿಸ್ಟ್
Image Credit : X

ಡಾಟಾ ಸೈಂಟಿಸ್ಟ್

ಡೇಟಾ ಸೈಂಟಿಸ್ಟ್(Data Scientist), Remedial Architects, ಮೊಬೈಲ್ ಡೆವಲಪರ್‌ಗಳು, ಪ್ರಾಡಕ್ಟ್ ಮ್ಯಾನೇಜರ್, ಡೇಟಾ ಅನಾಲಿಸಿಸ್ ಮ್ಯಾನೇಜರ್ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ.

ಹಾಗೆ ನೋಡಿದರೆ ಇಂದು ವೈದ್ಯಕೀಯ, ಇಂಜಿನೀಯರ್ ಸಿಎಗಳೇ ಹೆಚ್ಚು ಸಂಬಳ ಪಡೆಯುವ ಉದ್ಯೋಗಗಳೇ ಅನಿಸುತ್ತಿಲ್ಲ! ಇಂದು ಮೊದಲಿನಂತಿಲ್ಲ, ಭವಿಷ್ಯ ಗಳಿಕೆ ಅಥವಾ ಇನ್ನಷ್ಟು ಡೆವೆಲಪ್‌ಮೆಂಟ್ ಆಗಲು ಪವರ್ ಫುಲ್ ಉದ್ಯೋಗಗಳು ಇವೆ. ಅವುಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ನೀವು ಪ್ರಸ್ತುತ ವಿದ್ಯಾರ್ಥಿಗಳಾಗಿದ್ದರೆ ಭವಿಷ್ಯದಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಗೊಂದಲ ಉಂಟಾದರೆ ನಿಮ್ಮ ವೃತ್ತಿಜೀವನಕ್ಕೆ ಯಾವುದು ಸೂಕ್ತ, ಯಾವುದು ಹೆಚ್ಚು ಸಂಬಳ ನೀಡುತ್ತೆ ಎಂದು ಕಂಡುಕೊಳ್ಳಲು ಇದು ಸಹಾಯಕವಾಗಬಹುದು.

Related Articles

Related image1
Fake Employment: ಲೇಆಫ್‌ ಆದ್ರೂ ಕೆಲಸವಿದೆ ಎಂದವನಿಗೆ ಅತಿ ಹೆಚ್ಚು ಸಂಬಳ, ದೊಡ್ಡ ಹುದ್ದೆ, ವರ್ಕ್‌ ಫ್ರಂ ಹೋಮ್‌ ಆಪ್ಶನ್!
Related image2
ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಸಂಬಳ? ಕಡಿಮೆ ಎಲ್ಲಿದೆ?
36
ಡೇಟಾ ಸೈಂಟಿಸ್ಟ್
Image Credit : X

ಡೇಟಾ ಸೈಂಟಿಸ್ಟ್

ಇಂದಿನ ಡಿಜಿಟಲ್ ಯುಗದಲ್ಲಿ, ಡೇಟಾದ ಪ್ರಾಮುಖ್ಯತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ನೀವು ಡೇಟಾ ಸೈಂಟಿಸ್ಟ್ ಆಗಿದ್ದರೆ, ಈ ಕ್ಷೇತ್ರದಲ್ಲಿ ಉತ್ತಮ ಅನುಭವ ಹೊಂದಿದ್ದರೆ ನೀವು ವರ್ಷಕ್ಕೆ 75 ಲಕ್ಷ ರೂ.ಗಳವರೆಗೆ ದೊಡ್ಡ ಸಂಬಳ ಪಡೆಯಬಹುದು! ಇತರ ಸಾಮಾನ್ಯ ಇಂಜಿನಿಯರಿಂಗ್, ಡಾಕ್ಟರ್ ಜಾಬ್‌ಗೆ ಹೋಲಿಸಿದರೆ ಒಬ್ಬ ಸಾಮಾನ್ಯ ಎಂಜಿನಿಯರ್ ಸಾಮಾನ್ಯವಾಗಿ 5 ವರ್ಷಗಳ ಅನುಭವದ ನಂತರ 8 ರಿಂದ 12 ಲಕ್ಷ ರೂ.ಗಳನ್ನು ಗಳಿಸುತ್ತಾರೆ, ಆದರೆ 5 ವರ್ಷಗಳ ಅನುಭವ ಹೊಂದಿರುವ ಡೇಟಾ ವಿಜ್ಞಾನಿ 75 ಲಕ್ಷ ರೂ.ಗಳನ್ನು ಗಳಿಸಬಹುದು. ಭಾರತ ಸರ್ಕಾರ ಮತ್ತು ವಿವಿಧ ಕೈಗಾರಿಕೆಗಳ ವರದಿಗಳ ಪ್ರಕಾರ ಮುಂಬರುವ ವರ್ಷಗಳಲ್ಲಿ ಡೇಟಾ ವಿಜ್ಞಾನಿಗಳಿಗೆ ಭಾರಿ ಬೇಡಿಕೆ ಇರಲಿದೆ.

46
ಸೊಲ್ಯೂಷನ್ ಆರ್ಕಿಟೆಕ್ಟ್ಕ
Image Credit : X

ಸೊಲ್ಯೂಷನ್ ಆರ್ಕಿಟೆಕ್ಟ್ಕ

ಮತ್ತೊಂದೆಡೆ, ಸೊಲ್ಯೂಷನ್ ಆರ್ಕಿಟೆಕ್ಟ್ಕ. 80 ಲಕ್ಷ ರೂ.ಗಳವರೆಗೆ ಸಂಬಳವನ್ನು ಪಡೆಯಬಹುದು. ಸೊಲ್ಯೂಷನ್ ಆರ್ಕಿಟೆಕ್ಟ್ ಎಂದರೆ

ಯಾವುದೇ ವ್ಯವಹಾರದ ಅಗತ್ಯಗಳಿಗೆ ತಕ್ಕಂತೆ ಪ್ರಾಜೆಕ್ಟ್ ಅಥವಾ ಪ್ಲಾನ್ ಸಿದ್ಧಪಡಿಸುತ್ತಾನೆ. ಕಂಪನಿಗಳ ವ್ಯವಹಾರ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡುತ್ತಾನೆ. ಭಾರತದಲ್ಲಿನ ಬಹುತೇಕ ಎಲ್ಲಾ ದೊಡ್ಡ ತಂತ್ರಜ್ಞಾನ ಸಂಬಂಧಿತ ಕಂಪನಿಗಳಲ್ಲಿ ಅಂತಹ ತಜ್ಞರಿಗೆ ಭಾರಿ ಬೇಡಿಕೆ ಇದೆ.

56
ಮೊಬೈಲ್ ಡೆವೆಲಪರ್
Image Credit : X

ಮೊಬೈಲ್ ಡೆವೆಲಪರ್

ಇತ್ತೀಚಿನ ದಿನಗಳಲ್ಲಿ ಎಲ್ಲರ ಬಳಿಯೂ ಮೊಬೈಲ್‌ಗಳಿವೆ. ಮೊಬೈಲ್‌ ಇಲ್ಲದೆ ಜೀವನ ನಡೆಯುವುದಿಲ್ಲ, ವ್ಯವಹಾರವೇ ಅಸಾಧ್ಯ ಎಂಬಷ್ಟು ಅವಲಂಭಿತರಾಗಿದ್ದೇವೆ. ಆದ್ದರಿಂದ ಈ ಕ್ಷೇತ್ರದಲ್ಲಿ ಉದ್ಯೋಗ ಭವಿಷ್ಯ ಗಟ್ಟಿಯಾಗಿದೆ. ಭಾರೀ ಬೇಡಿಕೆ ಇದೆ.

4 ರಿಂದ 5 ವರ್ಷಗಳ ಅನುಭವದೊಂದಿಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಮೊಬೈಲ್ ಡೆವಲಪರ್‌ಗಳು 60 ಲಕ್ಷ ರೂ.ಗಳವರೆಗೆ ಸಂಬಳ ಪಡೆಯುತ್ತಾರೆ. ಉತ್ತಮ ತಂತ್ರಜ್ಞಾನ ಕಂಪನಿಗಳು ಮೊಬೈಲ್ ಡೆವಲಪರ್‌ಗಳಿಗೆ 50 ರಿಂದ 60 ಲಕ್ಷ ರೂ.ಗಳ ಪ್ಯಾಕೇಜ್ ಅನ್ನು ನೀಡುತ್ತವೆ. ದೇಶದಲ್ಲಿ ಆಂಡ್ರಾಯ್ಡ್ ಮತ್ತು ಮೊಬೈಲ್ ಅಪ್ಲಿಕೇಶನ್ ಡೆವಲಪರ್‌ಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

66
ಡೇಟಾ ಅನಾಲಿಟಿಕ್ಸ್
Image Credit : X

ಡೇಟಾ ಅನಾಲಿಟಿಕ್ಸ್

ಅಲ್ಲದೆ 4 ರಿಂದ 5 ವರ್ಷಗಳ ಅನುಭವ ಹೊಂದಿರುವ ಪ್ರಾಡಕ್ಟ್ ಮ್ಯಾನೇಜರ್ ಸಂಬಳ ಕೂಡ 15 ಲಕ್ಷದಿಂದ 40 ಲಕ್ಷ ರೂ.ಗಳವರೆಗೆ ಇರಬಹುದು. ವಿವಿಧ ಕಂಪನಿಗಳಲ್ಲಿ ಪ್ರಾಡಕ್ಟ್ ಮ್ಯಾನೇಜರ್‌ಗೆ ಭಾರೀ ಬೇಡಿಕೆಯಿದೆ. ಕೆಲಸದಲ್ಲಿ ಸ್ಕಿಲ್ ಹೆಚ್ಚಾದಷ್ಟು ಹೆಚ್ಚಿನ ಪ್ಯಾಕೇಜ್ ನೀಡಿ ಅವರನ್ನು ನೇಮಿಸಿಕೊಳ್ಳಲಾಗುತ್ತಿದೆ.

ಇದಲ್ಲದೆ, ಡೇಟಾ ಅನಾಲಿಟಿಕ್ಸ್ ಮ್ಯಾನೇಜರ್‌ನಂತಹ ಪ್ರಮುಖ ಹುದ್ದೆಗಳು 5 ವರ್ಷಗಳ ಅನುಭವದ ನಂತರ 40 ರಿಂದ 60 ಲಕ್ಷ ರೂ.ಗಳವರೆಗೆ ಸುಲಭವಾಗಿ ಗಳಿಸಬಹುದು. ಈ ವ್ಯವಸ್ಥಾಪಕರು ಕಂಪನಿಯ ಡೇಟಾವನ್ನು ಸರಿಯಾಗಿ ನಿರ್ವಹಿಸುವ ಮೂಲಕ ವ್ಯವಹಾರವನ್ನು ಬೆಳೆಸಲು ಸಹಾಯ ಮಾಡುತ್ತಾರೆ, ಇದು ಅವರಿಗೆ ಕಾರ್ಪೊರೇಟ್ ವಲಯದಲ್ಲಿ ದೊಡ್ಡ ಸಂಬಳದ ಅವಕಾಶವನ್ನು ನೀಡುತ್ತದೆ

ಪದೇಪದೆ ಕೇಳಲಾಗಿರುವ ಪ್ರಶ್ನೆಗಳಿವು

ಪ್ರಶ್ನೆ: ಭಾರತದಲ್ಲಿ 5 ವರ್ಷಗಳ ಅನುಭವದ ನಂತರ ಡೇಟಾ ವಿಜ್ಞಾನಿ ಎಷ್ಟು ಸಂಬಳ ಪಡೆಯಬಹುದು?

ಉತ್ತರ: 5 ವರ್ಷಗಳ ಅನುಭವದ ನಂತರ, ಒಬ್ಬ ಡೇಟಾ ವಿಜ್ಞಾನಿ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 75 ಲಕ್ಷ ರೂ.ಗಳವರೆಗೆ ಗಳಿಸಬಹುದು.

ಪ್ರಶ್ನೆ: ಮೊಬೈಲ್ ಡೆವಲಪರ್‌ಗಳಿಗೆ ಪ್ರಸ್ತುತ ಮಾರುಕಟ್ಟೆ ಬೇಡಿಕೆ ಏನು?

ಉತ್ತರ: ಮೊಬೈಲ್ ಡೆವಲಪರ್ 4 ರಿಂದ 5 ವರ್ಷಗಳ ಅನುಭವ ಹೊಂದಿದ್ದರೆ, ಅವರಿಗೆ 50 ರಿಂದ 60 ಲಕ್ಷ ರೂಪಾಯಿಗಳ ಪ್ಯಾಕೇಜ್ ಸಿಗುವ ಹೆಚ್ಚಿನ ಅವಕಾಶವಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಭಾರತ ಸುದ್ದಿ
ಉದ್ಯೋಗಗಳು
 

Latest Videos
Recommended Stories
Recommended image1
"ಅದೆಲ್ಲ ದುಡ್ಡಲ್ಲ, ಕಣ್ಣು ಮುಚ್ಚೋದ್ರೊಳಗೆ ಮಾಯವಾಗುತ್ತೆ".. ರೈತರಿಗೆ ಕಣ್ಣು ತೆರೆಸುವ ಆರ್ಥಿಕ ಪಾಠ ಹೇಳಿದ ವಿನೋದ್ ರಾಜ್
Recommended image2
ಮಂಗಳೂರು ಏರ್‌ಪೋರ್ಟ್‌ ಯೂಸರ್‌ ಡೆವಲಪ್‌ಮೆಂಟ್‌ ಶುಲ್ಕ ಭಾರೀ ಪ್ರಮಾಣದಲ್ಲಿ ಏರಿಸಲು ಅದಾನಿ ತಯಾರಿ
Recommended image3
ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ಅಕ್ಟೋಬರ್‌ 21ಕ್ಕೆ ಪ್ರಕಟವಾಗಲಿದ್ಯಾ ಡಿಎ ಹೈಕ್‌ ಘೋಷಣೆ?
Related Stories
Recommended image1
Fake Employment: ಲೇಆಫ್‌ ಆದ್ರೂ ಕೆಲಸವಿದೆ ಎಂದವನಿಗೆ ಅತಿ ಹೆಚ್ಚು ಸಂಬಳ, ದೊಡ್ಡ ಹುದ್ದೆ, ವರ್ಕ್‌ ಫ್ರಂ ಹೋಮ್‌ ಆಪ್ಶನ್!
Recommended image2
ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಸಂಬಳ? ಕಡಿಮೆ ಎಲ್ಲಿದೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved