Wife Swapping: ಕಾರ್‌ ಕೀನಿಂದ ಬೇರೆ ಪತ್ನಿಯರ ಜೊತೆ ದೈಹಿಕ ಸಂಬಂಧ ಬೆಳೆಸಬಹುದು. ಭಾರತದಲ್ಲಿ ಗೌಪ್ಯವಾಗಿ ನಡೆಯುತ್ತಿರುವ ವೈಫ್‌ಸ್ವಾಪಿಂಗ್‌ಬಗ್ಗೆ ಗೊತ್ತಾದರೆ ನೀವು ಶಾಕ್‌ ಆಗ್ತೀರಿ.

ಇಂದು ಲವ್‌, ಮದುವೆ, ಬ್ರೇಕಪ್‌ ಲಿವ್‌ ಇನ್‌ ರಿಲೇಶನ್‌ಶಿಪ್‌, ಅಕ್ರಮ ಸಂಬಂಧಗಳು ಅಸ್ತಿತ್ವದಲ್ಲಿವೆ. ಇದರ ಜೊತೆಗೆ ಸಿಚ್ಯುವೇಶನ್‌ಶಿಪ್‌ ಎಂಬುದೆಲ್ಲ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿವೆ. ಆದರೆ ಕಾರ್‌ ಕೀಯಿಂದ ನೀವು ಯಾ ಪತ್ನಿ, ಪತಿಯರ ಜೊತೆ ದೈಹಿಕ ಸಂಬಂಧ ಬೆಳೆಸಬೇಕು ಎನ್ನುವುದು ನಿರ್ಧಾರ ಆಗುತ್ತದೆಯಂತೆ. ಅದನ್ನೇ ವೈಫ್ ಸ್ವಾಪಿಂಗ್ ( Wife Swapping ) ಎಂದು ಹೇಳಲಾಗುತ್ತದೆ.

ತಾತ್ಕಾಲಿಕವಾಗಿ ಕೇವಲ ದೈಹಿಕ ಸುಖಕ್ಕೋಸ್ಕರ ನೋವು ಯಾರ ಪತ್ನಿಯರ ಜೊತೆ ಬೇಕಿದ್ರೂ ಸಂಬಂಧ ಬೆಳೆಸಬಹುದು. ಇದು ಎಲ್ಲರ ಒಪ್ಪಿಗೆ ಮೇಲೆ ನಡೆಯುತ್ತದೆ ಎನ್ನೋದು ನಿಜಕ್ಕೂ ದೊಡ್ಡ ದುರಂತ. ಇದನ್ನು ಗುಟ್ಟಾಗಿ ಮಾಡಲಾಗುತ್ತದೆ. ಭಾರತದಲ್ಲಿ ಈ ಅಭ್ಯಾಸವನ್ನು "ಪತ್ನಿ ವಿನಿಮಯ" ಎಂದು ಹೇಳುತ್ತಾರೆ. ನಮ್ಮ ದೇಶದ ಸಾಂಪ್ರದಾಯಿಕ ಮೌಲ್ಯಗಳಿಗೆ ವಿರುದ್ಧವಾಗಿದ್ದು, ವಿವಾಹ ಎಂಬ ಪವಿತ್ರವಾದ ಸಂಸ್ಥೆಗೆ ಅವಮಾನ ಮಾಡುವಂತಹ ಘಟನೆ ಇದಾಗಿದೆ.

ವೈಫ್‌ ಸ್ವಾಪಿಂಗ್‌ ಎಂದರೇನು?

ಅತುಲ್‌ ಶರ್ಮಾ ಎನ್ನುವವರು ಈ ಬಗ್ಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. “ಶ್ರೀಮಂತರು ಸೇರಿಕೊಂಡು ಪಾರ್ಟಿ ಮಾಡುತ್ತಾರೆ. ಅಲ್ಲಿ ಎಲ್ಲರೂ ಅವರ ಕಾರ್‌ಗಳ ಕೀಗಳನ್ನು ಒಂದು ಬಾಕ್ಸ್‌ನಲ್ಲಿ ಹಾಕುತ್ತಾರೆ. ಲೈಟ್‌ ಆಫ್‌ ಆಗುತ್ತದೆ. ಯಾರಿಗೆ ಯಾರ್‌ ಕಾರ್‌ ಕೀ ಸಿಗುವುದೋ ಅವರ ಪತ್ನಿ ಜೊತೆ ದೈಹಿಕ ಸಂಬಂಧ ಬೆಳೆಸುವುದು. ಇದು ಎಲ್ಲರ ಒಪ್ಪಿಗೆ ಪಡೆದು ನಡೆದಿರುತ್ತದೆ. ಯಾವ ಮಹಿಳೆ ಇದನ್ನು ವಿರೋಧಿಸುತ್ತಾಳೋ ಅವಳಿಗೆ ಡಿವೋರ್ಸ್‌ ಕೊಡಲಾಗುತ್ತದೆ, ಇಂದು ಡಿವೋರ್ಸ್‌ ಕೂಡ ಬಹಳ ಸುಲಭವಾಗಿ ಸಿಗುತ್ತದೆ. ಅಷ್ಟೇ ಅಲ್ಲದೆ ಇಂದು ಡಿವೋರ್ಸ್‌ಗಿಂತ ಜಾಸ್ತಿ ಸಂಗಾತಿಗಳು ನೀನು ಬೇರೆ ಮನೆಯಲ್ಲಿರು, ನಾನು ಇನ್ನೊಂದು ಮನೆಯಲ್ಲಿ ಇರುವೆ ಎಂದು ಕೂಡ ಹೇಳುತ್ತಾರೆ. ಇಂದಿನ ಪೀಳಿಗೆಯು ದೈಹಿಕ ಸುಖಕ್ಕೋಸ್ಕರ ಇರೋದು ಎಂದು ಕೂಡ ಹೇಳಲಾಗಿದೆ” ಎಂದು ಅತುಲ್‌ ಶರ್ಮಾ ಹೇಳಿದ್ದಾರೆ.

ಅತುಲ್‌ ಶರ್ಮಾ ಅವರ ಮಾತಿಗೆ ಅನೇಕರು “ಹೌದು, ಹತ್ತು ವರ್ಷಗಳ ಹಿಂದೆಯೇ ಅನುಭವ ಆಗಿದೆ. ನಾವು ಯಾವ ಪೀಳಿಗೆಯಲ್ಲಿದ್ದೇವೆ” ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. ಅಂದಹಾಗೆ ನಟಿ ಕರೀಷ್ಮಾ ಕಪೂರ್‌ ಕೂಡ ಈ ಸಂಸ್ಕೃತಿಯಿಂದ ತೊಂದರೆಗೆ ಒಳಗಾಗಿದ್ದಾರೆ ಎಂದು ಕೂಡ ಓರ್ವರು ಕಾಮೆಂಟ್‌ ಮಾಡಿದ್ದರು.

ಕರೀನಾ ಕಪೂರ್‌ಗೂ ಕಾಡಿದ್ದ ಈ ಸಮಸ್ಯೆ!

ಉದ್ಯಮಿ ಸಂಜಯ್‌ ಕಪೂರ್‌ ಜೊತೆಗೆ ಕರೀಷ್ಮಾ ಕಪೂರ್‌ ಮದುವೆಯಾಗಿದ್ದರು. “ಬೇರೆಯವರ ಜೊತೆ ದೈಹಿಕ ಸಂಬಂಧ ಬೆಳೆಸು ಎಂದು ಪತಿ ಒತ್ತಾಯ ಕೂಡ ಮಾಡಿದ್ದರು, ನನ್ನ ಮೇಲೆ ಸಾಕಷ್ಟು ಬಾರಿ ಹಲ್ಲೆ ಆಗಿದ್ದು, ಮೇಕಪ್‌ನಿಂದ ಹೈಡ್‌ ಮಾಡಿದ್ದೇನೆ” ಎಂದು ಕರೀಷ್ಮಾ ಕಪೂರ್‌ ಹೇಳಿದ್ದರು.

ಇದು ಶುರುವಾಗಿದ್ದು ಎಲ್ಲಿ?

1970 ರ ದಶಕದಲ್ಲಿ ವಿದೇಶಗಳಲ್ಲಿ ಈ ರೀತಿ ಪಾರ್ಟಿಗಳು ನಡೆಯುತ್ತಿತ್ತು ಎನ್ನಲಾಗಿದೆ. ಒಂದು ರಾತ್ರಿಗೋಸ್ಕರ ಈ ರೀತಿ ಮಾಡಲಾಗುತ್ತಿತ್ತಂತೆ. ಇಲ್ಲಿ ಭಾವನಾತ್ಮಕ ಸಂಬಂಧಗಳು ಏನೂ ಇರೋದಿಲ್ಲ. 1997 ರ ಸಿನಿಮಾ "ದಿ ಐಸ್ ಸ್ಟಾರ್ಮ್" ನಲ್ಲಿ ಈ ಬಗ್ಗೆ ಮಾಹಿತಿ ಇದೆ. ಭಾರತದಲ್ಲಿ ಈ ರೀತಿ ಪಾರ್ಟಿ ಮಾಡಿದರೂ ಕೂಡ ಮೊಬೈಲ್ ಫೋನ್‌ಗಳು, ಕ್ಯಾಮೆರಾಗಳನ್ನು ತರೋಹಾಗಿಲ್ಲ.

ಎರಡನೇ ವಿಶ್ವಯುದ್ಧದ ಟೈಮ್‌ನಲ್ಲಿ ಅಮೆರಿಕದಲ್ಲಿ, ಯುದ್ಧದಲ್ಲಿ ಮೃತಪಟ್ಟ ಫೈಲಟ್‌ ವಿಧವೆಯರನ್ನು ಉಳಿದ ಫೈಲಟ್‌ಗಳು ಭಾವನಾತ್ಮಕವಾಗಿ ನೋಡಿಕೊಳ್ಳುತ್ತಿದ್ದರು, ದೈಹಿಕ ಸಂಬಂಧ ಬೆಳೆಸುತ್ತಿದ್ದರು. 20 ನೇ ಶತಮಾನದಲ್ಲಿ, ಲೈಂಗಿ*ಕ ಕ್ರಾಂತಿಯಿಂದ ಈ ಅಭ್ಯಾಸವು ಜನಪ್ರಿಯತೆ ಪಡೆಯಿತು. ಆಗ ಸ್ವಿಂಗಿಂಗ್ ಪದ ಜನಪ್ರಿಯವಾಯಿತು.

ಒಪ್ಪಿಗೆಯಿಂದ ನಡೆಯುವ ಚಟುವಟಿಕೆಯಾಗಿದ್ದು, ಭಾರತದಲ್ಲಿ ವೈಫ್ ಸ್ವಾಪಿಂಗ್‌ಗೆ ಕಾನೂನು ಒಪ್ಪಿಗೆ ಇದೆ. ಒಪ್ಪಿಗೆ ಇಲ್ಲದೆ ಇದರಲ್ಲಿ ಭಾಗವಹಿಸಿದರೆ, ಅದನ್ನು ಕಾನೂನು ದೃಷ್ಟಿಯಿಂದ ವಿವಾಹವಿಚ್ಛೇದನದ ಆಧಾರವಾಗಿ ಪರಿಗಣಿಸಬಹುದು. ಭಾರತದಲ್ಲಿ ಇದು ಕಾನೂನುಬಾಹಿರವಲ್ಲ, ಆದರೆ ಇದು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ. ಮಹಿಳಾ ಹಕ್ಕುಗಳ ಸಂಸ್ಥೆಗಳು ಈ ವ್ಯವಸ್ಥೆಯನ್ನು ಟೀಕಿಸಿವೆ.