ರಾಜಸ್ತಾನ್ ರಾಯಲ್ಸ್ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ವಿದಾಯ ಹೇಳಿದ್ದಾರೆ. ಮುಖ್ಯ ಕೋಚ್ ಹುದ್ದೆ ಅಲಂಕರಿಸಿ ಒಂದು ವರ್ಷಕ್ಕೆ ಪದತ್ಯಾಗ ಮಾಡಿದ್ದಾರೆ. ಐಪಿಎಲ್‌ 2026ಕ್ಕೂ ಮುನ್ನವೇ ರಾಹುಲ್‌ ದ್ರಾವಿಡ್‌ ನಡೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. 

ಕ್ರಿಕೆಟ್ ದುನಿಯಾದ ಮಹಾಗೋಡೆ ಎಂದೇ ಪ್ರಸಿದ್ಧಿ ಪಡೆದಿರುವ ರಾಹುಲ್ ದ್ರಾವಿಡ್ ((Rahul Dravid) )ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದಿದೆ. ರಾಜಸ್ತಾನ್ ರಾಯಲ್ಸ್ (Rajasthan Royals) ಪ್ರೇಮಿಗಳಿಗೆ ನಿರಾಸೆ ಕಾದಿದೆ. ಈ ಬಾರಿ, ರಾಹುಲ್ ದ್ರಾವಿಡ್ ಗೈಡ್ಲೈನ್ಸ್ ನಲ್ಲಿ ತಂಡ ಫೈನಲ್ ಗೆ ಏರ್ಬಹುದು ಎಂಬ ಆಸೆಯಲ್ಲಿದ್ದ ರಾಜಸ್ತಾನ್ ರಾಯಲ್ಸ್ ಫ್ಯಾನ್ಸ್, ಕ್ರೀಡಾಂಗಣದಲ್ಲಿ ರಾಹುಲ್ ದ್ರಾವಿಡ್ ಅವರನ್ನು ಮಿಸ್ ಮಾಡ್ಕೊಳ್ಳಲಿದ್ದಾರೆ. ಐಪಿಎಲ್ ಮೊದಲ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಐಪಿಎಲ್ 2026 ಕ್ಕೂ ಮೊದಲು ಟೀಮ್ ಇಂಡಿಯಾದ ಮಾಜಿ ಕೋಚ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ ರಾಜಸ್ತಾನ್ ರಾಯಲ್ಸ್ ಟೀಂ : ರಾಜಸ್ಥಾನ್ ರಾಯಲ್ಸ್ ಸೋಶಿಯಲ್ ಮೀಡಿಯಾ ಎಕ್ಸ್ X ನಲ್ಲಿ ಮಾಹಿತಿ ಹಂಚಿಕೊಂಡಿದೆ. ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, 2026 ರ ಐಪಿಎಲ್ ಗೂ ಮುನ್ನ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ದ್ರಾವಿಡ್ ಹಲವು ವರ್ಷಗಳಿಂದ ರಾಯಲ್ಸ್ ತಂಡದ ಭಾಗವಾಗಿದ್ರು. ಅವರ ಲೀಡರ್ಶಿಪ್ ಅನೇಕ ಆಟಗಾರರ ಮೇಲೆ ಪ್ರಭಾವ ಬೀರಿತ್ತು. ಫ್ರಾಂಚೈಸಿ, ರಾಹುಲ್ ದ್ರಾವಿಡ್ ಅವರಿಗೆ ದೊಡ್ಡ ಸ್ಥಾನ ನೀಡಲು ಮುಂದಾಗಿತ್ತು, ಆದ್ರೆ ರಾಹುಲ್ ದ್ರಾವಿಡ್ ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು ಮತ್ತು ಪ್ರಪಂಚದಾದ್ಯಂತದ ಇರುವ ಲಕ್ಷಾಂತರ ಅಭಿಮಾನಿಗಳು ರಾಹುಲ್ ದ್ರಾವಿಡ್ ಫ್ರಾಂಚೈಸಿಗೆ ನೀಡಿದ ಗಮನಾರ್ಹ ಸೇವೆಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ ಎಂದು ಫ್ರಾಂಚೈಸ್ ತಿಳಿಸಿದೆ.

Slapgate ವಿಡಿಯೋ ವೈರಲ್, ಲಲಿತ್ ಮೋದಿ ವಿರುದ್ಧ ಶ್ರೀಶಾಂತ್ ಹೆಂಡ್ತಿ

ಕಳಪೆ ಪ್ರದರ್ಶನ ತೋರಿದ್ದ ರಾಜಸ್ತಾನ್ ರಾಯಲ್ಸ್ : ಕಳೆದ ವರ್ಷ ಭಾರತೀಯ ತಂಡದ ಮುಖ್ಯ ಕೋಚ್ ಆಗಿ ತಮ್ಮ ಅವಧಿ ಪೂರ್ಣಗೊಳಿಸಿದ ನಂತ್ರ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ರು. ರಾಜಸ್ಥಾನ ತಂಡ ಕಳೆದ ಐಪಿಎಲ್ ಋತುವಿನಲ್ಲಿ ಕಳಪೆ ಪ್ರದರ್ಶನ ತೋರಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದು 10 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಫ್ರಾಂಚೈಸಿ ಎಂಟು ಅಂಕಗಳೊಂದಿಗೆ ಒಂಬತ್ತನೇ ಸ್ಥಾನ ಗಳಿಸಿತ್ತು.

ಈವರೆಗೆ ರಾಜಸ್ತಾನ ರಾಯಲ್ಸ್ ಗೆದ್ದ ಪ್ರಶಸ್ತಿ ಎಷ್ಟು? : ಐಪಿಎಲ್ ನಲ್ಲಿ ಇದುವರೆಗೆ ರಾಜಸ್ತಾನ್ ರಾಯಲ್ಸ್ ಒಂದೇ ಒಂದು ಬಾರಿ ಪ್ರಶಸ್ತಿ ಎತ್ತಿ ಹಿಡಿದಿದೆ. 2008 ರಲ್ಲಿ ಲೆಜೆಂಡರಿ ಲೆಗ್-ಸ್ಪಿನ್ನರ್ ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ತಾನ್ ರಾಯಲ್ಸ್ ಐಪಿಎಲ್ ಕಪ್ ಗೆದ್ದಿತ್ತು.

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ರೋಜರ್‌ ಬಿನ್ನಿ?

ರಾಜಸ್ತಾನ್ ರಾಯಲ್ಸ್ ಜೊತೆ ರಾಹುಲ್ ದ್ರಾವಿಡ್ ನಂಟು : 52 ವರ್ಷದ ದ್ರಾವಿಡ್ ರಾಜಸ್ತಾನ್ ರಾಯಲ್ಸ್ ಜೊತೆ ದೀರ್ಘ ಸಂಬಂಧ ಹೊಂದಿದ್ದಾರೆ. ಐಪಿಎಲ್ 2012 ಮತ್ತು 2013 ರಲ್ಲಿ ಟೀಂ ಕ್ಯಾಪ್ಟನ್ ಆಗಿದ್ರು. ಐಪಿಎಲ್ 2014 ಮತ್ತು 2015 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮೆಂಟರ್ ಆಗಿ ಸೇವೆ ಸಲ್ಲಿಸಿದ್ದರು. ದ್ರಾವಿಡ್ ಮತ್ತೆ 2024 ರಲ್ಲಿ ರಾಜಸ್ಥಾನ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಅಧಿಕಾರವಹಿಸಿಕೊಂಡಿದ್ದರು. ಆದ್ರೆ ಈ ಬಾರಿ ಟೀಂ ಪ್ರದರ್ಶನ ಕಳಪೆಯಾಗಿತ್ತು. ಟೀಂ ಪ್ಲೇಆಫ್ಗೆ ಅರ್ಹತೆ ಪಡೆಯಲು ಸಾಧ್ಯವಾಗ್ಲಿಲ್ಲ.

View post on Instagram