T20 ಟೂರ್ನಿ ಮೂಲಕ ಶ್ರೀಶಾಂತ್ ಕ್ರಿಕೆಟ್‌ಗೆ ಕಮ್‌ಬ್ಯಾಕ್; ಹೊಸ ಅಧ್ಯಾಯ ಆರಂಭ!
7 ವರ್ಷ ನಿಷೇಧ ಶಿಕ್ಷೆ ಅನುಭವಿಸಿ ಇದೀಗ ಮುಕ್ತಗೊಂಡಿರುವ ಟೀಂ ಇಂಡಿಯಾ ವೇಗಿ ಎಸ್ ಶ್ರೀಶಾಂತ್ ಮತ್ತೆ ಕ್ರಿಕೆಟ್ ಆಡುವುದೇ ಅನುಮಾನವಾಗಿತ್ತು. ಆದರೆ ಕೇರಳ ಪೇಸರ್ ಮತ್ತೆ ಕ್ರಿಕೆಟ್ ಆಡಲಿದ್ದಾರೆ ಅನ್ನೋದು ಖಚಿತವಾಗಿದೆ. ಟಿ20 ಟೂರ್ನಿ ಮೂಲಕ ಶ್ರೀಶಾಂತ್ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.
ಕೊಚ್ಚಿ(ನ.22): ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣ ಭಾರತದಲ್ಲಿ ಸೃಷ್ಟಿಸಿದ ಕೋಲಾಹಲ ಅಷ್ಟಿಷ್ಟಲ್ಲ. 2013ರಲ್ಲಿ ನಡೆದ ಈ ಪ್ರಕರಣದಲ್ಲಿ ಜೈಲುಪಾಲದ ಶ್ರೀಶಾಂತ್ ತನ್ನ ಮೇಲಿನ ಆರೋಪಿಗಳಿಂದ ಮುಕ್ತರಾಗಿದ್ದಾರೆ. ಆದರೆ 7 ವರ್ಷಗಳ ಕಾಲ ಶ್ರೀಶಾಂತ್ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದರು. ಇದೀಗ ನಿಷೇಧ ಶಿಕ್ಷೆ ಮುಗಿಸಿರುವ ಶ್ರೀಶಾಂತ್ ಇದೀಗ ಮತ್ತೆ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಇಷ್ಟೇ ಅಲ್ಲ ಶ್ರೀಶಾಂತ್ ಕ್ರಿಕೆಟ್ ಕಮ್‌ಬ್ಯಾಕ್ ಖಚಿತಗೊಂಡಿದೆ.
ಶ್ರೀಶಾಂತ್ ಮೇಲಿನ ನಿಷೇಧ ಅಂತ್ಯ; ನಾಳೆಯಿಂದ ಕ್ರಿಕೆಟ್ ಆಡಲು ಮುಕ್ತ!..
37ರ ಹರೆಯದ ಶ್ರೀಶಾಂತ್ ಪ್ರಮುಖ ಘಟ್ಟವನ್ನು ನಿಷೇಧದಲ್ಲಿ ಕಳೆದಿದ್ದಾರೆ. ವೇಗಿಗಳು ವಿದಾಯ ಹೇಳುತ್ತಿರುವ ವಯಸ್ಸಿನಲ್ಲಿ ಶ್ರೀಶಾಂತ್ ಕಮ್‌ಬ್ಯಾಕ್ ಅಸಾಧ್ಯ ಎಂದೇ ಹೇಳಲಾಗುತ್ತಿತ್ತು. ಆದರೆ ಶ್ರೀಶಾಂತ್ ವಿಶ್ವಾಸ ಕಳೆದುಕೊಂಡಿರಲಿಲ್ಲ. ಇದೀಗ ಶ್ರೀಶಾಂತ್ ಇಚ್ಚೆಯಂತೆ ಮತ್ತೆ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಕೇರಳ ಪ್ರಸಿಡೆಂಟ್ ಕಪ್ ಟಿ20 ಟೂರ್ನಿಯಲ್ಲಿ ಶ್ರೀಶಾಂತ್ ಆಡುತ್ತಿರುವುದನ್ನು ಕೇರಳ ಕ್ರಿಕೆಟ್ ಸಂಸ್ಥೆ ಸ್ಪಷ್ಟಪಡಿಸಿದೆ.
ಐಪಿಎಲ್‌ನಲ್ಲಿ ಈ ಮೂರು ತಂಡಗಳ ಪರ ಆಡಲು ಬಯಸಿದ ವೇಗಿ ಶ್ರೀಶಾಂತ್
ಡಿಸೆಂಬರ್ ಮೊದಲ ವಾರದಿಂದ ಕೇರಳ ಪ್ರಸಿಡೆಂಟ್ ಕಪ್ ಟಿ20 ಟೂರ್ನಿ ಆಲಪುಝದಲ್ಲಿ ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ ಶ್ರೀಶಾಂತ್ ಸ್ಟಾರ್ ಆಫ್ ಅಟ್ರಾಕ್ಷನ್ ಎಂದು ಕೇರಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಕೆ ವರ್ಗೀಸ್ ಹೇಳಿದ್ದಾರೆ. ಕ್ರಿಕೆಟ್ ಟೂರ್ನಿಗಾಗಿ ಕೇರಳ ಎಲ್ಲಾ ತಯಾರಿ ಮಾಡಿಕೊಂಡಿದೆ. ಇದೀಗ ಕೇರಳ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ.
ಶ್ರೀಶಾಂತ್ ಕೇರಳ ರಣಜಿ ತಂಡದ ಪರ ಆಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಕೊರೋನಾ ವೈರಸ್ ಕಾರಣ ಈ ಬಾರಿ ರಣಜಿ ಟೂರ್ನಿ ಆಯೋಜನೆ ಕುರಿತು ಬಿಸಿಸಿಐ ಯಾವುದೇ ನಿರ್ಧಾರ ಕೈಗೊಂಡಿಲ್ಲ. 2021ರಿಂದ ದೇಸಿ ಟೂರ್ನಿಗಳನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಶ್ರೀಶಾಂತ್ ಕಮ್‌ಬ್ಯಾಕ್ ವಿಳಂಬವಾಗುತ್ತಲೇ ಹೋಗುತ್ತಿದೆ. ಇದೀಗ ಪ್ರಸಿಡೆಂಟ್ ಕಪ್ ಮೂಲಕ ಶ್ರೀಶಾಂತ್ 7 ವರ್ಷಗಳ ಬಳಿಕ ವೃತ್ತಿಪರ ಕ್ರಿಕೆಟ್‌ಗೆ ಮರಳುತ್ತಿದ್ದಾರೆ.