ಸಿಡ್ನಿ[ಡಿ.05]: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಐಪಿಎಲ್ ಕಪ್ ಗೆಲ್ಲುತ್ತೆ, ಮುಂದಿನ ಬಾರಿ ಕಪ್ ಗೆಲ್ಲುತ್ತೆ ಅಂತ ಅಂದುಕೊಂಡಿದ್ದೇ ಬಂತು. ಆದರೆ 12 ಆವೃತ್ತಿ ಕಳೆದರು ಐಪಿಎಲ್ ಟ್ರೋಫಿ ಎನ್ನುವುದು RCB ಪಾಲಿಗೆ ಗಗನ ಕುಸಮವಾಗಿಯೇ ಉಳಿದಿದೆ.

ಈತನನ್ನು ಖರೀದಿಸಲು 9 ಕೋಟಿ ನೀಡಲು ರೆಡಿಯಾಗಿದ್ದ RCB, ಕೊನೆಗೆ ಹರಾಜಾಗಿದ್ದು 50 ಲಕ್ಷಕ್ಕೆ..!

ಹೀಗಿರುವಾಗಲೇ ಕಳೆದ ಮೂರ್ನಾಲ್ಕು ಆವೃತ್ತಿಗಳಿಂದಲೂ ’ಈ ಸಲ ಕಪ್ ನಮ್ದೇ’ ಎನ್ನುವ ಘೋಷಣೆ RCB  ಅಭಿಮಾನಿಗಳ ಪಾಲಿಗೆ ಹೊಸ ಹುರುಪನ್ನು ನೀಡಿತ್ತು. ತಂಡಕ್ಕೆ ಅಭಿಮಾನಿಗಳು ಇನ್ನಿಲ್ಲದಂತೆ ಸಫೋರ್ಟ್ ಮಾಡಿದರು RCB ಮಾತ್ರ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಸ್ವತಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸಹಾ ಈ ಸಲ ಕಪ್ ನಮ್ದೇ ಅಂದಿದ್ದರು. ಆದರೆ ಕಪ್ ಮಾತ್ರ ನಮ್ಮದಾಗಿರಲಿಲ್ಲ.

ಈ ಸಲ ಕಪ್ ನಮ್ದೇ ಎಂದವರೆಲ್ಲ ಹಿಡಿದದ್ದು ಚಿಪ್ಪೇ...!

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಿಕೊಂಡಿರುವ ದಕ್ಷಿಣ ಆಫ್ರಿಕಾ ಅನುಭವಿ ವೇಗಿ ಡೇಲ್ ಸ್ಟೇನ್, ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಆಡುತ್ತಿದ್ದು RCB ತಂಡಕ್ಕೆ ಜೈ ಅಂದಿದ್ದಾರೆ. ಸ್ಟೇನ್ ಕನ್ನಡದಲ್ಲೇ ’ಈ ಸಲ ಕಪ್ ನಮ್ದೇ’, ಗೋ RCB ಎಂದಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದೆಯಾದರೂ ಒಮ್ಮೆಯೂ ಕಪ್ ಗೆಲ್ಲಲು ಸಫಲವಾಗಿಲ್ಲ. ಇನ್ನು 2016ರ ಬಳಿಕ ಒಮ್ಮೆಯೂ ಪ್ಲೇ ಆಫ್ ಹಂತ ಪ್ರವೇಶಿಸಲು ಕೂಡಾ RCB ಪಡೆಗೆ ಸಾಧ್ಯವಾಗಿಲ್ಲ. ಈ ಬಾರಿ ಹೊಸ ಜೋಶ್’ನಲ್ಲಿ ಕಪ್ ಗೆಲ್ಲಲು ಬೆಂಗಳೂರು ಮೂಲದ ಫ್ರಾಂಚೈಸಿ ರಣತಂತ್ರ ರೂಪಿಸಿದೆ.

RCB ಸೇರಿದ ಕನ್ನಡಿಗ ಪವನ್ ದೇಶಪಾಂಡೆ ಜೊತೆ ಸುವರ್ಣನ್ಯೂಸ್.ಕಾಂ Exclusive ಮಾತು!

2019ರ ಡಿಸೆಂಬರ್ 19ರಂದು ಕೋಲ್ಕತಾದಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ಆಟಗಾರರನ್ನು ಖರೀದಿಸಿದೆ. ಡೇಲ್ ಸ್ಟೇನ್ ಅವರನ್ನು ಮೂಲ ಬೆಲೆ 2 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ RCB ಫ್ರಾಂಚೈಸಿ ಯಶಸ್ವಿಯಾಗಿತ್ತು. 

ಈ ಸಲ ಕಪ್ ನಮ್ದೆ ಎಂದ ಎಬಿಡಿ ಪುತ್ರ; ಎಬಿಡಿ ಆಟೋ ಪ್ರಯಾಣ ಹೇಗಿತ್ತು ನೋಡಿ

ಈ ಸಲನಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆದ್ದು, ಈ ಘೋಷಣೆಗೆ ಅರ್ಥ ಬರುವಂತೆ ಮಾಡಲಿ ಎನ್ನುವುದು ಅಸಂಖ್ಯಾತ ಅಭಿಮಾನಿಗಳ ಬಯಕೆಯಾಗಿದೆ. ಈ ಬಾರಿ ಕಪ್ ನಮ್ಮದಾಗುತ್ತೋ, ಚಿಪ್ ನಮ್ಮದಾಗುತ್ತೋ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.