ಈ ಸಲ ಕಪ್ ನಮ್ದೇ ಎಂದವರೆಲ್ಲ ಹಿಡಿದದ್ದು ಚಿಪ್ಪೇ...!

Ee Sala Cup Namde Tragedy Slogan
Highlights

ಆರ್’ಸಿಬಿ ಅಭಿಮಾನಿಗಳು ವಿರಾಟ್ ಪಡೆಯನ್ನು ಹುರಿದುಂಬಿಸಲು 'ಈ ಸಲ ಕಪ್ ನಮ್ದೇ' ಎಂಬ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡಿದ್ದರು. ಇದು ಎಷ್ಟು ಪ್ರಸಿದ್ಧವಾಯಿತೆಂದರೆ ಎಬಿ ಡಿವಿಲಿಯರ್ಸ್ ಮಗನಿಂದ ಹಿಡಿದು ವಿರಾಟ್ ಕೊಹ್ಲಿ ಬಾಯಲ್ಲೂ 'ಈ ಸಲ ಕಪ್ ನಮ್ದೇ' ಸರಾಗವಾಗಿ ಹರಿದಾಡತೊಡಗಿತು. ಆದರೆ ಈ ಬಾರಿ ಆ ಘೋಷಣೆ ಉಚ್ಚರಿಸಿದವರೆಲ್ಲ ಟೂರ್ನಿಯಿಂದ ಹೊರಬಿದ್ದು ನಿರಾಸೆ ಅನುಭವಿಸಿದ್ದಾರೆ.

ಬೆಂಗಳೂರು[ಮೇ.26]: 11ನೇ ಆವೃತ್ತಿಯ ಐಪಿಎಲ್’ನಲ್ಲಿ ಹೆಚ್ಚು ಗಮನ ಸೆಳೆದದ್ದು ಕಿಂಗ್ ಇಲೆವನ್ ಆಟಗಾರರ ಹರಾಜು ಹಾಗೂ 2 ವರ್ಷಗಳ ನಿಷೇಧದ ಬಳಿಕ ಟೂರ್ನಿಗೆ ಕಮ್’ಬ್ಯಾಕ್ ಮಾಡಿದ ಚೆನ್ನೈ ಸೂಪರ್’ಕಿಂಗ್ಸ್ ತಂಡದ ಪ್ರದರ್ಶನ. ಪಂಜಾಬ್ ಪ್ಲೇ ಆಫ್ ಪ್ರವೇಶಿಸುವ ಮುನ್ನವೇ ಟೂರ್ನಿಯಿಂದ ಹೊರಬಿದ್ದಿದ್ದರೆ, ಚೆನ್ನೈ ಫೈನಲ್ ಪ್ರವೇಶಿಸಿದೆ. ಇವೆರಡಕ್ಕಿಂತ ಹೆಚ್ಚು ಸದ್ದು ಮಾಡಿದ್ದು, ಈ ಸಲ ಕಪ್ ನಮ್ದೆ ಎನ್ನುವ ಘೋಷವಾಖ್ಯ.
ಹೌದು, ಆರ್’ಸಿಬಿ ಅಭಿಮಾನಿಗಳು ವಿರಾಟ್ ಪಡೆಯನ್ನು ಹುರಿದುಂಬಿಸಲು ಈ ಸಲ ಕಪ್ ನಮ್ದೆ ಎಂಬ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡಿದ್ದರು. ಇದು ಎಷ್ಟು ಪ್ರಸಿದ್ಧವಾಯಿತೆಂದರೆ ಎಬಿ ಡಿವಿಲಿಯರ್ಸ್ ಮಗನಿಂದ ಹಿಡಿದು ವಿರಾಟ್ ಕೊಹ್ಲಿ ಬಾಯಲ್ಲೂ ಸರಾಗವಾಗಿ ಹರಿದಾಡತೊಡಗಿತು. ಆದರೆ ಈ ಬಾರಿ ಆ ಘೋಷಣೆ ಉಚ್ಚರಿಸಿದವರೆಲ್ಲ ಟೂರ್ನಿಯಿಂದ ಹೊರಬಿದ್ದು ನಿರಾಸೆ ಅನುಭವಿಸಿದ್ದಾರೆ.
ಮೊದಲಿಗೆ ಆರ್’ಸಿಬಿ ನಾಯಕನ ಬಾಯಲ್ಲಿ ಈ ಸಲ ಕಪ್ ನಮ್ದೆ:
ಪಂಜಾಬ್ ಕನ್ನಡಿಗರ ಬಾಯಲ್ಲಿ ಈ ಸಲ ಕಪ್ ನಮ್ದೆ:
ಕೋಲ್ಕತಾ ಕನ್ನಡಿಗರ ಬಾಯಲ್ಲಿ ಈ ಸಲ ಕಪ್ ನಮ್ದೆ:
ಈ ಸಲ ಕಪ್ ನಮ್ದೆ ಎನ್ನುವರ ತಂಡಕ್ಕೆ ಸಿಕ್ಕಿದ್ದು ಕಪ್ ಅಲ್ಲ ಬದಲಾಗಿ ಚಿಪ್ಪು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮುಗ್ಗರಿಸುವ ಮೂಲಕ ಕಪ್ ಗೆಲ್ಲುವ ಆಸೆ ಕೈಚೆಲ್ಲಿತು. ಇನ್ನು ಪಂಜಾಬ್ ತಂಡದಲ್ಲಿದ್ದ ಕನ್ನಡಿಗರಾದ ಕೆ.ಎಲ್ ರಾಹುಲ್-ಕರುಣ್ ನಾಯರ್ ಆರಂಭದಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆಂದು ಗುರುತಿಸಿಕೊಂಡಿತ್ತು. ಆದರೆ ಕೊನೆಯಲ್ಲಿ ಸತತ 5 ಪಂದ್ಯಗಳಲ್ಲಿ ಮುಗ್ಗರಿಸುವ ಮೂಲಕ ಲೀಗ್ ಹಂತದಲ್ಲೇ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಇನ್ನು ಲೀಗ್ ಹಂತದಲ್ಲಿ ಬಲಿಷ್ಠ ಸನ್’ರೈಸರ್ಸ್ ಮಣಿಸಿ ಪ್ಲೇ ಆಫ್ ಹಂತ ಪ್ರವೇಶಿಸಿದ್ದ ಕೆಕೆಆರ್ ತಂಡದಲ್ಲಿರುವ ಕನ್ನಡಿಗರಾದ ರಾಬಿನ್ ಉತ್ತಪ್ಪ ಹಾಗೂ ಪ್ರಸಿದ್ಧ್ ಕೃಷ್ಣ ಗೆಲುವಿನ ಖುಷಿಯಲ್ಲಿ ಈ ಸಲ ಕಪ್ ನಮ್ದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್’ರೈಸರ್ಸ್ ವಿರುದ್ಧ 13 ರನ್’ಗಳ ಅಂತರದಲ್ಲಿ ಸೋಲು ಕಾಣುವ ಮೂಲಕ ಕೆಕೆಆರ್ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಂತಾಗಿದೆ.

loader