ಮುಂಬೈ(ನ.13): ಕೊರೋನಾ ವೈರಸ್ ಕಾರಣ ತಾತ್ಕಾಲಿಕವಾಗಿ ರದ್ದಾಗಿದ್ದ ಐಪಿಎಲ್ 2020 ಟೂರ್ನಿಗೂ ಕೊನೆಗೂ ದುಬೈನಲ್ಲಿ ಆಯೋಜಿಸಲಾಗಿತ್ತು. ಹೊಸ ಮಾರ್ಗಸೂಚಿ ಪ್ರಕಾರ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದೀಗ ಮುಂದಿನ ಐಪಿಎಲ್ ಟೂರ್ನಿಗೆ ಸಿದ್ಧತೆ ನಡೆಯುತ್ತಿದೆ. ಫ್ರಾಂಚೈಸಿಗಳು ಯಾವ ಆಟಗಾರರನ್ನು ರಿಲೀಸ್ ಮಾಡಬೇಕು, ಯಾರನ್ನು ಉಳಿಸಿಕೊಳ್ಳಬೇಕು ಅನ್ನೋ ಲೆಕ್ಕಾಚಾರದಲ್ಲಿದೆ.

ನಾನು ಬಲಿಷ್ಠರಾಗಿಯೇ ಕಮ್‌ಬ್ಯಾಕ್‌ ಮಾಡ್ತೇವೆ‌, ಆದ್ರೆ ರೈನಾರನ್ನು ವಾಪಾಸ್ ಕರೆಸಿಕೊಳ್ಳಲ್ಲ: ಸಿಎಸ್‌ಕೆ..

2021ರ ಐಪಿಎಲ್ ಟೂರ್ನಿಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಹಲವು ಆಟಗಾರರು ಅದಲು ಬದಲಾಗಲಿದ್ದಾರೆ. ಇನ್ನು 2020ರ ಐಪಿಎಲ್ ಟೂರ್ನಿ ಆರಂಭಕ್ಕೂ ಮೊದಲು ಚೆನ್ನೈಸೂಪರ್ ಕಿಂಗ್ಸ್ ತಂಡದಿಂದ ಹೊರ ನಡೆದ ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಇದೀಗ ಹೊಸ ತಂಡ ಸೇರಿಕೊಳ್ಳಲು ಸಜ್ಜಾಗಿದ್ದಾರೆ.

ಧೋನಿ ಪಡೆಗೆ ಮತ್ತೊಂದು ಶಾಕ್: ಸಿಎಸ್‌ಕೆ ತಂಡದಿಂದ ಹೊರಬಿದ್ದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ..!.

ಸಿಎಸ್‌ಕೆ ತಂಡ 2021ರ ಟೂರ್ನಿ ಹರಾಜಿಗೆ ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಇಬ್ಬರನ್ನೂ ತಂಡದಿಂದ ಕೈಬಿಡಲು ನಿರ್ಧರಿಸಿದೆ. ಹೀಗಾಗಿ ಈ ಇಬ್ಬರು ಕ್ರಿಕೆಟಿಗರು ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರನ್ ಮಳೆ ಸುರಿಸಿರುವ ರೈನಾ ಬಹುಬೇಡಿಕೆಯ ಕ್ರಿಕೆಟಿಗ, ಇತ್ತ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಸ್ಪಿನ್ ಮೋಡಿ ಮಾಡಿದ್ದಾರೆ. ಹೀಗಾಗಿ ಇಬ್ಬರು ಕ್ರಿಕೆಟಿಗರು ಇತರ ತಂಡ ಸೇರಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

2021ರ ಐಪಿಎಲ್ ಟೂರ್ನಿಗೆ ಹೊಸ ತಂಡವೊಂದು ಸೇರಿಕೊಳ್ಳುತ್ತಿದೆ ಎಂದು ಬಿಸಿಸಿಐ ಹೇಳುತ್ತಿದೆ. ದೀಪಾವಳಿ ಬಳಿಕ ಹೊಸ ತಂಡದ ಬಿಡ್ಡಿಂಗ್ ಹಾಗೂ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಹೊಸ ತಂಡ ಸೇರಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.

ಯಶಸ್ಸು ನೆತ್ತಿಗೇರಿದೆ: ರೈನಾ ಮೇಲೆ ಕಿಡಿಕಾರಿದ ಸಿಎಸ್‌ಕೆ ಬಾಸ್ ಶ್ರೀನಿವಾಸನ್‌..!.

ಸಿಎಸ್‌ಕೆ ತಂಡ ರೈನಾ ಹಾಗೂ ಹರ್ಭಜನ್ ಸಿಂಗ್ ಕೈಬಿಡುವುದು ಬಹುತೇಕ ಪಕ್ಕ ಆಗಿದೆ. ಹೀಗಾಗಿ ಹರಾಜಿನ ಮೂಲಕ ರೈನಾ ಹಾಗೂ ಭಜ್ಜಿ ಹೊಸ ತಂಡ ಸೇರಿಕೊಳ್ಳುವುದರಲ್ಲಿ ಅನಮಾನವಿಲ್ಲ. ಆದರೆ ಯಾವ ತಂಡ ರೈನಾ ಹಾಗೂ ಹರ್ಭಜನ್ ಖರೀದಿಯಲ್ಲಿ ಯಶಸ್ವಿಯಾಗಲಿದೆ ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ.