ಮಹಿಳಾ ಟೋಲ್ ಸಿಬ್ಬಂದಿ ಮೇಲೆ ಮಹಿಳೆಯಿಂದ ಹಲ್ಲೆ, ವೈರಲ್ ವಿಡಿಯೋ ಬೆನ್ನಲ್ಲೇ ಅರೆಸ್ಟ್!
ಟೋಲ್ ಕಟ್ಟಲು ನಿರಾಕರಿಸಿದ ಮಹಿಳೆ, ಸಿಬ್ಬಂದಿ ವಿರುದ್ಧವೇ ಎಗರಾಡಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಮಹಿಳೆ, ಟೋಲ್ ಬೂತ್ ಒಳಕ್ಕೆ ನುಗ್ಗಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಟೋಲ್ ಕಟ್ಟದೇ ಮುಂದೆ ಸಾಗಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಗ್ರೇಟರ್ ನೋಯ್ಡಾ (ಜು.17) ಟೋಲ್ ಗೇಟ್ ಬಳಿ ಗಲಾಟೆ, ಹೊಡೆದಾಟ ಹೊಸದಲ್ಲ. ಟೋಲ್ ಕಟ್ಟಲು ನಿರಾಕರಿಸಿ ಟೋಲ್ ಸಿಬ್ಬಂದಿ ಮೇಲೆ ಭೀಕರ ಹಲ್ಲೆಗಳು ನಡೆದಿದೆ. ಇದೀಗ ಮಹಿಳೆಯೊಬ್ಬರು ಟೋಲ್ ಕಟ್ಟಲು ನಿರಾಕರಿಸಿದ್ದಾರೆ. ಹೀಗಾಗಿ ಮುಂದೆ ಸಾಗಲು ಟೋಲ್ ಮಹಿಳಾ ಸಿಬ್ಬಂದಿ ಅನುವು ಮಾಡಿಕೊಟ್ಟಿಲ್ಲ. ಇದರಿಂದ ಕೆರಳಿ ಕೆಂಡವಾದ ಮಹಿಳೆ, ನೇರವಾಗಿ ವಾಹನದಿಂದ ಇಳಿದು ಟೋಲ್ ಬೂತ್ ಒಳಗೆ ನುಗ್ಗಿದ ಮಹಿಳೆ, ಸಿಬ್ಬಂದಿಯನ್ನು ಹಿಡಿದು ಎಳೆದಾಡಿದ್ದಾರೆ. ಮುಖ ಪರಚಿ, ಮಹಿಳಾ ಸಿಬ್ಬಂದಿಯನ್ನು ಕಳೆಕ್ಕೆ ಉರುಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿ, ಮಹಿಳೆಯನ್ನು ಬಂಧಿಸಿದ್ದಾರೆ.ಈ ಘಟನೆ ಗ್ರೇಟರ್ ನೋಯ್ಡಾದ ಲುಹಾರ್ಲಿ ಟೋಲ್ ಪ್ಲಾಜಾದಲ್ಲಿ ನಡೆದಿದೆ.
ಕಾರಿನಲ್ಲಿ ಆಗಮಿಸಿದ ಮಹಿಳೆ ಹಾಗೂ ಇತರ ಕೆಲ ಪ್ರಯಾಣಿಕರು ಟೋಲ್ ಕಟ್ಟಲು ನಿರಾಕರಿಸಿದ್ದಾರೆ. ಟೋಲ್ ಪ್ಲಾಜಾ ಸಮೀಪದಲ್ಲೇ ನಮ್ಮ ಮನೆ ಇದೆ. ನಾವು ಇಲ್ಲಿನ ಸ್ಥಳೀಯರು, ಹೀಗಾಗಿ ಟೋಲ್ ಕಟ್ಟುವುದಿಲ್ಲಿ ಎಂದು ಮಹಿಳೆ ಎಚ್ಚರಿಸಿದ್ದಾರೆ. ಇತ್ತ ಮಹಿಳಾ ಟೋಲ್ ಸಿಬ್ಬಂದಿ, ಸ್ಥಳೀಯರಾಗಿದ್ದರೆ ಗುರುತಿನ ಚೀಟಿ ತೋರಿಸಲು ಸೂಚಿಸಿದ್ದಾರೆ. ಐಡೆಂಟಿಟಿ ಕಾರ್ಡ್ ಇಲ್ಲ, ನಾವು ಟೋಲ್ ಕಟ್ಟೋದಿಲ್ಲ ಎಂದು ವಾಗ್ವಾದ ಆರಂಭಗೊಂಡಿದೆ. ಟೋಲ್ ಕಟ್ಟದೆ ಮುಂದೆ ಸಾಗಲು ಸಾಧ್ಯವಿಲ್ಲ ಎಂದು ಮಹಿಳಾ ಟೋಲ್ ಸಿಬ್ಬಂದಿ ಹೇಳಿದ್ದಾರೆ. ಇಷ್ಟೇ ಅಲ್ಲ ಟೋಲ್ ಗೇಟ್ ಒಪನ್ ಮಾಡಲು ಮಹಿಳಾ ಸಿಬ್ಬಂದಿ ನಿರಾಕರಿಸಿದ್ದಾರೆ. ಇದರಿಂದ ಕೆರಳಿದ ಮಹಿಳೆ ಕಾರಿನಿಂದ ಇಳಿದು ಟೋಲ್ ಬೂತ್ ಒಳಗೆ ನುಗ್ಗಿದ್ದಾರೆ.
ಜು.1ರಿಂದ ಬೆಂಗಳೂರು-ಮೈಸೂರು ಹೈವೇಯಲ್ಲಿ ಮತ್ತೊಂದು ಟೋಲ್ ಪ್ಲಾಜಾ: ಇಲ್ಲಿದೆ ಟೋಲ್ ದರ ವಿವರ
ಸಿಬ್ಬಂದಿ ಜೊತೆ ಮತ್ತೆ ವಾಗ್ವಾದ ಆರಂಭಗೊಳ್ಳುತ್ತಿದ್ದಂತೆ ನೇರವಾಗಿ ಹಲ್ಲೆ ಮಾಡಿದ್ದಾರೆ. ಮಹಿಳಾ ಸಿಬ್ಬಂದಿಯ ಮುಖವನ್ನು ಪರಚಿದ್ದಾರೆ. ಬಳಿಕ ಸಿಬ್ಬಂದಿಯನ್ನು ಕಳೆಕ್ಕೆ ಉರುಳಿಸಿದ್ದಾರೆ. ಹಲ್ಲೆ ಬಳಿಕ ಮಹಿಳೆ ಕಾರು ಹತ್ತಿ ಮುಂದೆ ಸಾಗಿದ್ದಾರೆ. ಇದೇ ವೇಳೆ ಇತರ ಸಿಬ್ಬಂದಿಗಳು ಸಮಸ್ಯೆ ಕುರಿತು ಕೇಳಿದ್ದಾರೆ. ಆದರೆ ಯಾವುದಕ್ಕೂ ಉತ್ತರಿಸಿದ ಮಹಿಳೆ, ಟೋಲ್ ಗೇಟ್ ತೆರೆದು ನೇರವಾಗಿ ಕಾರಿನ ಮೂಲಕ ಸಾಗಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶದ ದಾದ್ರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಬಳಿಕ ಕಾರಿನ ನೋಂದಣಿ ಸಂಖ್ಯೆ ಸೇರಿ ಇತರ ಮಾಹಿತಿ ಕಲೆ ಹಾಕಿ ಹಲ್ಲೆ ಮಾಡಿದ ಮಹಿಳೆಯನ್ನು ಬಂಧಿಸಿದ್ದಾರೆ.
ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಸರಣಿ ದರೋಡೆ ತಡೆಯಲು ಮರವೇರಿದ ಪೊಲೀಸರು
ಟೋಲ್ ಗಲಾಟೆ ಸಿಬ್ಬಂದಿ ಕೊಲೆಯಲ್ಲಿ ಅಂತ್ಯ
ಬೆಂಗಳೂರು - ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಭೂಮ್ ಬ್ಯಾರಿಯರ್(ಅಡ್ಡಗೋಲು) ಎತ್ತಲು ತಡವಾದ ಕಾರಣಕ್ಕೆ ಟೋಲ್ ಸಿಬ್ಬಂದಿ ಮತ್ತು ಯುವಕರ ಗುಂಪಿನೊಂದಿಗೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಇತ್ತೀಚೆಗೆ ನಡೆದಿತ್ತು. ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆಯ ಸಿಕ್ಕೆಪಾಳ್ಯ ವಾಸಿ ಪವನ್ ಕುಮಾರ್ ನಾಯಕ್(26) ಕೊಲೆಯಾದವರು. ಬೆಂಗಳೂರು ಮೂಲದ ನಾಲ್ವರು ಯುವಕರು ಕೃತ್ಯ ಎಸಗಿದವರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಮೈಸೂರು ಕಡೆಯಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ನಾಲ್ವರು ಯುವಕರು ಭಾನುವಾರ ರಾತ್ರಿ 9.30ರ ಸಮಯದಲ್ಲಿ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗೆ ಬಂದಿದ್ದಾರೆ. ಟೋಲ್ ಶುಲ್ಕ ಪಾವತಿಸಿದ ನಂತರ ಭೂಮ್ ಬ್ಯಾರಿಯರ್ ಎತ್ತಲು ಟೋಲ್ ಸಿಬ್ಬಂದಿ ತಡ ಮಾಡಿದ್ದಾರೆ. ಇದರಿಂದ ಕೋಪಗೊಂಡ ಯುವಕರು ಸಿಬ್ಬಂದಿ ಪವನ್ ಕುಮಾರ್ ನಾಯಕ್ ಸೇರಿದಂತೆ ಇತರರೊಂದಿಗೆ ಮಾತಿನ ಚಕಮಿಕಿ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.