Asianet Suvarna News Asianet Suvarna News

ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಸರಣಿ ದರೋಡೆ ತಡೆಯಲು ಮರವೇರಿದ ಪೊಲೀಸರು

ಯಮುನಾ ಎಕ್ಸ್‌ಪ್ರೆಸ್‌ ವೇಯಲ್ಲಿ ಪ್ರಯಾಣಿಸುವ ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡುವ ಹಲವು ಪ್ರಕರಣಗಳು ಇತ್ತಿಚೆಗೆ ಬೆಳಕಿಗೆ ಬಂದಿದ್ದು, ದರೋಡೆಕೋರರ ಹೆಡೆಮುರಿ ಕಟ್ಟಲು ಉತ್ತರ ಪ್ರದೇಶ ಪೊಲೀಸರು ಹೊಸ ಪ್ಲಾನ್ ಮಾಡಿದ್ದಾರೆ.

Mathura police climb the tree for prevent serial robbery on Yamuna Expressway akb
Author
First Published Jun 13, 2023, 3:13 PM IST | Last Updated Jun 13, 2023, 3:13 PM IST

ಉತ್ತರಪ್ರದೇಶ:  ಯಮುನಾ ಎಕ್ಸ್‌ಪ್ರೆಸ್‌ ವೇಯಲ್ಲಿ ಪ್ರಯಾಣಿಸುವ ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡುವ ಹಲವು ಪ್ರಕರಣಗಳು ಇತ್ತಿಚೆಗೆ ಬೆಳಕಿಗೆ ಬಂದಿದ್ದು, ದರೋಡೆಕೋರರ ಹೆಡೆಮುರಿ ಕಟ್ಟಲು ಉತ್ತರ ಪ್ರದೇಶ ಪೊಲೀಸರು ಹೊಸ ಪ್ಲಾನ್ ಮಾಡಿದ್ದಾರೆ. ಸಿವಿಲ್ ಡ್ರೆಸ್‌ನಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಮರವೇರಿ ಕುಳಿತು ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ. ವಾಹನ ಸಂದಣಿಯಿಂದ ತುಂಬಿರುವ ಯಮುನಾ ಎಕ್ಸ್‌ಪ್ರೆಸ್ ವೇಯಲ್ಲಿ ಇತ್ತೀಚೆಗೆ ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು.  ಈ ಹಿನ್ನೆಲೆಯಲ್ಲಿ ಮಥುರಾ ಪೊಲೀಸರು ಆರೋಪಿಗಳ ರೇಖಾಚಿತ್ರ ಬಿಡುಗಡೆ ಮಾಡಿದ್ದು ಅವರಿಗಾಗಿ ಬಲೆ ಬೀಸಿದ್ದಾರೆ. 

ವಾಹನಗಳ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ಟೋಲ್ ಪ್ಲಾಜಾಗಳಲ್ಲಿ  (Toll Plaza) ಎಕ್ಸ್‌ಪ್ರೆಸ್ ವೇಯಲ್ಲಿ (Yamuna Expressway) ದಾರಿ ಮಧ್ಯೆ ಎಲ್ಲೂ ವಾಹನಗಳನ್ನು ನಿಲ್ಲಿಸದಂತೆ ಸವಾರರಿಗೆ ಮೈಕ್‌ನಲ್ಲಿ ಹೇಳಿ ಎಚ್ಚರಿಸಲಾಗುತ್ತಿದೆ. ಮೇ. 29 ರಂದು ಇಲ್ಲಿ ಪಿಡಬ್ಲ್ಯುಡಿಯಲ್ಲಿ ಉದ್ಯೋಗಿಯಾಗಿದ್ದ ಇಂಜಿನಿಯರ್ ಓರ್ವರು ಪತ್ನಿ ಸಮೇತರಾಗಿ ಈ ರಸ್ತೆಯಲ್ಲಿ ಸಾಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಅವರ ಬಳಿ ಇದ್ದ ಹಣ ಹಾಗೂ ಜ್ಯುವೆಲ್ಲರಿಯನ್ನು ಅಪಹರಿಸಿದ್ದರು.  

ಬೆಂಗಳೂರು: ದರೋಡೆ ಪ್ರಕರಣದಲ್ಲಿ ಸ್ಯಾಂಟ್ರೋ ರವಿ ಪತ್ನಿ, ನಾದಿನಿಗೆ ಕ್ಲೀನ್‌ಚಿಟ್‌

ಇದಾದ ಬಳಿಕ ಜೂನ್ 2 ರಂದು ಇದೇ ರೀತಿ ಮತ್ತೊಂದು ದರೋಡೆ ಪ್ರಕರಣ ನಡೆದಿದ್ದು, ಫಿರೋಜಾಬಾದ್‌ನಿಂದ ದೆಹಲಿಗೆ ಹೊರಟ್ಟಿದ್ದ ದಿನಸಿ ದಲ್ಲಾಳಿ ಹಾಗೂ ಅವರೊಂದಿಗೆ ಇದ್ದ ಇತರ ಮೂವರನ್ನು ಅಡ್ಡಗಟ್ಟಿದ ದರೋಡೆಕೋರರು, ಅವರ ಬಳಿ ಇದ್ದ ಹಣ ಅಮೂಲ್ಯ ವಸ್ತುಗಳನ್ನು ದರೋಡೆ ಮಾಡಿದ್ದರು. ಎರಡು ಘಟನೆಗಳು ತಡರಾತ್ರಿಯಲ್ಲಿ ನಡೆದಿದ್ದವು, ವಾಹನಗಳ ಮೇಲೆ ಕಲ್ಲೆಸೆಯುತ್ತಿದ್ದ ದುಷ್ಕರ್ಮಿಗಳು,  ವಾಹನ ನಿಲ್ಲುತ್ತಿದ್ದಂತೆ ಸವಾರರನ್ನು ಮುತ್ತಿಕೊಂಡು ದರೋಡೆ ಮಾಡುತ್ತಿದ್ದರು. 

ಎರಡು ದರೋಡೆ ಪ್ರಕರಣ ಹಾಗೂ ಎರಡು ದರೋಡೆಗೆ ವಿಫಲ ಯತ್ನ ಪ್ರಕರಣ ದಾಖಲಾಗಿದ್ದವು. ಈ ವಿಫಲ ಯತ್ನ ಪ್ರಕರಣವೊಂದರಲ್ಲಿ ದರೋಡೆಕೋರರು ಎಸೆದ ಕಲ್ಲಿನಿಂದ ದೆಹಲಿ ಮೂಲದ ಮಹಿಳೆಯೊಬ್ಬರು ಗಾಯಗೊಂಡಿದ್ದರು. ಈ ಎಲ್ಲಾ ಪ್ರಕರಣಗಳ ಹಿನ್ನೆಲೆಯಲ್ಲಿ ಮಥುರಾ ಜಿಲ್ಲೆಯ ನೂರಕ್ಕೂ ಹೆಚ್ಚು ಪೊಲೀಸರನ್ನು ನಾಗರಿಕ ಧಿರಿಸಿನಲ್ಲಿ ಯಮುನಾ ಎಕ್ಸ್‌ಪ್ರೆಸ್‌ ವೇಯಲ್ಲಿ ಗಸ್ತಿಗೆ ಬಿಡಲಾಗಿದೆ.  ಪ್ರತಿ ಎರಡು ಕಿಲೋ ಮೀಟರ್‌ಗೆ ಒಬ್ಬರಂತೆ ಪೊಲೀಸರನ್ನು ನಿಯೋಜಿಸಲಾಗಿದೆ. ಗನ್ ಹಾಗೂ ಬೈನಾಕ್ಯೂಲರ್‌ಗಳನ್ನು ಹಿಡಿದ ಪೊಲೀಸರು ಮರಗಳನ್ನು ಏರಿ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.  ಪೊಲೀಸರಿಂದ ವಾಹನ ತಪಾಸಣೆ ಹೆಚ್ಚಾಗಿ ನಡೆಯುತ್ತಿದ್ದು, ಇದು ಮಥುರಾ ಪೊಲೀಸರ ಒಳ್ಳೆಯ ಕ್ರಮವಾಗಿದೆ ಎಂದು ಯಮುನಾ ಎಕ್ಸ್‌ಪ್ರೆಸ್‌ವೇ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿಯ ಅಧಿಕಾರಿಯೊಬ್ಬರು ಪೊಲೀಸರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಶಿರಾಡಿ: ಟ್ಯಾಂಕರ್‌ ಚಾಲಕನಿಗೆ ಹಲ್ಲೆಗೈದು ನಗದು ದರೋಡೆ

Latest Videos
Follow Us:
Download App:
  • android
  • ios