ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಸಂಚರಿಸುವ ವಾಹನಗಳಿಗೆ ಜು.1ರಿಂದ ಮತ್ತೊಂದು ಟೋಲ್‌ ಬರೆ ಬೀಳಲಿದೆ. ಈಗಾಗಲೇ ರಾಮನಗರದಲ್ಲಿ ಟೋಲ್‌ ಪಾವತಿಸುತ್ತಿರುವ ವಾಹನ ಮಾಲೀಕರು ಇನ್ನು ಮುಂದೆ ಮೈಸೂರಿಗೆ ತೆರಳಲು ಶ್ರೀರಂಗಪಟ್ಟಣ ಬಳಿಯ ಗಣಂಗೂರು ಸಮೀಪ ಆರಂಭಗೊಳ್ಳಲಿರುವ ಟೋಲ್‌ ಪ್ಲಾಜಾದಲ್ಲೂ ಹಣ ಪಾವತಿಸಬೇಕಿದೆ.

ಮಂಡ್ಯ (ಜೂ.30): ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಸಂಚರಿಸುವ ವಾಹನಗಳಿಗೆ ಜು.1ರಿಂದ ಮತ್ತೊಂದು ಟೋಲ್‌ ಬರೆ ಬೀಳಲಿದೆ. ಈಗಾಗಲೇ ರಾಮನಗರದಲ್ಲಿ ಟೋಲ್‌ ಪಾವತಿಸುತ್ತಿರುವ ವಾಹನ ಮಾಲೀಕರು ಇನ್ನು ಮುಂದೆ ಮೈಸೂರಿಗೆ ತೆರಳಲು ಶ್ರೀರಂಗಪಟ್ಟಣ ಬಳಿಯ ಗಣಂಗೂರು ಸಮೀಪ ಆರಂಭಗೊಳ್ಳಲಿರುವ ಟೋಲ್‌ ಪ್ಲಾಜಾದಲ್ಲೂ ಹಣ ಪಾವತಿಸಬೇಕಿದೆ. ಈ ಮೂಲಕ ಈ ಹೆದ್ದಾರಿಯಲ್ಲಿ ಓಡಾಡುವ ಪ್ರಯಾಣಿಕರಿಗೆ ಡಬಲ್‌ ಟೋಲ್‌ ಹೊರೆ ಬೀಳುವಂತಾಗಲಿದೆ.

ಈಗಾಗಲೇ ರಾಮನಗರ ಜಿಲ್ಲೆಯ ಕಣಮಿಣಕಿ ಬಳಿಯ ಟೋಲ್‌ಪ್ಲಾಜಾದಲ್ಲಿ ಫೆಬ್ರವರಿ ಅಂತ್ಯದಿಂದಲೇ ಟೋಲ್‌ ಸಂಗ್ರಹಿಸಲಾಗುತ್ತಿದೆ. ಆದರೆ ಆಗ ನಿಡಘಟ್ಟದಿಂದ ಮೈಸೂರಿನವರೆಗಿನ ರಸ್ತೆ ಕಾಮಗಾರಿ ಪೂರ್ಣವಾಗಿರದ ಕಾರಣ ಟೋಲ್‌ ವಸೂಲಿ ಮಾಡುತ್ತಿರಲಿಲ್ಲ. ನಿಡಘಟ್ಟದಿಂದ ಮೈಸೂರು ಪ್ರವೇಶಿಸುವ ಮಣಿಪಾಲ್‌ ಆಸ್ಪತ್ರೆವರೆಗಿನ ಮಾರ್ಗ 60 ಕಿ.ಮೀ. ದೂರವಿದ್ದು, ಈ ಮಾರ್ಗದಲ್ಲಿರುವ ಗಣಂಗೂರಲ್ಲಿ ಸ್ಥಾಪಿಸಿರುವ ಟೋಲ್‌ ಪ್ಲಾಜಾದಲ್ಲಿ ಜು.1ರಿಂದ ಶುಲ್ಕ ಸಂಗ್ರಹಣೆಗೆ ಅನುಮತಿ ನೀಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ಪ್ರಕಟಣೆ ಹೊರಡಿಸಿದೆ.

ಆ.11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಶುರು: ಸಂಸದ ಬಿ.ವೈ.ರಾ​ಘ​ವೇಂದ್ರ

ಕಣಮಿಣಕಿಯಿಂದ ನಿಡಘಟ್ಟದ ವರೆಗಿನ ಏಕಮುಖ ಸಂಚಾರಕ್ಕೆ ಕಾರುಗಳಿಗೆ 165 ಸಂಗ್ರಹಿಸಲಾಗುತ್ತಿದೆ. ಇದೀಗ ಗಣಂಗೂರು ಬಳಿ ಆರಂಭಗೊಂಡಿರುವ ಟೋಲ್‌ನಲ್ಲಿ ಮತ್ತೆ .155 ಶುಲ್ಕ ನಿಗದಿಪಡಿಸಲಾಗಿದೆ. ಇದರಿಂದ ಈ ಮಾರ್ಗದಲ್ಲಿ ಏಕಮುಖ ಸಂಚಾರಕ್ಕೆ ಕಾರು ಪ್ರಯಾಣಿಕರು .320 ದರ ಕಟ್ಟುವುದು ಅನಿವಾರ್ಯವಾಗಲಿದೆ. 24 ತಾಸಿನೊಳಗಿನ ದ್ವಿಮುಖ ಸಂಚಾರಕ್ಕೆ ಕಣಮಿಣಕಿ ಬಳಿ 250 ಹಾಗೂ ಗಣಂಗೂರು ಬಳಿಯ ಟೋಲ್‌ ಫ್ಲಾಜಾದಲ್ಲಿ 235 ಶುಲ್ಕ ಪಾವತಿಸಬೇಕು. ಈ ಮೂಲಕ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ದ್ವಿಮುಖ ಸಂಚಾರಕ್ಕೆ ಕಾರು ಮಾಲಕರು 485 ಪಾವತಿಸುವುದು ಅನಿವಾರ್ಯವಾಗಲಿದೆ.

ಟೋಲ್‌ ಪ್ಲಾಜಾದ 20 ಕಿ.ಮೀ. ವಿಸ್ತೀರ್ಣ ವ್ಯಾಪ್ತಿಯ ಎಲ್ಲಾ ವಾಣಿಜ್ಯೇತರ ವಾಹನಗಳಿಗೆ 330 ತಿಂಗಳ ಪಾಸ್‌ ಕಲ್ಪಿಸಿದ್ದು, ಟೋಲ್‌ ಪ್ಲಾಜಾ ವ್ಯಾಪ್ತಿಯ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡ ವಾಣಿಜ್ಯ ವಾಹನಗಳಿಗೆ ಶೇ.50ರಷ್ಟುರಿಯಾಯ್ತಿ ಸಿಗಲಿದೆ. ಜು.1ರಂದು ಬೆಳಗ್ಗೆ 8ರಿಂದಲೇ ಟೋಲ್‌ ಸಂಗ್ರಹ ಕಾರ್ಯ ಆರಂಭವಾಗಲಿದೆ.

ಬಡ ಜನರಿಗೆ ಅಕ್ಕಿ ಕೊಡಿ ಎಂದು ಹೇಳುವ ಕರ್ತವ್ಯ ಪ್ರಜ್ಞೆ ಬಿಜೆಪಿಗಿಲ್ಲ: ಸಚಿವ ಎಚ್‌.ಕೆ.ಪಾಟೀಲ್‌

ಗಣಂಗೂರು ಬಳಿ ಟೋಲ್‌ ಶುಲ್ಕ
ವಾಹನಗಳು ಏಕಮುಖ ದ್ವಿಮುಖ ಸಂಚಾರ

ಕಾರು/ಜೀಪು​​ 155​ 235
ಲಘು ವಾಣಿಜ್ಯ ವಾಹನ/ಸರಕು ವಾಹನ/ಮಿನಿಬಸ್‌ 250 375
ಟ್ರಕ್‌/ಬಸ್‌(2 ಆಕ್ಸೆಲ್‌) 525​ 790
ವಾಣಿಜ್ಯ ವಾಹನ (3 ಆಕ್ಸೆಲ್‌) 575 860
ಭಾರೀ ವಾಹನಗಳು 825 1240
7ಕ್ಕಿಂತ ಹೆಚ್ಚು ಆಕ್ಸಲ್‌ ವಾಹನ 1005 1510