Asianet Suvarna News Asianet Suvarna News

11 ಜನ ಮಕ್ಕಳಿದ್ದರೂ ಒಬ್ಬಂಟಿ ಈ ತಾಯಿ, 78ರ ಇಳಿವಯಸ್ಸಿನಲ್ಲಿ ದಯಾಮರಣಕ್ಕೆ ಹೆತ್ತವ್ವ ಮನವಿ!

ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಒಬ್ರು ಅಜ್ಜಿಗೆ ಬರೋಬ್ಬರಿ 11 ಜನ ಮಕ್ಕಳು. ಆದರೆ ಒಬ್ಬೇ ಒಬ್ಬ ಮಕ್ಕಳು ತಾಯಿಯನ್ನು ನೋಡಿಕೊಳ್ಳುತ್ತಿಲ್ಲ. ಹೀಗಾಗಿ ಈ ತಾಯಿ  ಈ ತಾಯಿ ದಯಾಮರಣಕ್ಕೆ ಮನವಿ ಮಾಡಲು ತೀರ್ಮಾನಿಸಿ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬಂದಿದೆ.

11 children's  deny to care Haveri old age mother demand for euthanasia gow
Author
First Published Sep 22, 2022, 5:28 PM IST

ವರದಿ: ಪವನ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಹಾವೇರಿ (ಸೆ.22): ಏನು ಕಾಲ ಬಂತ್ರಿ. ಹೆತ್ತ ತಾಯಿಗೆ ಒಂದು ತುತ್ತು ಹಾಕದ ಕೆಟ್ಟ ಮಕ್ಕಳ ಕಾಲ. ವಯಸ್ಸಾದ ಹೆತ್ತವ್ವನನ್ನು ಬೀದಿಯಲ್ಲಿ ಬಿಟ್ಟು ಹೋಗೋ ಪಾಪಿ ಮಕ್ಕಳ ಕಾಲ. ಹಾವೇರಿ ಜಿಲ್ಲೆ ರಾಣೆಬೆನ್ನೂರಿನ 78ರ ಹರೆಯದ ಇಳಿವಯಸ್ಸಿನ ಅಜ್ಜಿಗೆ ಬರೋಬ್ಬರಿ 11 ಜನ ಮಕ್ಕಳು. ಆದರೆ ಒಬ್ಬೇ ಒಬ್ಬರು ಅಮ್ಮಾ ನೀ ಹೇಗಿದಿಯಾ ಅಂತಾನೂ ಕೇಳೋರಿಲ್ಲ. ಹೀಗಾಗಿ ಈ ತಾಯಿ ದಯಾಮರಣಕ್ಕೆ ಮನವಿ ಮಾಡಲು ತೀರ್ಮಾನಿಸಿ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲುಗಳನ್ನು ಹತ್ತಲಾಗದೇ ನಡುಗುತ್ತ ನಿಂತು ಕೊಂಡಿದೆ. ವಯೋಸಹಜ ಅನಾರೋಗ್ಯ, ನಿಂತುಕೊಳ್ಳೋಕೂ ತ್ರಾಣವಿಲ್ಲ. ಕಣ್ಣಲ್ಲಿ ನೀರಾಡುತ್ತಿದೆ‌. ಕೊನೆ ದಿನಗಳಲ್ಲಿ ಯಾರಾದರೂ ನನ್ನ ಸಹಾಯಕ್ಕೆ ಬರುತ್ತಾರೆ ಎಂದು ಕಾಯುತ್ತಿದೆ ಈ ತಾಯಿ ಜೀವ.  ಮುಂದಕ್ಕೆ ಹತ್ತಲಾಗದೆ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲುಗಳ ಮೇಲೆ ಕುಳಿತಿರೋ ಈ ಅಜ್ಜಿ ಹೆಸರು ಪುಟ್ಟವ್ವ ಕೊಟ್ಟೂರು. 78 ವರ್ಷ ವಯಸ್ಸು. ಈ ಗಟ್ಟಿ ಜೀವ ಹೆತ್ತಿರೋದು 11 ಜನ ಮಕ್ಕಳನ್ನು ಅಂದರೆ ನೀವು ನಂಬಲೇಬೇಕು. ಆದರೆ ಈ ತಾಯಿಯನ್ನು ನೋಡಿಕೊಳ್ಳೋಕೆ ಯಾರೂ ದಿಕ್ಕಿಲ್ಲವಂತೆ.

ಹೆತ್ತ ಮಕ್ಕಳಿಂದಲೇ ರೋಸಿಹೋದ ವೃದ್ದೆ ಮಾಡಿದ್ದು ಕೇಳಿದರೆ ಮನಸ್ಸು ಅಯ್ಯೋ ಅನ್ನುತ್ತೆ. ಈ 78 ನೇ ವಯಸ್ಸಿನಲ್ಲಿ ನನ್ನ ನೋಡಿಕೊಳ್ಳೋಕೆ ಯಾರೂ ಇಲ್ಲವಲ್ಲ ಅಂತ ಅಳುತ್ತಾ ಈ ಅಜ್ಜಿ  ಹಾವೇರಿ ಡಿ.ಸಿ ಕಛೇರಿ ಕಡೆ ಬಂದಿದ್ರು. ಜಿಲ್ಲಾಧಿಕಾರಿ ಅವರ ಮೂಲಕ  ರಾಷ್ಟ್ರಪತಿಗಳಿಗೆ  ದಯಾಮರಣ ಕೋರಿ ಅರ್ಜಿ ಸಲ್ಲಿಸೋಕೆ ಬಂದಿದ್ರು. ನನ್ನ ಯಜಮಾನನಿಗೆ ಸೇರಬೇಕಾದ ಆಸ್ತಿಯನ್ನ ನನಗೆ ಕೊಟ್ಟುಬಿಡಿ ಎಂದು ಮಕ್ಕಳನ್ನ ಅಂಗಲಾಚುತ್ತಿರೋ ಪುಟ್ಟವ್ವನ ಕೂಗಿಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಮಕ್ಕಳಿಂದ ಬೇಸತ್ತು ಇಂದು  ಜಿಲ್ಲಾಧಿಕಾರಿ ಭೇಟಿಗೆ ಬಂದ ವೃದ್ಧೆ ಮೆಟ್ಟಿಲು ಏರಲಾಗದೇ ಕುಳಿತುಬಿಟ್ಟಿದ್ರು.

ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಿಲಮೇಲೆ ಕುಳಿತು ಕಣ್ಣಿರಿಟ್ಟ ವಯೋವೃದ್ದೆ ಪುಟ್ಟವ್ವ ಕೊಟ್ಟೂರು, ಡಿಸಿ ಆಫೀಸಿಗೆ  ಹೋಗಿ ಬರೋರ ಮುಂದೆ ತಮ್ಮ ಗೋಳು ತೋಡಿಕೊಂಡರು. ಹನ್ನೊಂದು ಮಕ್ಕಳ ಪೈಕಿ ಯಾರೂ ನನ್ನನ್ನ ನೋಡಿಕೊಳ್ಳುತ್ತಿಲ್ಲ. ನನಗೆ ಜೀವನವೇ ಬೇಡವಾಗಿದೆ‌. ನನಗೆ ದಯಾಮರಣ ನೀಡಿ ಎಂದು ಡಿಸಿಯವರ ಮೂಲಕ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದರು. 25 ಎಕರೆ ಜಮೀನಿದೆ. ರಾಣೆಬೆನ್ನೂರಿನಲ್ಲಿ 7 ಗಂಡು ಮಕ್ಕಳಿಗೆ 7 ಮನೆಗಳಿದೆ. ಆದರೆ ಆ ಮನೆಗಳಿಗೆ ತಾಯಿಗೆ ಒಂಚೂರು  ಜಾಗ ಇಲ್ಲ. ನನಗೆ ಜೀವನವೇ ಸಾಕಾಗಿದೆ ಎಂದು ದಯಾಮರಣಕ್ಕೆ ಅರ್ಜಿ ಹಾಕಿದ ಪುಟ್ಟವ್ವ ಕೊಟ್ಟೂರು ದುಃಖಿಸೋದು ಅಲ್ಲಿದ್ದ ಜನರಿಗೇ ನೋಡಲಾಗಲಿಲ್ಲ.

ಒಪ್ಪೊತ್ತಿನ ಊಟಕ್ಕೂ ಪರದಾಟ: ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ಬಿಎಂಟಿಸಿ ಡ್ರೈವರ್

ಗಂಡನ ಹೆಸರಿಗೆ ಇರುವ ಆಸ್ತಿಯನ್ನ ನನ್ನ ಹೆಸರಿಗೆ ಮಾಡಿಕೊಳ್ಳಲು ಬಿಡುತ್ತಿಲ್ಲ ಎಂದು ಕಣ್ಣೀರಿಟ್ಟರು. ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಬಂದ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಆಶು ನದಾಫ್  , ಅಜ್ಜಿಗೆ ಸಮಾಧಾನ ಪಡಿಸಿದರು. ನಿಮ್ಮ ಜೊತೆ ನಾವಿದ್ದೇವೆ. ನೀವು ಇಷ್ಟ ಪಟ್ಟರೆ ಒಳ್ಳೆ ವೃದ್ಧಾಶ್ರಮಕ್ಕೆ ಸೇರಿಸುತ್ತೇವೆ ಎಂದು ಭರವಸೆ ನೀಡಿದರು.‌ ಮಕ್ಕಳು ಆಸ್ತಿ ವಿಚಾರದಲ್ಲಿ ತಂಟೆ ಮಾಡಿದರೆ ಕಂದಾಯ ಉಪವಿಭಾಗಾಧಿಕಾರಿಗಳಿಗೆ ತಿಳಿಸುತ್ತೇವೆ. ಅವರೇ ನಿಮಗೆ ನ್ಯಾಯ ದೊರಕಿಸಿಕೊಡುತ್ತಾರೆ ಎಂದು ಭರವಸೆ ನೀಡಿದರು.

BIG 3: ರಸ್ತೆ ಸರಿ ಮಾಡಿಸಿ, ಇಲ್ಲಾ ದಯಾಮರಣ ಕೊಡಿ: ರಾಷ್ಟ್ರಪತಿಗೆ 78 ಕುಟುಂಬಗಳ ಅರ್ಜಿ
 
ಪ್ರತಿನಿತ್ಯ ಕಣ್ಮುಂದೆ ಓಡಾಡಿದರೂ  ತಾಯಿಯ ಗೋಳು ಏನು ಅಂತ ಮಕ್ಕಳೇ ಕೇಳೋದಿಲ್ಲ.  11 ಜನ ಮಕ್ಕಳಲ್ಲಿ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಗೆ ಮದುವೆ ಆಗಿ ಸಂಸಾರ ನಡೆಸಿದ್ದಾರೆ. ಅವರ ಬಳಿ ಹೋದರೆ ಗಂಡ- ಹೆಂಡತಿ ನಡುವೆ ಬರಬೇಡ ಅಂತಾರೆ ಅಂತ ವೃದ್ದೆ ಕಣ್ಣೀರು ಹಾಕಿದರು. ಸದ್ಯ ವಯೋವೃದ್ದೆ ಪುಟ್ಟವ್ವಳನ್ನು ಅವರ ಕಿರಿ ಮಗ ಗೋವಿಂದ್ ನೋಡಿಳ್ಳೋಕೆ ಮುಂದಾದರೂ ಹಿರಿಯ ಮಕ್ಕಳು ಬಿಡುತ್ತಿಲ್ಲ, ತೊಂದರೆ ಕೊಡ್ತಾರೆ ಅಂತ ತಾಯಿ ತಮ್ಮ ನೋವು ತೋಡಿಕೊಂಡರು. 11 ಜನ ಮಕ್ಕಳಿದ್ರೂ ಒಬ್ರಿಗೂ ಹೆತ್ತವ್ವ ಬೇಡ ಅಂದರೆ ನಾಚಿಕೆಗೇಡು ಅಂತ ಜನ ತಾಯಿಯ ಗೋಳು ಕೇಳಿ ಜನ ಛೀಮಾರಿ ಹಾಕುತ್ತಿದ್ದಾರೆ. 

Follow Us:
Download App:
  • android
  • ios