ಮಾಫಿಯಾ ಡಾನ್ ಅತೀಕ್ ಅಹಮ್ಮದ್ ಹಾಗೂ ಆತನ ಸಹೋದರನ ಹತ್ಯೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ಇದೇ ವೇಳೆ  ಪೊಲೀಸರ ನಡುವೆ ಅತೀಕ್ ಹತ್ಯೆ ಕುರಿತು ಎದ್ದಿರುವ ಹಲವು ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ಕೇಳಿದೆ.

ನವದೆಹಲಿ(ಏ.28): ಉತ್ತರ ಪ್ರದೇಶವನ್ನು ನಡುಗಿಸಿದ್ದ ಮಾಫಿಯಾ ಡಾನ್ ಅತೀಕ್ ಅಹಮ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹಮ್ಮದ್ ಹತ್ಯೆ ವಿಚಾರಣೆ ಆರಂಭಗೊಂಡಿದೆ. ಪೊಲೀಸರ ಭದ್ರತೆ ನಡುವೆ ಪತ್ರಕರ್ತರ ಸೋಗಿನಲ್ಲಿ ಬಂದ ಹಂತಕರು ಗುಂಡಿನ ದಾಳಿ ನಡೆಸಿ ಅತೀಕ್ ಹಾಗೂ ಅಶ್ರಫ್ ಹತ್ಯೆಗೈದಿದ್ದರು. ಇದು ಯುಪಿ ಸರ್ಕಾರ ನಡೆಸಿ ವ್ಯವಸ್ಥಿತ ದಾಳಿ ಎಂದು ವಿಪಕ್ಷಗಳು ಆರೋಪಿಸಿತ್ತು. ಇದರ ನಡುವೆ ಹಲವು ಅರ್ಜಿಗಳು ಸಲ್ಲಿಕೆಯಾಗಿತ್ತು. ಇದೀಗ ವಿಚಾರಣೆ ಆರಂಭಿಸಿರುವ ಸುಪ್ರೀಂ ಕೋರ್ಟ್ ಅತೀಕ್ ಹಾಗೂ ಅಶ್ರಫ್ ಮೇಲೆ ದಾಳಿಯ ಬೆನ್ನಲ್ಲೇ ಪೊಲೀಸರು ಆಸ್ಪತ್ರೆಗೆ ಯಾಕೆ ದಾಖಲಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಳಿದೆ.

ಸುಪ್ರೀಂ ಕೋರ್ಟ್ ಜಸ್ಟೀಸ್ ಎಸ್ ರವೀಂದ್ರ ಭಟ್, ದೀಪಾಂಕರ್ ದತ್ತ ದ್ವಿಸದಸ್ಯ ಪೀಠ, ಉತ್ತರ ಪ್ರದೇಶ ಸರ್ಕಾರದ ಬಳಿಕ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿದೆ. ಕೆಲ ಪ್ರಶ್ನೆಗಳನ್ನು ಎತ್ತಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮೂರು ವಾರಗಳ ಬಳಿಕ ಮಾಡುವುದಾಗಿ ಮುಂದೂಡಿದೆ. ಅತೀಕ್ ಹಾಗೂ ಅಶ್ರಫ್ ಹತ್ಯೆ ಬಳಿಕ ಉತ್ತರ ಪ್ರದೇಶ ಕೈಗೊಂಡ ತನಿಖೆ ಎಲ್ಲಿಗೆ ಬಂದಿದೆ. ಅತೀಕ್ ಹಾಗೂ ಅಶ್ರಫ್‌ನನ್ನು ಜೈಲಿನಿಂದ ಕರೆದುಕೊಂಡ ಬಂದ ವಾಹನದಲ್ಲಿ ಹತ್ಯೆ ಬಳಿಕ ಆಸ್ಪತ್ರೆ ದಾಖಲಿಸಿಲ್ಲ ಯಾಕೆ? ಎಂದು ಯುಪಿ ಸರ್ಕಾರವನ್ನು ಕೇಳಿದೆ. ಈಗಾಗಲೆ ವಿಶೇಷ ತನಿಖಾ ಸಮಿತಿ ರಚಿಸಲಾಗಿದೆ. ಸಮಗ್ರವಾಗಿ ತನಿಖೆ ನಡೆಯುತ್ತಿದೆ. ಶೀಘ್ರದಲ್ಲೇ ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಸರ್ಕಾರ ಹೇಳಿದೆ.

ಅತೀಕ್‌ ಹತ್ಯೆಗೆ ಪ್ರತೀಕಾರದ ಎಚ್ಚರಿಕೆ ನೀಡಿದ ಅಲ್‌ಖೈದಾ: ಗ್ಯಾಂಗ್‌ಸ್ಟರ್‌ನನ್ನು ಹುತಾತ್ಮ ಎಂದ ಉಗ್ರ ಸಂಘಟನೆ

ಅತೀಕ್‌ ಹತ್ಯೆಗೆ ಅಲ್‌ಖೈದಾ ಪ್ರತೀಕಾರದ ಎಚ್ಚರಿಕೆ
ಹತ್ಯೆಯಾದ ಅತೀಕ್‌ ಅಹ್ಮದ್‌ ಮತ್ತು ಅಶ್ರಫ್‌ ಸೋದರರನ್ನು ಹುತಾತ್ಮರು ಎಂದು ಕರೆದಿರುವ ಉಗ್ರ ಸಂಘಟನೆ ಅಲ್‌ಖೈದಾ, ಇವರ ಸಾವಿಗೆ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಶುಕ್ರವಾರ ಎಚ್ಚರಿಕೆ ನೀಡಿದೆ.ಈದ್‌ ಪ್ರಯುಕ್ತ ಶುಭಾಷಯ ಸಂದೇಶ ಬಿಡುಗಡೆ ಮಾಡಿರುವ ಅಲ್‌ ಖೈದಾ ಭಾರತಕ್ಕೆ ಎಚ್ಚರಿಕೆ ನೀಡಿದೆ. ಸುಮಾರು 7 ಪುಟಗಳ ಮ್ಯಾಗಜಿನ್‌ ಬಿಡುಗಡೆ ಮಾಡಿರುವ ಸಂಘಟನೆ, ಮುಸ್ಲಿಮರನ್ನು ಸ್ವತಂತ್ರಗೊಳಿಸುವುದಾಗಿ ಹೇಳಿದೆ.ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಹಾಗೂ ಆತನ ಸೋದರನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದ ಸಮಯದಲ್ಲಿ ದಾಳಿ ಮಾಡಿದ ಮೂವರು ಅತೀಕ್‌ ಸೋದರರನ್ನು ಹತ್ಯೆ ಮಾಡಿದ್ದರು.

ಹತ್ಯೆಯಾದ ಗ್ಯಾಂಗ್‌ಸ್ಟಾರ್ ಅತೀಕ್‌ ಸಾವಿರಾರು ಕೋಟಿಯ ಒಡೆಯ

ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಮತ್ತು ಆತನ ಸೋದರ ಅಶ್ರಫ್‌ನ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ), ಆರೋಪಿಗಳೊಂದಿಗೆ ಹತ್ಯೆ ಘಟನೆಯನ್ನು ಮರುಸೃಷ್ಟಿಮಾಡಿದ್ದಾರೆ. ಸಮಾಜವಾದಿ ಪಕ್ಷದ ಮಾಜಿ ಸಂಸದ ಅತೀಕ್‌ ಹಾಗೂ ಆತನ ಸೋದರನ ಹತ್ಯೆ ನಡೆದ ಆಸ್ಪತ್ರೆಯ ಬಳಿಗೆ ಮೂವರು ಆರೋಪಿಗಳನ್ನು ಕರೆದೊಯ್ದ ಪೊಲೀಸರು, ಅತೀಕ್‌ ಮತ್ತು ಅಶ್ರಫ್‌ನಂತೆ ಇಬ್ಬರಿಗೆ ವೇಷ ಧರಿಸಿ ಕರೆದೊಯ್ಯುವ ಮೂಲಕ ಘಟನೆಯನ್ನು ಮರುಸೃಷ್ಟಿಸಿದರು. ಈ ವೇಳೆ ಇಬ್ಬರು ವ್ಯಕ್ತಿಗಳು ಪತ್ರಕರ್ತರ ನಡುವೆ ಪೊಲೀಸರ ಜೊತೆ ನಡೆದು ಹೋಗುತ್ತಿದ್ದಾಗ, ಓರ್ವ ವ್ಯಕ್ತಿ ಹಿಂದಿನಿಂದ ಅತೀಕ್‌ನ ತಲೆಗೆ ಅತೀ ಹತ್ತಿರದಲ್ಲಿ ಗನ್‌ ಇಟ್ಟು ಗುಂಡು ಹಾರಿಸಿದ. ಬಳಿಕ ಇನ್ನಿಬ್ಬರು ಅನೇಕ ಬಾರಿ ಸೋದರರಿಬ್ಬರ ಮೇಲೆ ಗುಂಡು ಹಾರಿಸಿದರು. ಕೆಲವೇ ಕ್ಷಣಗಳಲ್ಲಿ ಮೂವರನ್ನು ಪೊಲೀಸರು ಬಂಧಿಸಿದರು