Divorce settlement amount: ಕೌಟುಂಬಿಕ ಕಲಹದ ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿಯೊಬ್ಬರ ಮಾಸಿಕ 6 ಲಕ್ಷ ರೂಪಾಯಿಗಳ ಪರಿಹಾರದ ಬೇಡಿಕೆಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಆ ವಿಚಾರಣೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತಿಂಗಳಿಗೆ 6 ಲಕ್ಷ ಪರಿಹಾರ ಕೇಳಿದ ಪತ್ನಿ
ನವದೆಹಲಿ: ಕೌಟುಂಬಿಕ ಕಲಹದ ನಂತರ ವಿಚ್ಛೇದನ ಪ್ರಕರಣದಲ್ಲಿ ಪ್ರತಿ ತಿಂಗಳು ಪತಿ ತನಗೆ 6 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಕೇಳಿದ ಮಹಿಳೆಯ ಮನವಿಯನ್ನು ನ್ಯಾಯಾಧೀಶರು ತಿಸ್ಕರಿಸಿದಲ್ಲದೇ ಇಷ್ಟೊಂದು ಅತೀಯಾದ ಬೇಡಿಕೆಗೆ ಅಚ್ಚರಿ ಪಟ್ಟಿದ್ದಾರೆ. ಹೌದು ಕೌಟುಂಬಿಕ ನ್ಯಾಯಾಲಯದ ಕೋರ್ಟ್ ವಿಚಾರಣೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತನಗೆ ಮಾಸಿಕವಾಗಿ 6,16,300 ರೂಪಾಯಿ ಪರಿಹಾರ ನೀಡಬೇಕು ಎಂದು ಕೇಳಿದ ಮಹಿಳೆಯ ಮನವಿಯನ್ನು ನ್ಯಾಯಾಲಯ ನಿರಾಕರಿಸಿದೆ.
ನ್ಯಾಯಾಧೀಶರು ಹೇಳಿದ್ದೇನು?
ಇದೆಲ್ಲವನ್ನು ಒಬ್ಬ ವ್ಯಕ್ತಿ ಹೊಂದಿರಬೇಕು ಎಂದು ದಯವಿಟ್ಟು ಕೋರ್ಟ್‌ಗೆ ಹೀಗೆ ಹೇಳಬೇಡಿ ಎಂದು ನ್ಯಾಯಾಧೀಶರು ಹೇಳುವುದರೊಂದಿಗೆ ಈ ವೀಡಿಯೋ ಆರಂಭವಾಗುತ್ತದೆ. ವೀಡಿಯೋದಲ್ಲಿ ನ್ಯಾಯಾಧೀಶರು 6,16,300 ರೂಪಾಯಿ ತಿಂಗಳಿಗೆ ಮಾಸಿಕ ಪರಿಹಾರ, ಯಾರಾದರೂ ತಿಂಗಳಿಗೆ ಇಷ್ಟೊಂದು ಹಣ ವೆಚ್ಚ ಮಾಡ್ತಾರಾ? ಅದು ಅಲ್ಲದೇ ಆಕೆ ಒಂಟಿ ಮಹಿಳೆ, ಅವರೊಬ್ಬರಿಗಾಗಿ ಆಕೆ ಅಷ್ಟೊಂದು ಹಣ ವೆಚ್ಚ ಮಾಡುತ್ತಾರಾ? ಆಕೆ ಅಷ್ಟೊಂದು ಮೊತ್ತದ ಹಣ ವೆಚ್ಚ ಮಾಡುತ್ತಾಳೆ ಎಂದರೆ ಆಕೆಯೇ ಅಷ್ಟೊಂದು ಮೊತ್ತದ ಹಣವನ್ನು ದುಡಿಯಲಿ ಅದಕ್ಕಾಗಿ ಆಕೆ ಗಂಡನ ಮೇಲೆ ಅವಲಂಬಿಸುವುದು ಬೇಡ. ಏನಿದು ಈ ರೀತಿ ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಕ್ಷದ ಲೆಕ್ಕ ಬೇಡ ನಿಜವಾದ ವೆಚ್ಚ ತಿಳಿಸಿ ಎಂದ ನ್ಯಾಯಾಧೀಶರು
ನಿಮಗೆ ಯಾವುದೇ ಇತರ ಕುಟುಂಬದ ಜವಾಬ್ದಾರಿ ಇಲ್ಲ, ನಿಮಗೆ ಮಕ್ಕಳನ್ನು ನೋಡಿಕೊಳ್ಳಬೇಕು ಎಂದು ಇಲ್ಲ, ಹೀಗಿದು ಕೇವಲ ನಿಮಗಾಗಿ ನೀವು ಇಷ್ಟೊಂದು ಮೊತ್ತದ ಹಣವನ್ನು ವೆಚ್ಚ ಮಾಡುತ್ತೀರಾ? ಈ ರೀತಿ ಕೋರ್ಟ್ ಮುಂದೆ ಹೇಳಬೇಡಿ ಈ ಲಕ್ಷಗಳ ಲೆಕ್ಕವನ್ನು ಹೇಳಬೇಡಿ, ನಿಜವಾಗಿ ಎಷ್ಟು ವೆಚ್ಚದ ಅಗತ್ಯವಿದೆ ಅದನ್ನು ಹೇಳಿ. ಇಲ್ಲದೇ ಹೋದರೆ ನಾನು ಈ ಅರ್ಜಿಯನ್ನು ಈಗಲೇ ವಜಾ ಮಾಡಿ ಬಿಡುವೆ ಇದು ಸೆಕ್ಷನ್ 24ರ ಉದ್ದೇಶ ಅಲ್ಲಮತ್ತು ಪತಿ ತನ್ನ ಹೆಂಡತಿಯೊಂದಿಗೆ ಜಗಳವಾಡುವುದಕ್ಕೆ ತಿಂಗಳಿಗೆ 6,16,300 ನೀಡುವುದು ಶಿಕ್ಷೆಯಲ್ಲಎಂದು ನ್ಯಾಯಾಧೀಶರು ಮಹಿಳೆಯ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನ್ಯಾಯಾಧೀಶರ ಮಾತಿಗೆ ನೆಟ್ಟಿಗರಿಂದ ಶ್ಲಾಘನೆ
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನ್ಯಾಯಾಧೀಶರ ನಿರ್ಧಾರಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದೊಂದು ಶೋಷಣೆ ಎಂದು ಕರೆದ ನ್ಯಾಯಾಧೀಶರು ಈ ವಿಚಾರದಲ್ಲಿ ನಿಜವಾದ ವೆಚ್ಚ ಏನು ಎಂಬುದರೊಂದಿಗೆ ಸ್ಪಷ್ಟವಾಗಿ ಬನ್ನಿ ಲಕ್ಷದ ಲೆಕ್ಕ ಬೇಡ ಎಂದಿದ್ದಾರೆ. ಈ ವೀಡಿಯೋ ನೋಡಿದ ಅನೇಕರು ನ್ಯಾಯಾಧೀಶರು ಪಕ್ಷಪಾತವಿಲ್ಲದೇ ತೀರ್ಪು ನೀಡಿದ್ದಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ ಮತ್ತು ಕೆಲವು ಬಳಕೆದಾರರು ಇಂತಹ ಪ್ರಕರಣಗಳನ್ನು ತೆಗೆದುಕೊಳ್ಳುವ ವಕೀಲರನ್ನು ಪ್ರಶ್ನಿಸಿದ್ದಾರೆ. ಈ ಮಹಿಳಾ ನ್ಯಾಯಾಧೀಶರಿಗೆ ಕೆಲವರು ಧನ್ಯವಾದ ಹೇಳಿದ್ದು, ಮಹಿಳಾ ಸಬಲೀಕರಣ ಎಂದರೆ ಏನು ಹಾಗೂ ಏನು ಅಲ್ಲ ಎಂಬುದನ್ನು ಅವರು ಸ್ಪಷ್ಟವಾಗಿ ವಿವರಿಸಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಒಂದು ತಿಂಗಳಿಗೆ 6,16,300 ರೂಪಾಯಿ ಎಂದರೆ ಅದು ವರ್ಷಕ್ಕೆ ಸರಿಸುಮಾರು 74 ಲಕ್ಷ ಆಗುತ್ತದೆ. ಅಮೆಜಾನ್ ಅಥವಾ ಮೈಕ್ರೋಸಾಫ್ಟ್ ಕೂಡ ತಮ್ಮ ಹಿರಿಯ ಮಟ್ಟದ ವ್ಯವಸ್ಥಾಪಕರಿಗೆ ಅಂತಹ ಹೆಚ್ಚಿನ ಪ್ಯಾಕೇಜ್‌ಗಳನ್ನು ನೀಡುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಲ್ಲಿ ಮಹಿಳೆಯರು ಕೇಳಿದ್ದೆಲ್ಲದಕ್ಕೆ ಹೂ ಅನ್ನದೇ ನ್ಯಾಯಾಧೀಶರು ನ್ಯಾಯಸಮ್ಮತ ನಿರ್ಧಾರ ಮಾಡಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಅವರ ವಾರ್ಷಿಕ ಸಂಬಳವೇ 37 ಲಕ್ಷ ಆದರೆ ಅದಕ್ಕೂ ಹೆಚ್ಚಿನ ಮೊತ್ತವನ್ನು ಆಕೆ ಪರಿಹಾರವಾಗಿ ಕೇಳಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು: ಶೈಕ್ಷಣಿಕ ಸಾಲ ಮುಗಿಸಲು ಸ್ನೇಹಿತರಿಂದ ಗೋಫಂಡ್ ಅಭಿಯಾನ
ಇದನ್ನೂ ಓದಿ: 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್‌ಗೆ ಮುಂದಾದ ಸರ್ಕಾರ
