ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು, ಸೆಪ್ಟೆಂಬರ್‌ನಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತ ಚಾರ್ಲಿ ಕಿರ್ಕ್ ಅವರ ಪತ್ನಿ ಎರಿಕಾ ಕಿರ್ಕ್‌ರನ್ನು ಕಾರ್ಯಕ್ರಮವೊಂದರಲ್ಲಿ ಆಪ್ತತೆಯಿಂದ ಅಪ್ಪಿಕೊಂಡದ್ದು ಇದೀಗ ಹಲವು ಲೆಕ್ಕಾಚಾರಗಳಿಗೆ ಎಡೆಮಾಡಿದೆ.
ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು, ಸೆಪ್ಟೆಂಬರ್‌ನಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತ ಚಾರ್ಲಿ ಕಿರ್ಕ್ ಅವರ ಪತ್ನಿ ಎರಿಕಾ ಕಿರ್ಕ್‌ರನ್ನು ಕಾರ್ಯಕ್ರಮವೊಂದರಲ್ಲಿ ಆಪ್ತತೆಯಿಂದ ಅಪ್ಪಿಕೊಂಡದ್ದು ಇದೀಗ ಹಲವು ಲೆಕ್ಕಾಚಾರಗಳಿಗೆ ಎಡೆಮಾಡಿದೆ.
ವಿಚ್ಛೇದನ ವದಂತಿಗೆ ನಾಂದಿ ಹಾಡಿದೆ.ಮಿಸಿಸಿಪಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಎರಿಕಾ, ‘ನನ್ನ ಗಂಡನ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಆದರೆ ವ್ಯಾನ್ಸ್‌ರಲ್ಲಿ ಅವರ ಕೆಲ ಹೋಲಿಕೆಗಳಿವೆ’ ಎಂದಿದ್ದರು.
ಪಚಾರಿಕೆ ಅಪ್ಪುಗೆಗಿಂತ ಜಾತಿ ಅತ್ಯಾಪ್ತ ಎನಿಸುತ್ತಿರುವುದು ಹೊಸ ಚರ್ಚೆ
ಬಳಿಕ ವ್ಯಾನ್ಸ್‌ರನ್ನು ಅಪ್ಪಿಕೊಂಡಿದ್ದರು. ಈ ವೇಳೆ ವ್ಯಾನ್ಸ್, ಎರಿಕಾರ ಸೊಂಟವನ್ನು ಬಳಸಿದ್ದರು. ಅತ್ತ ಎರಿಕಾ, ವ್ಯಾನ್ಸ್ ಅವರನ್ನು ಅಪ್ಪಿಕೊಂಡು ಅವರ ತಲೆಗೂದಲಲ್ಲಿ ಕೈಯ್ಯಾಡಿಸಿದ್ದರು. ಇದು ಔಪಚಾರಿಕೆ ಅಪ್ಪುಗೆಗಿಂತ ಜಾತಿ ಅತ್ಯಾಪ್ತ ಎನಿಸುತ್ತಿರುವುದು ಹೊಸ ಚರ್ಚೆ ಹುಟ್ಟುಹಾಕಿದೆ. ಅತ್ತ ಅದೇ ಕಾರ್ಯಕ್ರಮದಲ್ಲಿ ವ್ಯಾನ್ಸ್, ‘ನನ್ನ ಪತ್ನಿ ಕ್ರೈಸ್ತ ಧರ್ಮದಿಂದ ಪ್ರಭಾವಿತಳಾಗಿ ಅದನ್ನೊಪ್ಪುತ್ತಾಳೆ ಎಂಬ ಭರವಸೆ ಇದೆ’ ಎಂದಿದ್ದರು. ಈ ಎಲ್ಲಾ ಘಟನೆಗಳಿಂದಾಗಿ, ಅವರು ತಮ್ಮ ಭಾರತ ಮೂಲದ ಪತ್ನಿ ಉಷಾ ಚಿಲುಕೂರಿ ಅವರಿಂದ ಬೇರ್ಪಡಲಿದ್ದಾರೆ ಎನ್ನಲಾಗುತ್ತಿದೆ.
ಗುಂಡೇಟಿಗೆ ಬಲಿಯಾದ ಟ್ರಂಪ್ ಆಪ್ತ ಚಾರ್ಲಿ ಕಿರ್ಕ್
ನ್ಯೂಯಾರ್ಕ್: ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಅಮೆರಿಕಾದ ಬಲಪಂಥೀಯ ನಾಯಕ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಾಪ್ತ ಹಾಗೂ ಟ್ರಂಪ್ ಚಿಂತನೆಗಳ ಪ್ರಬಲ ಪ್ರತಿಪಾದಕ ಚಾರ್ಲಿ ಕಿರ್ಕ್ ಅವರಿಗೆ ಅವರ ಸಾವಿನ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು ಎಂಬುದು ವರದಿಯಾಗಿದೆ. ಸೆಪ್ಟೆಂಬರ್ 10 ರಂದು ಚಾರ್ಲಿ ಕಿರ್ಕ್ ಅವರನ್ನು ಉತಾಹ್ ವ್ಯಾಲಿ ವಿವಿ ಆವರಣದಲ್ಲಿ ಸಾರ್ವಜನಿಕ ಭಾಷಣದಲ್ಲಿ ತೊಡಗಿದ್ದಾಗಲೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಆದರೆ ಅಮೆರಿಕಾದ ಉನ್ನತ ಮಟ್ಟದ ಭದ್ರತಾ ತಜ್ಞರು ಚಾರ್ಲಿ ಕಿರ್ಕ್ ಜೀವಕ್ಕೆ ಅಪಾಯ ಇರುವ ಬಗ್ಗೆ ಮೊದಲೇ ಸೂಚಿಸಿದ್ದರು ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ. ಅಗತ್ಯವಾದ ಭದ್ರತಾ ಕ್ರಮಗಳನ್ನು ಕೈಗೊಳ್ಳದೇ ಹೋದಲಿ ಚಾರ್ಲಿ ಕಿರ್ಕ್ ಅವರ ಹತ್ಯೆಯಾಗುವ ಶೇಕಡಾ100ರಷ್ಟು ಸಾಧ್ಯತೆ ಇದೆ ಎಂದು ತಿಳಿಸಲಾಗಿತ್ತು ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ.
