Al-Falah college terror link: ದೆಹಲಿ ಸಮೀಪದ ಫರಿದಾಬಾದ್‌ನಲ್ಲಿ ನಡೆದ ಭಾರಿ ಸ್ಫೋಟ ಸಂಚು ಪ್ರಕರಣದಲ್ಲಿ ಲಕ್ನೋ ಮೂಲದ ವೈದ್ಯೆ ಡಾ. ಶಾಹೀನಾಳನ್ನು ಬಂಧಿಸಲಾಗಿದೆ. ಆದರೆ ಈ ಕೃತ್ಯದಲ್ಲಿ ಮಗಳು ಭಾಗಿಯಾಗಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಆಕೆಯ ತಂದೆ ಹೇಳಿದ್ದಾರೆ.

ಮಗಳ ಬಂಧನದ ಬಗ್ಗೆ ಬಂಧಿತ ವೈದ್ಯೆ ಡಾ ಶಾಹೀನ್ ತಂದೆ ಹೇಳಿದ್ದೇನು?

ದೆಹಲಿ ಸಮೀಪದ ಫಾರಿದಾಬಾದ್‌ನಲ್ಲಿ ಭಾರಿ ಸ್ಫೋಟಕ್ಕೆ ಸಂಚು ರೂಪಿಸಿದ ಪ್ರಕರಣದಲ್ಲಿ ಬಂಧಿತಳಾಗಿರುವ ಲಕ್ನೋ ಮೂಲದ ವೈದ್ಯೆ ಡಾ. ಶಾಹೀನಾ ಬಗ್ಗೆ ಆಕೆಯ ತಂದೆ ಮಾತನಾಡಿದ್ದು, ಆಕೆ ಈ ಕೃತ್ಯದಲ್ಲಿ ಭಾಗಿಯಾಗಿದ್ದಾಳೆಂದರೆ ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ. ಇಂತಹ ಕೃತ್ಯಗಳಲ್ಲಿ ಆಕೆ ಭಾಗಿಯಾದ ಬಗ್ಗೆ ತಮಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಫರಿದಾಬಾದ್‌ನಲ್ಲಿ ಅಲ್ ಫಲಾಹ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದ ಶಾಹೀನಾ ಸೇರಿದಂತೆ ಈಗಾಗಲೇ ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಐವರು ಡಾಕ್ಟರ್‌ಗಳನ್ನು ಪೊಲೀಸರು ಉಗ್ರ ಚಟುವಟಿಕೆಯ ಕಾರಣಕ್ಕೆ ಬಂಧಿಸಿದ್ದಾರೆ. ಲಕ್ನೋದ ದಾಲಿಗಂಜ್ ಮೂಲದ ಡಾ ಶಾಹೀನಾಳನ್ನು ಪೊಲೀಸರು ಸೋಮವಾರ ಬಂಧಿಸಿದ್ದರು. ಆದರೆ ಆಕೆಯ ತಂದೆ ಸಯ್ಯದ್ ಅಹ್ಮದ್ ಅನ್ಸಾರಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ಆಕೆ ಈ ಕೃತ್ಯಗಳಲ್ಲಿ ಭಾಗಿಯಾಗಿದ್ದಾಳೆಂದರೆ ನಂಬಲಾಗುತ್ತಿಲ್ಲ ಎಂದಿದ್ದಾರೆ.

ಆಕೆ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾಳೆಂದರೆ ನಂಬಲಾಗ್ತಿಲ್ಲ

ಲಕ್ನೋದಲ್ಲಿ ಜನಿಸಿದ ಶಾಹೀನಾಗೆ ಇಬ್ಬರು ಒಡಹುಟ್ಟಿದ ಸೋದರರಿದ್ದಾರೆ. ಈಕೆಯ ತಂದೆ ಸೈಯದ್ ಅಹ್ಮದ್ ಅನ್ಸಾರಿ ಅವರ ತಂದೆಗೆ ಶೋಯಬ್ ಮೊದಲ ಹಾಗೂ ಹಿರಿಯ ಪುತ್ರ ಈತನ ಜೊತೆಗೆ ಅವರು ವಾಸ ಮಾಡುತ್ತಿದ್ದಾರೆ. 2ನೇ ಮಗುವೇ ಈಗ ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಶಾಹೀನಾ ಸೈಯದ್‌, ಅಹ್ಮದ್ ಅನ್ಸಾರಿ ಅವರ ಕೊನೆಯ ಪುತ್ರ ಪರ್ವಿನ್ ಅನ್ಸಾರಿ ಕೂಡ ವೈದ್ಯನಾಗಿದ್ದು, ಪತ್ನಿಯ ಮನೆಯಲ್ಲಿ ವಾಸ ಮಾಡುತ್ತಿದ್ದ ಆತನ ಮನೆಯ ಮೇಲೂ ಪೊಲೀಸರು ಮಂಗಳವಾರ ದಾಳಿ ಮಾಡಿದ್ದಾರೆ. ಆದರೆ ಆತ ಹಲವು ತಿಂಗಳ ಹಿಂದೆಯೇ ಈ ನಗರವನ್ನು ತೊರೆದಿದ್ದಾನೆ ಎಂದು ಆತನ ತಂದೆ ಸೈಯದ್ ಅಹ್ಮದ್ ಅನ್ಸಾರಿ ಹೇಳಿದ್ದಾರೆ.

ಮಹಾರಾಷ್ಟ್ರದ ವ್ಯಕ್ತಿಯ ಜೊತೆ ಮದುವೆಯಾಗಿದ್ದ ಶಾಹೀನಾ ಸೈಯದ್

ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಶಾಹೀನಾ ಸೈಯದ್ ವೈದ್ಯಕೀಯ ಕೋರ್ಸ್ ಪೂರ್ತಿ ಮಾಡಿದ್ದು, ಫರಿದಾಬಾದ್‌ನ ಅಲ್ ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಳು. ಶಾಹೀನಾ ಸೈಯದ್‌ಗೆ ಮಹಾರಾಷ್ಟ್ರದ ವ್ಯಕ್ತಿಯ ಜೊತೆ ಮದುವೆಯಾಗಿತ್ತು. ಶಾಹೀನಾ ಹಾಗೂ ಪರ್ವೇಜ್ ಇಬ್ಬರು ವೈದ್ಯಕೀಯ ಶಿಕ್ಷಣ ಕಲಿತಿದ್ದಾರೆ. ಅವರಿಬ್ಬರನ್ನು ಕಳೆದೊಂದುವರೆ ವರ್ಷಗಳಿಂದ ನಾನು ಭೇಟಿಯಾಗಿಲ್ಲ ಎಂದು ಶಾಹೀನಾ ತಂದೆ ಸೈಯದ್ ಅಹ್ಮದ್ ಅನ್ಸಾರಿ ಹೇಳಿದ್ದಾರೆ.

ಶಾಹೀನಾ ಸಹೋದರನೂ ವೈದ್ಯ

ಶಾಹೀನಾ ಜೊತೆ ಒಂದು ತಿಂಗಳ ಹಿಂದೆ ಕೊನೆಯದಾಗಿ ನಾನು ಮಾತನಾಡಿದ್ದೆ. ಪರ್ವಿನ್ ಜೊತೆ ಪ್ರತಿ ವಾರವೂ ನಾನು ಮಾತನಾಡುತ್ತಿದ್ದೆ. ಆದರೆ ಶಾಹೀನಾಳ ಬಂಧನದ ಬಗ್ಗೆ ನನಗೆ ಯಾವುದೇ ಐಡಿಯಾ ಇಲ್ಲ, ನಾನು ಕೊನೆಯದಾಗಿ ಪರ್ವೀಜ್ ಜೊತೆ ಕಳೆದ ಮಂಗಳವಾರ ಮಾತನಾಡಿದೆ. ನಾವು ಆತನ ಯೋಗ ಕ್ಷೇಮವನ್ನು ವಿಚಾರಿಸಿದ್ದೇವೆಯೇ ಹೊರತು ಬೇರೇನೂ ಮಾತನಾಡಿಲ್ಲ ಎಂದು ಶಾಹೀನಾಳ ತಂದೆ ಹೇಳಿದ್ದಾರೆ. ಮದುವೆಯ ನಂತರ ಪರ್ವೀಜ್ ಸಹರಾನ್‌ಪುರದಲ್ಲಿರುವ ಆತನ ಹೆಂತಿ ಜೊತೆ ವಾಸ ಮಾಡಲು ಶುರು ಮಾಡಿದ್ದ ಎಂದು ಅನ್ಸಾರಿ ಹೇಳಿದ್ದಾರೆ.

ಇತ್ತ ಶಾಹೀನಾ ಅಲ್ ಫಲಾಹ್ ವಿವಿಯಲ್ಲಿ ಕೆಲಸ ಮಾಡುತ್ತಿದ್ದು, ಕಾಶ್ಮೀರದ ವೈದ್ಯ ಉಗ್ರ ಚಟುವಟಿಕೆಯಲ್ಲಿ ಬಂಧಿಸಲ್ಪಟ್ಟಿರುವ ಡಾ ಮುಜಾಮಿಲ್ ಜೊತೆ ಈಕೆಗೆ ಬಹಳ ಆತ್ಮೀಯತೆ ಇತ್ತು. ಈತ ಫರಿದಾಬಾದ್‌ನಲ್ಲಿ ಬಾಡಿಗೆಗೆ ಪಡೆದ ಮನೆಯಲ್ಲಿ 2,900 ಕೇಜಿ ತೂಕದ ಸ್ಫೋಟಕವನ್ನು ವಶಕ್ಕೆ ಪಡೆದಿದ್ದರು.

ಮುಜಾಮಿಲ್ ಬಂಧನದ ನಂತರ ಆತ ನೀಡಿದ ಮಾಹಿತಿಯ ಮೇರೆಗೆ ಫರಿದಾಬಾದ್ ಪೊಲೀಸರು ಶಾಹೀನಾ ಸೈಯದ್‌ಗೆ ಸೇರಿದ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದಿದ್ದರು. ಈ ಈ ವಾಹನದಿಂದ ಕಲಾಶ್ನಿಕೋವ್ ಅಸಾಲ್ಟ್ ರೈಫಲ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಮಧ್ಯೆ ಫರಿದಾಬಾದ್‌ನಲ್ಲಿ ಭಯೋತ್ಪಾದಕ ಘಟಕಕ್ಕೆ ಸಂಬಂಧಿಸಿದ ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ದೊಡ್ಡ ಸಂಗ್ರಹವನ್ನು ವಶಪಡಿಸಿಕೊಂಡ ಒಂದು ದಿನದ ನಂತರ, ಅಲ್-ಫಲಾಹ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೇರಿದಂತೆ ರಾಜ್ಯಾದ್ಯಂತ ದಾಳಿ ನಡೆಸಲಾಗುತ್ತಿದೆ ಎಂದು ಹರಿಯಾಣ ಡಿಜಿಪಿ ಒಪಿ ಸಿಂಗ್ ತಿಳಿಸಿದ್ದಾರೆ.

ಅಲ್ ಫಲಾಹ್ ವಿವಿ ಮೇಲೆ ದಾಳಿ: 52 ಶಂಕಿತರ ವಿಚಾರಣೆ

ಅಲ್-ಫಲಾಹ್ ವಿಶ್ವವಿದ್ಯಾಲಯದ ಆವರಣದಾದ್ಯಂತ ಶೋಧ ಕಾರ್ಯಗಳು ನಡೆಯುತ್ತಿವೆ ಮತ್ತು ಈ ಸ್ಫೋಟಕಕ್ಕೆ ಸಂಬಂಧಿಸಿದ ಹಲವಾರು ಶಂಕಿತರನ್ನು ಪ್ರಶ್ನಿಸಲಾಗುತ್ತಿದೆ ಎಂದು ಅವರು ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ ಫಲಾಹ್ ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ 52 ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.

ದೆಹಲಿ ಬ್ಲಾಸ್ಟ್‌ಗೆ 12 ಬಲಿ

ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ಸ್ಫೋಟದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಹರಿಯಾಣದಲ್ಲಿ ನೋಂದಾಯಿಸಲಾದ ಹುಂಡೈ i20 ಕಾರು ಗೇಟ್ ಸಂಖ್ಯೆ 1 ರ ಬಳಿ ಸ್ಫೋಟಗೊಂಡಿದ್ದರಿಂದ ಮೃತರಾದವರ ಸಂಖ್ಯೆ 8ರಿಂದ 12ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ ಡಜನ್‌ಗೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಫರಿದಾಬಾದ್ ಭಯೋತ್ಪಾದನಾ ಚಟುವಟಿಕೆಯ ಪ್ರಕರಣದಲ್ಲಿ ಡಾ. ಶಾಹೀನ್ ಬಂಧನದ ನಂತರ ಲಕ್ನೋದಲ್ಲಿರುವ ಅವರ ತಂದೆಯ ಮನೆಗೆ ಎನ್‌ಐಎ ಮತ್ತು ಎಟಿಎಸ್‌ ತಂಡಗಳು ಭೇಟಿ ನೀಡಿವೆ.

ಇದನ್ನೂ ಓದಿ: ಪೈಜಾಮವನ್ನು ಎತ್ತಿ ವೋಟ್ ಕೇಳ್ತಿದ್ದವನಿಗೆ ವೃದ್ಧ ಮಾಡಿದ್ದೇನು ನೋಡಿ: ವೀಡಿಯೋ ಭಾರಿ ವೈರಲ್
ಇದನ್ನೂ ಓದಿ: ಬೈ ಮಿಸ್ಕೇಟ್ ಕಂಪನಿ ಸಿಇಒ ಸೇರಿ ಎಲ್ಲಾ ಉದ್ಯೋಗಿಗಳಿಗೆ ಟರ್ಮಿನೇಷನ್ ಲೆಟರ್ ಕಳುಹಿಸಿದ ಹೆಚ್‌ಆರ್