ಇಲ್ಲಿ ನೋಡಿ ರಿಯಲ್ ಬಾಹುಬಲಿ: ತಲೆಯ ಮೇಲೆ ಬೈಕ್ ಏರಿಸಿ ಹೊರಟ ಕೂಲಿ
ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬ ಕತ್ತೆಯನ್ನು ಬೆನ್ನಿಗೆ ಕಟ್ಟಿ ಬಸ್‌ನ ಟಾಪ್ ಏರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆ ಘಟನೆ ಮಾಸುವ ಮೊದಲೇ ಈಗ ಅಂತಹದ್ದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಕೂಲಿಯೊಬ್ಬರು ಬೈಕ್‌ನ್ನು ತಲೆಮೇಲೆ ಹೊತ್ತುಕೊಂಡು ಬಸ್‌ನ ಟಾಪ್ ಏರುತ್ತಿರುವ ವಿಡಿಯೋ ವೈರಲ್ ಆಗಿದೆ.
ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬ ಕತ್ತೆಯನ್ನು ಬೆನ್ನಿಗೆ ಕಟ್ಟಿ ಬಸ್‌ನ ಟಾಪ್ ಏರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆ ಘಟನೆ ಮಾಸುವ ಮೊದಲೇ ಈಗ ಅಂತಹದ್ದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಕೂಲಿಯೊಬ್ಬರು ಬೈಕ್‌ನ್ನು ತಲೆಮೇಲೆ ಹೊತ್ತುಕೊಂಡು ಬಸ್‌ನ ಟಾಪ್ ಏರುತ್ತಿರುವ ವಿಡಿಯೋ ವೈರಲ್ ಆಗಿದೆ.
ಬೈಕ್ ಎಂದರೆ ಬಹುತೇಕರಿಗೆ ಪಂಚಪ್ರಾಣ ಎಂತಹದ್ದೇ ಟ್ರಾಫಿಕ್ (Traffic) ಇದ್ದರೂ, ಫುಟ್ಫಾತ್ ಮೇಲೆ ಸಾಗಿ ಸೈಕಲ್ ಗ್ಯಾಪ್‌ನಲ್ಲಿ (Cycle Gap) ನುಗ್ಗಿಸಿಕೊಂಡು ಬೈಕ್ ಸವಾರರು ಮುಂದೆ ಸಾಗಿ ಸಾಧ್ಯವಾದಷ್ಟು ವೇಗವಾಗಿ ತಮ್ಮ ಗುರಿ ತಲುಪುತ್ತಾರೆ. ಕಾರು ಆಟೋಗಳಲ್ಲಿ ಇಷ್ಟು ಸಣ್ಣ ಗ್ಯಾಪ್‌ನಲ್ಲಿ ಸಾಗಲಾಗದು ಹೀಗಾಗಿ ದಿನವೂ ಟ್ರಾಫಿಕ್ ಮಧ್ಯೆ ಕಚೇರಿಗೆ ತಲುಪುವವರಿಗೆ ದ್ವಿಚಕ್ರ ವಾಹನ (Two Wheeler) ಜೀವನಾಡಿ ಎಂದರೆ ತಪ್ಪಗಲಾರದು ಹೀಗಾಗಿಯೇ ಬೈಕ್ ಸವಾರರು ಬೈಕ್ (Bike) ಹಳೆಯದಾದರು ಅದರೊಂದಿಗೆ ತಮ್ಮ ಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಅದರಲ್ಲೂ ಊರು ಬಿಟ್ಟು ಹೋಗುವ ಸಮಯದಲ್ಲಿ ಕೆಲವರು ಅನಿವಾರ್ಯವಾಗಿ ಮಾರಿ ಹೋದರೆ ಮತ್ತೆ ಕೆಲವರು ಅದನ್ನು ಜೊತೆಯಲ್ಲಿ ಕರೆದೊಯ್ಯಲು ನೋಡುತ್ತಾರೆ. ಕ್ರಮಿಸುವ ದೂರ ತುಂಬಾ ಇದ್ದಾಗ ಬಸ್ ರೈಲುಗಳಲ್ಲಿ ಅವುಗಳ ಟ್ರಾನ್ಸ್‌ಪೋರ್ಟ್ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬರು ಬಸ್‌ನಲ್ಲಿ ತಮ್ಮ ಬೈಕ್ ಟ್ರಾನ್ಸ್‌ಪೋರ್ಟ್ ಮಾಡಲು ಬಯಸಿದ್ದು, ಅದರಂತೆ ಕೂಲಿಯಾಳುಗಳು (labourer) ಬೈಕ್‌ನ್ನು ಬಸ್‌ನ ಟಾಪ್‌ಗೇರಿಸುತ್ತಿದ್ದಾರೆ. ಇದು ಮಾಮೂಲಿ ಇದರಲ್ಲೇನು ವಿಶೇಷ ಎಂದು ಕೇಳ ಬೇಡಿ ವಿಡಿಯೋ ನೋಡಿ...
ಈ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಸಾಮಾನ್ಯವಾಗಿ ಬೈಕ್‌ಗಳು ಅಂದಾಜು 140 ರಿಂದ 150 ಕೆಜಿ ತೂಕವಿರುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿ ಹೆಚ್ಚೆಂದರೆ 75 ರಿಂದ 80 ಕೆಜಿ ತೂಕವನ್ನು ಹೊರಬಲ್ಲ. ಆದರೆ ಇಲ್ಲಿ ಇವರು ಅಂದಾಜು 150 ಕೆಜಿ ತೂಕದ ಬೈಕ್‌ನ್ನು ತಲೆ ಮೇಲೆ ಹೊತ್ತಿದ್ದಲ್ಲದೇ, ಅದನ್ನು ಹೊತ್ತುಕೊಂಡೆ ಬಸ್‌ನ ಟಾಪ್ ಏರುತ್ತಿದ್ದಾರೆ. ಈ ವಿಡಿಯೋ ಮನುಷ್ಯ ಪ್ರಯತ್ನ ಪಟ್ಟರೇ ಆತನ ಶಕ್ತಿ ಎಂತಹುದ್ದು ಎಂಬುದನ್ನು ತೋರಿಸುತ್ತಿದೆ. ತಲೆಯ ಮೇಲಿನ ಭಾರದ ಜೊತೆ ಆತನ ಬ್ಯಾಲೆನ್ಸಿಂಗ್ (Balancing) ಇಲ್ಲಿ ಗಮನ ಸೆಳೆಯುತ್ತಿದೆ. ಏಣಿ ಏರುವಾಗ ಆತ ತನ್ನ ತಲೆ ಮೇಲಿರುವ ಬೈಕ್‌ನ್ನು ಹಿಡಿದುಕೊಳ್ಳದೇ ಕೇವಲ ಏಣಿಯನ್ನು ಹಿಡಿದು ಮೇಲೆರುತ್ತಾನೆ. ಆತ ಮೇಲೇರುತ್ತಿದ್ದಂತೆ ಈಗಾಗಲೇ ಮೇಲೇಲಿರುವ ಇಬ್ಬರು ಆತನ ತಲೆಯಿಂದ ಮೆಲ್ಲನೇ ಈ ಬೈಕ್‌ನ್ನು ಇಳಿಸಿಕೊಂಡು ಟಾಪ್ ಮೇಲೆ ಹಾಕುತ್ತಾರೆ.
ಕತ್ತೆಯ ಬೆನ್ನಿಗೇರಿಸಿ ಬಸ್ ಹತ್ತಿದ ಭೂಪ... ವಿಡಿಯೋ ವೈರಲ್
ಗುಲ್ಜರ್ ಸಹಾಬ್ ಎಂಬುವವರು ಈ ವಿಡಿಯೋವನ್ನು ಸೂಪರ್ ಹ್ಯೂಮನ್ ಎಂದು ಶೀರ್ಷಿಕೆ ನೀಡಿ ಪೋಸ್ಟ್ ಮಾಡಿದ್ದಾರೆ, 38 ನಿಮಿಷಗಳ ಈ ವಿಡಿಯೋದಲ್ಲಿ ಕೂಲಿಯೊಬ್ಬರ ಅಗಾಧ ಶಕ್ತಿ ಎದ್ದು ಕಾಣುತ್ತಿದೆ. ಅನೇಕರು ಈತ ನಿಜವಾದ ಬಾಹುಬಲಿ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರತಿಭೆ ಬದುಕಿಗಾಗಿ ಪ್ರತಿಕ್ಷಣ ಹೋರಾಡುವ ವರ್ಗದಿಂದ ಮಾತ್ರ ಬರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈತ ಭಾರತದ ನಿಜವಾದ ಸೂಪರ್ ಮ್ಯಾನ್ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ. ಇಂತಹ ಪ್ರತಿಭೆಗಳು ಭಾರತದಲ್ಲಿ ಸಾಕಷ್ಟು ಜನರಿದ್ದು, ಅವರ ಪ್ರತಿಭೆ ಇಂದಿಗೂ ಎಲೆಮರೆಯ ಕಾಯಂತೆ ಮರೆಯಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಚಾಣಕ್ಯ ನೀತಿ: ಯಶಸ್ವಿಯಾಗಲು,ಕತ್ತೆಯಿಂದ ಈ ವಿಷ್ಯಗಳನ್ನು ಕಲಿಯಬೇಕಂತೆ
ಆದರೆ ಈತನ ಪ್ರತಿಭೆಯನ್ನು ಯಾರು ಶ್ಲಾಘಿಸುತ್ತಾರೆ. ಹೆಚ್ಚೆಂದರೆ ಆತನಿಗೆ 150ರಿಂದ 200 ರೂಪಾಯಿ ಕೂಲಿ ನೀಡಬಹುದು ಅಷ್ಟೇ ಎಂದು ಮತ್ತೊಬ್ಬರು ವಿಷಾದದ ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರು ಮೂಲದ ಅಲ್ಟ್ರಾವೈಲೆಟ್ F77 ಎಲೆಕ್ಟ್ರಿಕ್ ಬೈಕ್ ಲಾಂಚ್, 307 ಕಿ.ಮೀ ಮೈಲೇಜ್!