ಪಶ್ಚಿಮ ಬಂಗಾಳದ ಎಸ್‌ಕೆ ಬಡೇಶ್ ಎಂಬ ಕಾರ್ಮಿಕ ಕೇರಳದಲ್ಲಿ ವಲಸೆ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಕೇರಳ ಸರ್ಕಾರದ ಸ್ತ್ರೀ ಶಕ್ತಿ ಲಾಟರಿಯ ಟಿಕೆಟ್ ಖರೀದಿಸಿದ್ದು, ಅದೃಷ್ಟವಶಾತ್ ಆತನಿಗೆ 75 ಲಕ್ಷ ಮೌಲ್ಯದ ಲಾಟರಿ ಮಗುಚಿದೆ.
ತಿರುವನಂತಪುರ: ಕೇರಳದಲ್ಲಿ 75 ಲಕ್ಷ ರೂಪಾಯಿ ಮೊತ್ತದ ಲಾಟರಿ ಗೆದ್ದ ಪಶ್ಚಿಮ ಬಂಗಾಳದ ಕಾರ್ಮಿಕನೋರ್ವ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಓಡಿದ ವಿಚಿತ್ರ ಘಟನೆ ದೇವರನಾಡು ಕೇರಳದಲ್ಲಿ ನಡೆದಿದೆ. ಹಣ ಕಂಡ್ರೆ ಹೆಣನೂ ಬಾಯ್ಬಿಡುತ್ತೆ ಎಂಬ ಗಾದೆ ಮಾತಿದೆ ಅದರಂತೆ ತನ್ನ ಬಳಿ ಒಮ್ಮೆಗೆ ಬಂದ ಹಣ ನೋಡಿದ ಜನ ತನ್ನ ಜೀವಕ್ಕೆ ಕಂಟಕ ತಂದೊಡ್ಡಬಹುದು ಎಂಬ ಭಯದಿಂದ ಹೆದರಿದ ಕಾರ್ಮಿಕನೋರ್ವ ಲಾಟರಿ ಗೆದ್ದ ಕೂಡಲೇ ಸೀದಾ ಪೊಲೀಸ್ ಠಾಣೆಗೆ ಒಡಿ ಹೋಗಿದ್ದಾನೆ.
ಪಶ್ಚಿಮ ಬಂಗಾಳದ ಎಸ್‌ಕೆ ಬಡೇಶ್ ಎಂಬ ಕಾರ್ಮಿಕ ಕೇರಳದಲ್ಲಿ ವಲಸೆ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಕೇರಳ ಸರ್ಕಾರದ ಸ್ತ್ರೀ ಶಕ್ತಿ ಲಾಟರಿಯ ಟಿಕೆಟ್ ಖರೀದಿಸಿದ್ದು, ಅದೃಷ್ಟವಶಾತ್ ಆತನಿಗೆ 75 ಲಕ್ಷ ಮೌಲ್ಯದ ಲಾಟರಿ ಮಗುಚಿದೆ. ಈ ವಿಚಾರ ತಿಳಿದಿದ್ದೆ ತಡ ಬಡೇಶ್ ಕೂಡಲೇ ಮುವತುಪ್ಜ ಪೊಲೀಸ್ ಠಾಣೆಗೆ ತೆರಳಿ ತನ್ನ ಲಾಟರಿ ಹಣಕ್ಕೆ ರಕ್ಷಣೆ ನೀಡುವಂತೆ ಕೇಳಿದ್ದಾನೆ.
ಅದೃಷ್ಟ ಅಂದ್ರೆ ಇದು: ಆನ್‌ಲೈನ್ ಗೇಮಿಂಗ್ ಆ್ಯಪ್‌ನಿಂದ ರಾತ್ರೋರಾತ್ರಿ 1.5 ಕೋಟಿ ಗೆದ್ದ ಚಾಲಕ..!
ಲಾಟರಿ ಹಣ ಪಡೆಯಲು ನೀತಿ ನಿಯಮಗಳ ಬಗ್ಗೆ ತಿಳಿಯದ ಆತ, ತನ್ನ ಕೈಯಿಂದ ಯಾರಾದರು ಲಾಟರಿ ಟಿಕೆಟ್‌ನ್ನು ಕಸಿದುಕೊಳ್ಳಬಹುದು ಎಂಬ ಭಯದಿಂದ ರಕ್ಷಣೆ ಕೋರಿದ್ದಾನೆ. ನಂತರ ಮುವತುಪ್ಜ ಪೊಲೀಸರು ಆತನಿಗೆ ಲಾಟರಿ ಹಣ ಪಡೆಯುವ ನೀತಿ ನಿಯಮಗಳ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ಆತನಿಗೆ ಸಂಪೂರ್ಣ ರಕ್ಷಣೆಯ ಭರವಸೆ ನೀಡಿದ್ದಾರೆ. ಎಸ್‌ಕೆ ಬಡೇಶ್ ಈ ಹಿಂದೆಯೂ ಲಾಟರಿ ಟಿಕೆಟ್ ಖರೀದಿಸಿ ತಮ್ಮ ಅದರಷ್ಟ ಪರೀಕ್ಷಿಸಿದ್ದರು. ಆದರೆ ಅವರಿಗೆ ಈ ಹಿಂದೆಂದೂ ಲಾಟರಿ ಮಗುಚಿರಲಿಲ್ಲ. ಹಾಗೆಯೇ ಈ ಬಾರಿಯೂ ಲಾಟರಿ ಖರೀದಿಸಿದ ಅವರು ಆ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ.
ಈತ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕನಾಗಿದ್ದು ಕೇರಳದ ಎರ್ನಾಕುಲಂನ (Ernakulam) ಚೊಟ್ಟನಿಕರದಲ್ಲಿ (Chottanikara) ರಸ್ತೆ ನಿರ್ಮಾಣ ಕಾಮಗಾರಿ ಕೆಲಸದಲ್ಲಿ ತೊಡಗಿದ್ದ ಆತ ಅದೇ ಸಂದರ್ಭದಲ್ಲಿ ಟಿಕೆಟ್ ಖರೀದಿಸಿದ್ದ. ಕೇರಳಕ್ಕೆ ಆಗಮಿಸಿ ಬಹಳ ವರ್ಷಗಳಾಗದ ಕಾರಣ ಬಡೇಶ್‌ಗೆ (SK Badesh) ಮಲೆಯಾಳಂ ಭಾಷೆ ತಿಳಿದಿಲ್ಲ ಹೀಗಾಗಿ ಆತ ಸಹಾಯಕಾಗಿ ತನ್ನ ಗೆಳೆಯ ಕುಮಾರ್ ಎಂಬಾತನಿಗೆ ಕರೆ ಮಾಡಿದ್ದ.
ಪತ್ನಿ ಕೋಪ ತಣಿಸಲು ಲಾಟರಿ ಖರೀದಿ, ಒಂದೇ ದಿನದಲ್ಲಿ 16 ಕೋಟಿ ರೂಪಾಯಿ ಜಾಕ್‌ಪಾಟ್!
ಲಾಟರಿ ಹಣದ ಕೈಗೆ ಸಿಕ್ಕ ಬಳಿಕ ಬಡೇಶ್ ಪಶ್ಚಿಮ ಬಂಗಾಳಕ್ಕೆ ವಾಪಸ್ ಹೋಗಲಿದ್ದು, ಗೆದ್ದ ಹಣದಲ್ಲಿ ಮನೆ ನವೀಕರಣಗೊಳಿಸುವ ಜೊತೆಗೆ ಕೃಷಿ ಭೂಮಿಯನ್ನು ವಿಸ್ತರಿಸುವ ಗುರಿ ಹೊಂದಿದ್ದಾನೆ. ಒಟ್ಟಿನಲ್ಲಿ ದೇವರನಾಡು ಕೇರಳ ಪಶ್ಚಿಮ ಬಂಗಾಳದ ಕಾರ್ಮಿಕನ ಬದುಕಿಗೆ ಲಕ್ಷ್ಮಿಯ ಕರೆ ತಂದಿದ್ದು, ಆತನ ಬದುಕು ಬದಲಿಸಿದೆ.
