ಅದೃಷ್ಟ ಅಂದ್ರೆ ಇದು: ಆನ್‌ಲೈನ್ ಗೇಮಿಂಗ್ ಆ್ಯಪ್‌ನಿಂದ ರಾತ್ರೋರಾತ್ರಿ 1.5 ಕೋಟಿ ಗೆದ್ದ ಚಾಲಕ..!
ಶಹಾಬುದ್ದೀನ್ ಮನ್ಸೂರಿ ಎಂದು ಗುರುತಿಸಲಾದ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಇಂತಹ ಆನ್‌ಲೈನ್ ಕ್ರಿಕೆಟ್ ಆಟಗಳಲ್ಲಿ ತಂಡಗಳನ್ನು ಮಾಡುವ ಮೂಲಕ ತನ್ನ ಅದೃಷ್ಟವನ್ನು ಪರೀಕ್ಷಿಸುತ್ತಿರುವುದಾಗಿಯೂ ಆತ ಹೇಳಿಕೊಂಡಿದ್ದಾರೆ. ಇದೇ ರೀತಿ, ಭಾನುವಾರ ಕೋಲ್ಕತ್ತಾ ಮತ್ತು ಪಂಜಾಬ್ ನಡುವಿನ ಪಂದ್ಯದ ವೇಳೆ ಅವರು ಆ್ಯಪ್‌ನಲ್ಲಿ ವರ್ಚುವಲ್ ಕ್ರಿಕೆಟ್ ತಂಡವನ್ನು ರಚಿಸಿದ್ದಾರೆ.
ಭೋಪಾಲ್ (ಏಪ್ರಿಲ್ 4, 2023): ಒಮ್ಮೊಮ್ಮೆ ಅದೃಷ್ಟ ಹೇಗೆ ಒಲಿಯುತ್ತೆ ಅಂತ ಹೇಳಕ್ಕಾಗಲ್ಲ. ರಾತ್ರೋರಾತ್ರಿ ಸಿರಿವಂತ ಬಡವನಾಗ್ಬಹುದು ಹಾಗೂ ನಿರ್ಗತಿಕ ವ್ಯಕ್ತಿಯೂ ಕೋಟ್ಯಧೀಶನಾಗ್ಬಹುದು. ಇದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ ನೋಡಿ.. ಲಾಟರಿ ಯಾರಿಗೆ ಹೊಡೆಯುತ್ತೆ, ಹೇಗೆ ಹೊಡೆಯುತ್ತೆ ಅಂತ ಹೇಳಕ್ಕಾಗಲ್ಲ. ಇದೇ ರೀತಿ, ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಚಾಲಕರೊಬ್ಬರು ಭಾನುವಾರ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ನಲ್ಲಿ 49 ರೂಪಾಯಿ ಹೂಡಿಕೆ ಮಾಡಿ 1.5 ಕೋಟಿ ರೂಪಾಯಿ ಗೆದ್ದಿದ್ದಾರೆ.
ಗೇಮಿಂಗ್ ಅಪ್ಲಿಕೇಶನ್‌ನಲ್ಲಿ "ರೂ. 49 ವಿಭಾಗದಲ್ಲಿ" ವರ್ಚುವಲ್ ಕ್ರಿಕೆಟ್ ತಂಡವನ್ನು ಮಾಡುವ ಮೂಲಕ ಅವರು ಮೊದಲ ಸ್ಥಾನ ಪಡೆದಿದ್ದು, ಈ ಮೊತ್ತವನ್ನು ಗೆದ್ದಿದ್ದಾರೆ ಎಂದು ತಿಳಿದುಬಂದಿದೆ. ಶಹಾಬುದ್ದೀನ್ ಮನ್ಸೂರಿ ಎಂದು ಗುರುತಿಸಲಾದ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಇಂತಹ ಆನ್‌ಲೈನ್ ಕ್ರಿಕೆಟ್ ಆಟಗಳಲ್ಲಿ ತಂಡಗಳನ್ನು ಮಾಡುವ ಮೂಲಕ ತನ್ನ ಅದೃಷ್ಟವನ್ನು ಪರೀಕ್ಷಿಸುತ್ತಿರುವುದಾಗಿಯೂ ಆತ ಹೇಳಿಕೊಂಡಿದ್ದಾರೆ. ಇದೇ ರೀತಿ, ಭಾನುವಾರ ಕೋಲ್ಕತ್ತಾ ಮತ್ತು ಪಂಜಾಬ್ ನಡುವಿನ ಪಂದ್ಯದ ವೇಳೆ ಅವರು ಆ್ಯಪ್‌ನಲ್ಲಿ ವರ್ಚುವಲ್ ಕ್ರಿಕೆಟ್ ತಂಡವನ್ನು ಮಾಡಿದ್ದಾರೆ.
ಇದನ್ನು ಓದಿ: ಅದೃಷ್ಟ ಅಂದ್ರೆ ಇದಪ್ಪಾ..! ಹಳೆ ಗಾಡಿ ಲೈಸನ್ಸ್ ನಂಬರ್‌ಗೆ ಹೊಡೀತು 40 ಲಕ್ಷ Lottery
ಪ್ರಸ್ತುತ, ಶಹಾಬುದ್ದೀನ್ ಮನ್ಸೂರಿ ತನ್ನ ಆ್ಯಪ್ ವ್ಯಾಲೆಟ್‌ನಿಂದ ವಿಜೇತ ಮೊತ್ತದ 1.5 ಕೋಟಿ ರೂ. ಪೈಕಿ 20 ಲಕ್ಷ ರೂ. ಹಣವನ್ನು ಹಿಂಪಡೆದಿದ್ದಾರೆ ಎನ್ನಲಾಗಿದೆ. ಹಾಗೂ, ಒಟ್ಟು 6 ಲಕ್ಷ ರೂ. ತೆರಿಗೆ ಕಡಿತಗೊಂಡು 14 ಲಕ್ಷ ರೂ. ಅವರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದೂ ತಿಳಿದುಬಂದಿದೆ.
ಶಹಾಬುದ್ದೀನ್‌ಗೆ ಬರುವ ಹಣದಿಂದ ಏನು ಮಾಡಲು ಯೋಜಿಸುತ್ತಿದ್ದಾರೆ?
ಮಧ್ಯಪ್ರದೇಶದ ಸೆಂಧ್ವಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶಹಾಬುದ್ದೀನ್ ಮನ್ಸೂರಿ ಗೆದ್ದ ಹಣದಲ್ಲಿ ಸ್ವಂತ ಮನೆ ಕಟ್ಟುವ ಯೋಚನೆ ಮಾಡುತ್ತಿದ್ದಾರಂತೆ. ಹಾಗೆ, ಉಳಿದ ಮೊತ್ತದಲ್ಲಿ ಸ್ವಂತ ಉದ್ಯಮ ಆರಂಭಿಸುವ ಗುರಿಯನ್ನೂ ಇವರು ಹೊಂದಿದ್ದಾರೆ. ಒಟ್ಟಾರೆ, ರಾತ್ರೋರಾತ್ರಿ ವ್ಯಕ್ತಿಯೊಬ್ಬರು ಕೋಟ್ಯಧೀಶರಾಗಿರುವುದು ಗಮನಾರ್ಹವೇ ಸರಿ.
ಇದನ್ನೂ ಓದಿ: ಆನ್‌ಲೈನ್ ಗೇಮ್‌ನಿಂದ ಗಳಿಸಿದ ಆದಾಯಕ್ಕೂ ತೆರಿಗೆ; ಐಟಿಆರ್-ಯು ಫೈಲ್ ಮಾಡದಿದ್ರೆ ಬೀಳುತ್ತೆ ದಂಡ
ಇದೇ ರೀತಿ, ಕಳೆದ ವರ್ಷವೂ ಮಧ್ಯ ಪ್ರದೇಶದ ವ್ಯಕ್ತಿಯೊಬ್ಬರು 49 ರೂ. ಹೂಡಿಕೆ ಮಾಡಿ ಡ್ರೀಮ್ 11 ನಲ್ಲಿ 1 ಕೋಟಿ ರೂ. ಬಹುಮಾನ ಗೆದ್ದಿದ್ದರು. ಬುಡಕಟ್ಟು ಸಮುದಾಯದ ಹುಡುಗ 49 ರೂ. ಹೂಡಿಕೆ ಮಾಡಿ, ಡ್ರೀಮ್ 11 ನಲ್ಲಿ 1 ಕೋಟಿ ರೂ. ಗೆದ್ದಿದ್ದರು.
ಬಡ ಕುಟುಂಬಕ್ಕೆ ಸೇರಿದ ರಾಮೇಶ್ವರ್ ಸಿಂಗ್ ಅವರು ತಮ್ಮ ಕುಟುಂಬವು ಮುಂದೊಂದು ದಿನ ತಮ್ಮನ್ನು ಹೆಮ್ಮೆ ಪಡುವಂತೆ ಮಾಡುತ್ತದೆ ಎಂದು ನಂಬಿದ್ದೆ. ಅದೇ ರೀತಿ, ಕಳೆದ ಎರಡು ವರ್ಷಗಳಿಂದ, ಅವರು ಡ್ರೀಮ್ 11 ನಲ್ಲಿ ಕ್ರಿಕೆಟಿಗರ ವರ್ಚುವಲ್ ತಂಡಗಳನ್ನು ಮಾಡುತ್ತಿದ್ದಾರೆ ಮತ್ತು ಅವರ ಅನುಭವವು ಅವರನ್ನು ಜಾಕ್‌ಪಾಟ್ ಹಣ ಗೆಲ್ಲುವಂತೆ ಮಾಡಿತು ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: ವೃದ್ಧಾಪ್ಯದಲ್ಲಿ ಒಲಿದ ಲಕ್ಷ್ಮಿ: 5 ಕೋಟಿಯ ಲಾಟರಿ ಗೆದ್ದ 88ರ ಅಜ್ಜ