ಪಶ್ಚಿಮ ಬಂಗಾಳ ಹಾಗೂ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದ ಸಾಮೂಹಿಕ ಅತ್ಯಾ** ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.ಮತ್ತಿಬ್ಬರು ಆರೋಪಿಗಳ ಆತಂಕ ಹೆಚ್ಚಾಗಿದೆ. 

ಕೋಲ್ಕತಾ (ಜು.08) ಪಶ್ಚಿಮ ಬಂಗಾಳದ ಬರೈಪುರದಲ್ಲಿ ನಡೆದ ಗ್ಯಾ0ಗ್ ರೇP ಹಾಗೂ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಗಾಳ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಘಟನೆ ನಡೆದ ಬೆನ್ನಲ್ಲೇ ತಪ್ಪತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಎನ್‌ಕೌಂಟರ್ ನಡೆದಿದೆ. ಪ್ರಕರಣ ಪ್ರಮುಖ ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋದ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಈ ವೇಳೆ ಪರಾರಿಯಾಗಲು ಪ್ರಯತ್ನಿಸಿದ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಿಫ್ಟ್ ತರಲು ಹೋದ ಬಾಲಕಿ ಮರಳಿ ಬರಲಿಲ್ಲ

ಬರೈಪುರದ 11 ವರ್ಷದ ಬಾಲಕಿ ತನ್ನ ಗೆಳತಿಗೆ ಹುಟ್ಟು ಹಬ್ಬದ ಗಿಫ್ಟ್ ಖರೀದಿಸಲು ಮನೆಯಿಂದ ಕೆಲವೇ ದೂರದಲ್ಲಿರುವ ಪಟ್ಟಣಕ್ಕೆ ತೆರಳಿದ್ದಾಳೆ. ಎಷ್ಟು ಹೊತ್ತಾದರು ಬಾಲಕಿ ಮರಳಿ ಬಂದಿಲ್ಲ. ಪರಿಣಾಮ ಪೋಷಕರು, ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ ಪೋಷಕರು ಹುಡುಕಾಟ ತೀವ್ರಗೊಳಿಸಿದ್ದಾರೆ. ಜುಲೈ 4 ರಂದು ಬಾಲಕಿ ನಾಪತ್ತೆಯಾಗಿದ್ದಳು. ಪಟ್ಟಣಕ್ಕೆ ಹೋದ ಬಾಲಕಿಯನ್ನು ಮೂವರು ಆರೋಪಿಗಳಾದ ಪ್ರಭಾಸ್ ಮೊಂಡಾಲ್, ಆನಂದ್ ಸರ್ದಾರ್ ಹಾಗೂ ದೀಬಾಕರ್ ಸರ್ದಾರ್ ಅಪಹರಿಸಿ ಅತ್ಯಾ** ಎಸಗಿದ್ದರು. ಬಳಿಕ ಆಕೆಯನ್ನು ಜೀವಂತವಾಗಿ ಚೀಲದಲ್ಲಿ ಕಟ್ಟಿ ಕೆರೆಗೆ ಎಸೆದಿದ್ದರು.

ಕೆರೆಯಲ್ಲಿ ಬಾಲಕಿ ಶವ ಪತ್ತೆ

ಜುಲೈ 5 ರಂದು ತೀವ್ರ ಹುಡುಕಾಟದ ವೇಳೆ ಕೆರೆಯಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಹುಡುಕಾಟದಲ್ಲಿ ಬಾಲಕಿ ಮೃತದೇಹ ಸಿಕ್ಕ ಬಳಿಕ ಅನುಮಾನದಿಂದ ಆಕ್ರೋಶಿತರ ಗುಂಪು ಇಂದ್ರನಾಥ ತಂತಿ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ತಂತಿ ಮೃತಪಟ್ಟಿದ್ದ. ಆದರೆ ಇಂದ್ರನಾಥ್ ತಂತಿ ಅಮಾಯಕನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಪ್ರಮುಖ ಮೂವರು ಆರೋಪಿಗಳಾದ ಪ್ರಭಾಸ್ ಮೊಂಡಾಲ್, ಆನಂದ್ ಸರ್ದಾರ್ ಹಾಗೂ ದೀಬಾಕರ್ ಸರ್ದಾರ್ ಅರೆಸ್ಟ್ ಆಗಿದ್ದರು. ಈ ಪೈಕಿ ಪ್ರಭಾಸ್ ಮೊಂಡಾಲ್‌ನ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.

ಸ್ಥಳ ಮಹರು ವೇಳೆ ಪ್ರಭಾಸ್ ಮೊಂಡಾಲ್ ಪೊಲೀಸರ ರಿವಾಲ್ವರ್ ಕಿತ್ತು ಗುಂಡು ಹಾರಿಸುತ್ತಾ ಪರಾರಿಯಾಗಲು ಪ್ರಯತ್ನಿಸಿದ್ದ. ಆದರೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಪೊಲೀಸರ ಪ್ರತಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಪ್ರಭಾಸ್ ಮೊಂಡಾಲ್‌ನ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟೊತ್ತಿಗೆ ಆರೋಪಿ ಪ್ರಭಾಸ್ ಮೊಂಡಾಲ್ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.