Asianet Suvarna News Asianet Suvarna News

ಕಾಲ ಚಸ್ಮಾ ಹಾಡಿಗೆ ಮೈ ಕೊರೆಯುವ ಚಳಿಯ ನಡುವೆ ಯೋಧರ ಡಾನ್ಸ್

ಕಾಲ ಚಸ್ಮಾ ಕ್ವಿಕ್ ಮೂವ್ಸ್ ಈಗ ವಿಶ್ವದಾದ್ಯಂತ ಫೇಮಸ್ ಆಗಿದೆ. ತೊದಲು ನುಡಿಯ ಮಗುವಿನಿಂದ ಹಿಡಿದು ಅಜ್ಜ ಅಜ್ಜಿಯವರೆಗೆ ಎಲ್ಲರೂ ಈ ಹಾಡಿನ ಮೋಡಿಗೊಳಗಾಗಿ ಹೆಜ್ಜೆ ಹಾಕುತ್ತಿದ್ದಾರೆ. ಈಗ ಯೋಧರ ಸರದಿ. ಯೋಧರು ಮೈ ಕೊರೆಯುವ ಮೈನಸ್ ಡಿಗ್ರಿ ತಾಪಮಾನದಲ್ಲಿ ಮಂಜಿನ ಮೇಲೆ ನಿಂತು ಕಾಲ ಚಸ್ಮಾದ ಕ್ವಿಕ್ ಸ್ಟೈಲ್‌ಗೆ ಹೆಜ್ಜೆ ಹಾಕಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

watch viral video Indian soldiers dancing kala chasma song in chilling minus degree wether akb
Author
First Published Nov 17, 2022, 10:35 PM IST

ಕಾಲ ಚಸ್ಮಾ ಕ್ವಿಕ್ ಮೂವ್ಸ್ ಈಗ ವಿಶ್ವದಾದ್ಯಂತ ಫೇಮಸ್ ಆಗಿದೆ. ತೊದಲು ನುಡಿಯ ಮಗುವಿನಿಂದ ಹಿಡಿದು ಅಜ್ಜ ಅಜ್ಜಿಯವರೆಗೆ ಎಲ್ಲರೂ ಈ ಹಾಡಿನ ಮೋಡಿಗೊಳಗಾಗಿ ಹೆಜ್ಜೆ ಹಾಕುತ್ತಿದ್ದಾರೆ. ಈಗ ಯೋಧರ ಸರದಿ. ಯೋಧರು ಮೈ ಕೊರೆಯುವ ಮೈನಸ್ ಡಿಗ್ರಿ ತಾಪಮಾನದಲ್ಲಿ ಮಂಜಿನ ಮೇಲೆ ನಿಂತು ಕಾಲ ಚಸ್ಮಾದ ಕ್ವಿಕ್ ಸ್ಟೈಲ್‌ಗೆ ಹೆಜ್ಜೆ ಹಾಕಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಕಾಲಾ ಚಸ್ಮಾ (Kala chasma) ಹಾಡು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವ ಹಾಡು, ಇತ್ತೀಚೆಗೆ ವಿದೇಶಿಯರು ಕೂಡ ಈ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕುವ ಮೂಲಕ ವಿಶ್ವದಾದ್ಯಂತ ಈ ಹಾಡು ಹಲ್ ಚಲ್ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣ (Social Media) ಇನ್ಸ್ಟಾಗ್ರಾಮ್‌ನಲ್ಲೂ (Instagram) ಕೂಡ ಈ ಹಾಡು ಸಾಕಷ್ಟು ಹವಾ ಸೃಷ್ಟಿಸಿದೆ. ಕೆಲ ದಿನಗಳ ಹಿಂದೆ ವಿದೇಶದ ಮದುವೆ ಸಮಾರಂಭವೊಂದರಲ್ಲಿ ನಾರ್ವೆಯ ಕೆಲ ಯುವಕರು ಕ್ವಿಕ್ ಸ್ಟೈಲ್‌ ಹೆಸರಿನಲ್ಲಿ ಈ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದರು. ಈ ಕ್ವಿಕ್ ಸ್ಟೈಲ್ ಈಗ ಸಖತ್ ಫೇಮಸ್ ಆಗಿದ್ದು, ಭಾರತದ ಈ ಕಾಲಾ ಚಸ್ಮಾ ಹಾಡಿಗೆ ವಿವಿಧ ದೇಶಗಳ ಯುವ ಸಮೂಹ ತಮ್ಮದೇ ಸ್ಟೈಲ್‌ ಅಲ್ಲಿ ಗುಂಪು ಗುಂಪಾಗಿ ಕುಣಿಯುತ್ತಿದ್ದು, ಇದು ಯೂಟ್ಯೂಬ್, ಇನ್ಸ್ಟಾಗ್ರಾಮ್ ಮುಂತಾದ ಜಾಲತಾಣಗಳಲ್ಲಿ ವೈರಲ್ ಆಗಿ ಟ್ರೆಂಡ್ (trend) ಸೃಷ್ಟಿಸಿದೆ.   

ಹಾಗೆಯೇ ಈ ಹಾಡಿಗೆ ಈಗ ನಮ್ಮ ಯೊಧರು ಮನಸೋತಿದ್ದು, ಸಖತ್ ಆಗಿ ನಡುಗುವ ಚಳಿಯ ಮಧ್ಯೆಯೂ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಹಿಂದೂ ತೀರ್ಥಕ್ಷೇತ್ರದಲ್ಲಿ Instagram Influencers ಹಾವಳಿ: ಹರ್ ಕೀ ಪೌರಿಯಲ್ಲಿ ಕಾಲಾ ಚಸ್ಮಾಗೆ ಡಾನ್ಸ್‌

ಡಾನ್ಸ್‌ಗೆ ಕರೆದ ತಾತನಿಗೆ ನೋ ಎಂದ ಅಜ್ಜಿ... ಆಮೇಲೆ ತಾತ ಮಾಡಿದ್ದು ಕಿತಾಪತಿ..!

Follow Us:
Download App:
  • android
  • ios