Asianet Suvarna News Asianet Suvarna News

ಹಿಂದೂ ತೀರ್ಥಕ್ಷೇತ್ರದಲ್ಲಿ Instagram Influencers ಹಾವಳಿ: ಹರ್ ಕೀ ಪೌರಿಯಲ್ಲಿ ಕಾಲಾ ಚಸ್ಮಾಗೆ ಡಾನ್ಸ್‌

ಲ್ಲೆಂದರಲ್ಲಿ ಡಾನ್ಸ್‌ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವ ಈ ಸೋಶಿಯಲ್ ಮೀಡಿಯಾ ಇಂಪ್ಲುಯೆನ್ಸರ್‌ಗಳ ಹಾವಳಿ, ತೀರ್ಥಕ್ಷೇತ್ರಕ್ಕೂ ವ್ಯಾಪಿಸಿದ್ದು, ಈ ಬಗ್ಗೆ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

Instagram Influencers danced Kala chasma song in Hindu Pilgrimage Har Ki Pauri in Haridwar Spark Outrage in twitter akb
Author
First Published Sep 14, 2022, 12:40 PM IST

ಹರಿದ್ವಾರ: ಕಾಲಾ ಚಸ್ಮಾ ಹಾಡು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವ ಹಾಡು, ಇತ್ತೀಚೆಗೆ ವಿದೇಶಿಯರು ಕೂಡ ಈ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕುವ ಮೂಲಕ ವಿಶ್ವದಾದ್ಯಂತ ಈ ಹಾಡು ಹಲ್ ಚಲ್ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲೂ ಕೂಡ ಈ ಹಾಡು ಸಾಕಷ್ಟು ಹವಾ ಸೃಷ್ಟಿಸಿದೆ. ಕೆಲ ದಿನಗಳ ಹಿಂದೆ ವಿದೇಶದ ಮದುವೆ ಸಮಾರಂಭವೊಂದರಲ್ಲಿ ನಾರ್ವೆಯ ಕೆಲ ಯುವಕರು ಕ್ವಿಕ್ ಸ್ಟೈಲ್‌ ಹೆಸರಿನಲ್ಲಿ ಈ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದರು. ಈ ಕ್ವಿಕ್ ಸ್ಟೈಲ್ ಈಗ ಸಖತ್ ಫೇಮಸ್ ಆಗಿದ್ದು, ಭಾರತದ ಈ ಕಾಲಾ ಚಸ್ಮಾ ಹಾಡಿಗೆ ವಿವಿಧ ದೇಶಗಳ ಯುವ ಸಮೂಹ ತಮ್ಮದೇ ಸ್ಟೈಲ್‌ ಅಲ್ಲಿ ಗುಂಪು ಗುಂಪಾಗಿ ಕುಣಿಯುತ್ತಿದ್ದು, ಇದು ಯೂಟ್ಯೂಬ್, ಇನ್ಸ್ಟಾಗ್ರಾಮ್ ಮುಂತಾದ ಜಾಲತಾಣಗಳಲ್ಲಿ ವೈರಲ್ ಆಗಿ ಟ್ರೆಂಡ್ ಸೃಷ್ಟಿಸಿದೆ.    

ಈ ಮಧ್ಯೆ ಭಾರತದಲ್ಲೂ ಈ ಕ್ವಿಕ್‌ ಸ್ಟೈಲ್ ಕಾಲಾ ಚಸ್ಮಾ ಹಾಡು ಹವಾ ಕ್ರಿಯೇಟ್ ಮಾಡಿದ್ದು, ಸ್ನೇಹಿತರು, ಕೊರಿಯೋಗ್ರಾಫರ್‌ಗಳ ಗುಂಪುಗಳು ಈ ಹಾಡಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸಖತ್ ಆಗಿ ಸ್ಟೆಪ್ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುತ್ತಿದ್ದಾರೆ. ಈ ರೀತಿ ಎಲ್ಲೆಂದರಲ್ಲಿ ಡಾನ್ಸ್‌ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವ ಈ ಸೋಶಿಯಲ್ ಮೀಡಿಯಾ ಇಂಪ್ಲುಯೆನ್ಸರ್‌ಗಳ ಹಾವಳಿ, ತೀರ್ಥಕ್ಷೇತ್ರಕ್ಕೂ ವ್ಯಾಪಿಸಿದ್ದು, ಈ ಬಗ್ಗೆ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಹಿಂದೂ ಪವಿತ್ರ ತೀರ್ಥಕ್ಷೇತ್ರವಾದ ಹರಿದ್ವಾರದ (Haridwar) ಹರ್ ಕಿ ಪೌರಿಯಲ್ಲಿ ( Har Ki Pauri) ಯುವ ಸಮೂಹವೊಂದು ಈ ಕಾಲಾ ಚಸ್ಮಾ(Kala Chashma) ಹಾಡಿಗೆ ಕುಣಿಯುತ್ತಿದ್ದು, ಇದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 

ಪವಿತ್ರ ಕ್ಷೇತ್ರದಲ್ಲಿ ಯುವಕ ಯುವತಿಯರಿರುವ ತಂಡ ಇನ್ಸ್ಟಾಗ್ರಾಮ್(Instagram)  ರೀಲ್ ಮಾಡುವುದಕ್ಕೋಸ್ಕರ ಈ ಹಾಡಿಗೆ ಇಲ್ಲಿ ಕಾಲು ಕುಣಿಸಿದ್ದಾರೆ. ಇದು ಜನರ ಆಕ್ರೋಶಕ್ಕೆ ಒಳಗಾಗಿದೆ. ಆದರೆ ಈ ಬಗ್ಗೆ ಹರಿದ್ವಾರದ ಪೊಲೀಸರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಸೂರ್ ಗೋಸ್ವಾಮಿ ಎಂಬುವವರು ಟ್ವಿಟ್ ಮಾಡಿದ್ದು, ದೇಗುಲದ ಆವರಣದಲ್ಲಿ(temple premises) ಕ್ಯಾಮರಾ (Camera) ಹಾಗೂ ಮೊಬೈಲ್ ನಿಷೇಧಿಸಬೇಕು ಎಂದು ಮನವಿ ಮಾಡಿದ್ದಾರೆ. 

Instagram Reels ಮಾಡಲು ಹೋಗಿ ರೈಲು ಅಪಘಾತದಲ್ಲಿ ತೀವ್ರ ಗಾಯಗೊಂಡ ಯುವಕ

ಟ್ವಿಟ್ಟರ್ ಬಳಕೆದಾರರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ನೀವು ಧಾರ್ಮಿಕ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ (Tourist places) ಬದಲಾಯಿಸಿದಾಗ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಕಾಶಿಯಲ್ಲಿ ಕೆಲವು ರೀತಿಯ ಸಂಸ್ಕೃತಿಯ ಅವನತಿ ನಡೆಯುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾವೇ ಹಿಂದೂ ಧರ್ಮವಲ್ಲ, ಅದೊಂದು ಜೀವನ ಪದ್ಧತಿ ಇದರಂತೆ ಯಾರೂ ತಮಗಿಷ್ಟ ಬಂದಂತೆ ಏನೂ ಬೇಕಾದರೂ ಮಾಡಬಹುದು ಎಂದು ಹೇಳುತ್ತಾ ಹಿಂದೂ ಧರ್ಮವನ್ನು (Hinduism) ಅವನತಿಯತ್ತ ಕೊಂಡೊಯ್ಯುತ್ತಿರುವುದರಿಂದ ಈ ವಿಪರ್ಯಾಸಗಳು ನಡೆಯುತ್ತಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಇನ್ಸ್ಟಾಗ್ರಾಮ್‌ ಬಳಕೆದಾರರಿಗೆ ಗುಡ್ ನ್ಯೂಸ್: ಇನ್ನುಂದೆ ಮಾಡ್ಬೋದು 90 ಸೆಕೆಂಡುಗಳ ರೀಲ್ಸ್!

ಈ ವಿಚಾರಕ್ಕೆ ಸಂಬಂಧಿಸಿದಂತೆ ಗಂಗಾ ಸಭಾದ ಪ್ರಧಾನ ಕಾರ್ಯದರ್ಶಿ ತನ್ಮಯ್ ವಶಿಷ್ಠ(Tanmay Vashisht) ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯುವ ಸಮೂಹದ ಈ ಕ್ರಮವನ್ನು ಖಂಡಿಸಿದ ಅವರು ಧರ್ಮನಗರಿಯ ಘನತೆಯೊಂದಿಗೆ ಆಟವಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. 
 

Follow Us:
Download App:
  • android
  • ios