ವಿಘ್ನ ನಿವಾರಕನಿಗೆ ತಲೆಬಾಗಿಸಿ ಕೈ ಮುಗಿದ ಶ್ವಾನ... ವಿಡಿಯೋ ವೈರಲ್
ಶ್ವಾನವೊಂದು ತನ್ನ ಮಾಲೀಕನ ಜೊತೆ ಸಾಗುತ್ತಿರುವಾಗ ದೇಗುಲದ ಹೊರಭಾಗದಿಂದಲೇ ತನ್ನೆರಡು ಕೈಗಳನ್ನು ಮುಂದಿರಿಸಿ ಬೆನ್ನನ್ನು ಬಾಗಿಸಿ ದೇವರಿಗೆ ಶರಣಾಗಿದೆ. ಈ ವಿಡಿಯೋವನ್ನು ಒಂದು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಶ್ವಾನದ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಶ್ವಾನವೊಂದು ದೇಗುಲದಲ್ಲಿ ಗಂಟೆ ಬಾರಿಸುತ್ತಿರುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಈಗ ಶ್ವಾನವೊಂದು ದೇವರಿಗೆ ತಲೆಬಾಗಿ ನಮಸ್ಕರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಶ್ವಾನವೊಂದು ತನ್ನ ಮಾಲೀಕನ ಜೊತೆ ಸಾಗುತ್ತಿರುವಾಗ ದೇಗುಲದ ಹೊರಭಾಗದಿಂದಲೇ ತನ್ನೆರಡು ಕೈಗಳನ್ನು ಮುಂದಿರಿಸಿ ಬೆನ್ನನ್ನು ಬಾಗಿಸಿ ದೇವರಿಗೆ ಶರಣಾಗಿದೆ. ಈ ವಿಡಿಯೋವನ್ನು ಒಂದು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಶ್ವಾನದ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತನ್ನ ಮಾಲೀಕ ಗಣೇಶ (Lord Ganesha) ದೇವರಿಗೆ ಕೈ ಮುಗಿಯುತ್ತಿರುವ ವೇಳೆ ಶ್ವಾನವೂ ಕೂಡ ತಲೆಬಾಗಿ ದೇವರಿಗೆ ಕೈ ಮುಗಿಯುತ್ತಿದ್ದು, ನಿಮಿಷಗಳ ಕಾಲ ದೇವರಿಗೆ ತಲೆ ಬಾಗಿದೆ. ಈ ದೃಶ್ಯವನ್ನು ಅದೇ ದಾರಿಯಲ್ಲಿ ಸಾಗುತ್ತಿರುವವರು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಟ್ಟಿದ್ದಾರೆ. ವಿಡಿಯೋದ ಹಿನ್ನೆಲೆಯಲ್ಲಿ ಜೈ ಗಣೇಶ ಜೈ ಗಣೇಶ ಜೈ ಗಣೇಶ ದೇವ ಹಾಡನ್ನು ಹಾಕಲಾಗಿದೆ. ಈ ವಿಡಿಯೋವನ್ನು ಮಹಾರಾಷ್ಟ್ರದ (Maharashtra) ಪುಣೆಯದ್ದು (Pune) ಎಂದು ಹೇಳಲಾಗಿದ್ದು, ಈ ಬಗ್ಗೆ ಖಚಿತತೆ ಇಲ್ಲ.
ವಿಶೇಷ ಚೇತನ ವ್ಯಕ್ತಿಗೆ ನಾಯಿಯ ಆಸರೆ
ನಾಯಿಗಳು ಬಹಳ ಸ್ವಾಮಿನಿಷ್ಠ ಪ್ರಾಣಿಗಳು. ಸಾಮಾಜಿಕ ಜಾಲತಾಣದಲ್ಲಿ ಶ್ವಾನಗಳ ಸಾಕಷ್ಟು ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಹಾಗೆಯೇ ವಿಕಲ ಚೇತನ ವ್ಯಕ್ತಿಗೆ ಶ್ವಾನವೊಂದು ನೆರವಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿಈ ಹಿಂದೆ ವೈರಲ್ ಆಗಿತ್ತು. ವಿಶೇಷ ಚೇತನ ವ್ಯಕ್ತಿಯನ್ನು ಶ್ವಾನವೊಂದು (dog) ರಸ್ತೆ ದಾಟಿಸುವ ವಿಡಿಯೋಗೆ ಜನ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ದಾಳಿ ಮಾಡಲು ಬಂದ ಚಿರತೆಯನ್ನು ಧೈರ್ಯವಾಗಿ ಓಡಿಸಿದ ಶ್ವಾನ: ವಿಡಿಯೋ ವೈರಲ್
ಮಾಲೀಕನ ಹುಡುಕಿಕೊಟ್ಟ ಸಾಕು ನಾಯಿ ಟಾಮಿ
ಶ್ವಾನಗಳು ಬಹಳ ಸ್ವಾಮಿನಿಷ್ಠ ಪ್ರಾಣಿಗಳಾಗಿದ್ದು, ಕೆಲ ದಿನಗಳ ಹಿಂದೆ ರಾಜ್ಯದ ಶಿವಮೊಗ್ಗ(Shivamogga) ಜಿಲ್ಲೆಯಲ್ಲಿ ಶ್ವಾನವೊಂದು ತನ್ನ ಮಾಲೀಕನ ಜೀವ ರಕ್ಷಿಸಿತ್ತು. ಕಟ್ಟಿಗೆ ತರಲು ಕಾಡಿಗೆ ಹೋದ ವ್ಯಕ್ತಿಯೊಬ್ಬ ತಲೆ ಸುತ್ತು ಬಂದು ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದು, ಕೊನೆಗೆ ಸಾಕು ನಾಯಿಯಿಂದ ಆತ ಇರುವ ಜಾಗ ಪತ್ತೆಯಾಗಿತ್ತು. ಹೊಸನಗರ ತಾಲೂಕಿನ ಸೂಡೂರಿನಲ್ಲಿ ಈ ಘಟನೆ ನಡೆದಿತ್ತು. ಸೂಡೂರಿನ ಶೇಖರಪ್ಪ ಎಂಬವರು ಆಯನೂರಿನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದಂದು ಬೆಳಗ್ಗೆ ಸುಮಾರು 6 ಗಂಟೆಗೆ ಕಟ್ಟಿಗೆ ತರೋದಿಕ್ಕೆ ಕಾಡಿಗೆ ಹೋದ ಅವರು 10 ಗಂಟೆಯಾದರೂ ವಾಪಸ್ ಬಂದಿರಲಿಲ್ಲ. ಹೀಗಾಗಿ, ಕುಟುಂಬದವರು ಊರಿನ ಒಂದಿಷ್ಟು ಜನರಿಗೆ ವಿಚಾರ ತಿಳಿಸಿದ್ದಾರೆ.
ನಾಯಿಗೆ ಮದುವೆ ಮಾಡಿ ಕನ್ಯಾದಾನದ ಬಯಕೆ ತೀರಿಸಿಕೊಂಡ ಮಕ್ಕಳಿಲ್ಲದ ದಂಪತಿ
ಊರಿನವರು ಶೇಖರಪ್ಪ ಅವರನ್ನು ಹುಡುಕಲು ಕಾಡಿಗೆ ಹೋಗಿದ್ದಾರೆ. ಕಾಡಿನಲ್ಲಿ ಎಷ್ಟು ಹುಡುಕಿದರು ಶೇಖರಪ್ಪ ಅವರ ಸುಳಿವು ಸಿಗಲೇ ಇಲ್ಲ. ಆದರೆ, ಈತ ಸಾಕಿದ್ದ ನಾಯಿಯೊಂದು ಶೇಖರಪ್ಪ ಇರುವ ಜಾಗ ಪತ್ತೆ ಹಚ್ಚಿದೆ. ಶ್ವಾನವು ಸುಮಾರು 4 ಗಂಟೆ ಸುಮಾರಿಗೆ ಶೇಖರಪ್ಪ ಇರುವ ಜಾಗಕ್ಕೆ ಊರಿನವರನ್ನು ಕರೆ ತಂದಿದೆ. ಅಸ್ವಸ್ಥಗೊಂಡಿದ್ದ ಶೇಖರಪ್ಪ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಈ ನಾಯಿ ಪ್ರತಿನಿತ್ಯ ಮಾಲೀಕನ ಜೊತೆಯಲ್ಲಿ ಹೋಗುತ್ತಿತ್ತಂತೆ. ಹಾಗಾಗಿಯೇ, ಶೇಖರಪ್ಪ ಅವರನ್ನು ಕಾಡಿನಲ್ಲಿ ಪತ್ತೆ ಮಾಡಿದೆ ಎನ್ನಲಾಗಿದೆ.
ದೇಗುಲದಲ್ಲಿ ಪೂಜೆ ವೇಳೆ ಗಂಟೆ ಬಾರಿಸುವ ಶ್ವಾನ... ವಿಡಿಯೋ ವೈರಲ್