ಆಸ್ಪತ್ರೆಯ ವಾರ್ಡ್‌ ಬಾಯ್ ಒಬ್ಬ ಅಸ್ಪತ್ರೆಯಲ್ಲಿ ಅಡ್ಮಿಟ್ ಆದ ವೃದ್ಧ ರೋಗಿಯ ಮೇಲೆ ಹಲ್ಲೆ ಮಾಡುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಾರ್ಡ್‌ಬಾಯ್ ಕೃತ್ಯಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮುಂಬೈ: ಆಸ್ಪತ್ರೆಯ ವಾರ್ಡ್‌ ಬಾಯ್ ಒಬ್ಬ ಅಸ್ಪತ್ರೆಯಲ್ಲಿ ಅಡ್ಮಿಟ್ ಆದ ವೃದ್ಧ ರೋಗಿಯ ಮೇಲೆ ಹಲ್ಲೆ ಮಾಡುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಾರ್ಡ್‌ಬಾಯ್ ಕೃತ್ಯಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ವಾರ್ಡ್ ಬಾಯ್ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ರೋಗಿಯ ಹೊಟ್ಟೆಯ ಮೇಲೆ ತನ್ನ ಮೊಣಕೈನಿಂದ ದಾಳಿ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಜನ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

ಘಟನೆ ಜೂನ್ 19 ರಂದು ನಡೆದಿದ್ದರೆ, ಅದರ ವೀಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಘಟನೆ ನಡೆದ ಸ್ಥಳದ ಸರಿಯಾದ ಲೋಕೇಷನ್ ಎಲ್ಲಿ ಎಂಬುದು ಪತ್ತೆಯಾಗಿಲ್ಲ, ಹಾಸ್ಪಿಟಲ್ ಸ್ಟಾಪ್‌ನಂತೆ ಸಮವಸ್ತ್ರ ಧರಿಸಿರುವ ಆತ ಬೆಡ್ ಮೇಲೆ ಮಲಗಿದ್ದ ರೋಗಿಯ ಬಳಿ ಬಂದು ಮತ್ತೊಂದು ಸೈಡ್‌ಗೆ ತನ್ನ ಕೃತ್ಯ ಕಾಣದಂತೆ ಕರ್ಟನ್‌ನಿಂದ ಮುಚ್ಚುತ್ತಾನೆ ಬಳಿಕ ರೋಗಿಯ ಸಮೀಪ ಬಂದು ಆತ ಹೊಟ್ಟೆಯ ಮೇಲೆ ತನ್ನ ಮೊಣಕೈನಿಂದ ಹೊಡೆಯುತ್ತಾನೆ. ಅಷ್ಟರಲ್ಲಿ ಆತನಿಗೆ ಅಲ್ಲಿ ಸಿಸಿಟಿವಿ ಇರುವುದು ಕಾಣಿಸಿದ್ದು, ಕ್ಷಣದಲ್ಲಿ ಅಲ್ಲಿಂದ ಎಸ್ಕೇಪ್ ಆಗುತ್ತಾನೆ. 

ಹಾಸನ: ಮೈಮೇಲೆ ದೇವರು ಬಂದಿದೆ ಎಂದು ಕೋವಿಡ್‌ ರೋಗಿಯ ಮೇಲೆ ಸೆಕ್ಯುರಿಟಿ ಗಾರ್ಡ್‌ ಹಲ್ಲೆ

ಫ್ರೊಫೆಸರ್ ಸುಧಾಂಶು ಎಂಬುವವರು ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಜನ ವೈದ್ಯರಿಗೆ ದೇವರ ಸ್ಥಾನ ನೀಡಿದ್ದರೆ, ಇಲ್ಲೊಬ್ಬ ವೈದ್ಯ ರಾಕ್ಷಸನಂತೆ ವರ್ತಿಸುತ್ತಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ವೀಡಿಯೋ ನೋಡಿದ ಅನೇಕರು ಇದು ವೈದ್ಯರ ಕೃತ್ಯವಲ್ಲ, ಈತ ವಾರ್ಡ್‌ಬಾಯ್ ಅಥವಾ ಆಸ್ಪತ್ರೆ ಸಿಬ್ಬಂದಿ ಆಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಮಂಡ್ಯದಲ್ಲಿ ಪುಡಿರೌಡಿಗಳ ಹಾವಳಿ: ಅಡ್ಡಾದಿಡ್ಡಿ ಬೈಕ್ ಚಾಲನೆ ಪ್ರಶ್ನಿಸಿದ್ದಕ್ಕೆ ವೃದ್ಧನ ಮೇಲೆ ಹಲ್ಲೆ

ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ಇಂತಹವರನ್ನು ವೈದ್ಯರು ಎಂದು ಕರೆಯುವುದಲ್ಲ, ದೆವ್ವಗಳು ಎಂದು ಕರೆಯಬೇಕು ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈತ ವೈದ್ಯ ಅಲ್ಲವೇ ಅಲ್ಲ, ಆತ ನರ್ಸಿಂಗ್ ಸ್ಟಾಪ್ ವೈದ್ಯರ ಮೇಲೆಕೆ ಗೂಬೆ ಕೂರಿಸುತ್ತಿರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಆದರೆ ಇದು ಯಾವ ಆಸ್ಪತ್ರೆಯಲ್ಲಿ ನಡೆದ ಘಟನೆ ಎಂಬ ಬಗ್ಗೆ ಮಾಹಿತಿ ಇಲ್ಲ, ಹಾಗೂ ಈ ಬಗ್ಗೆ ಪ್ರಕರಣ ದಾಖಲಾದ ಬಗ್ಗೆ ವರದಿ ಆಗಿಲ್ಲ.

Scroll to load tweet…