ಮಂಡ್ಯದಲ್ಲಿ ಪುಡಿರೌಡಿಗಳ ಹಾವಳಿ: ಅಡ್ಡಾದಿಡ್ಡಿ ಬೈಕ್ ಚಾಲನೆ ಪ್ರಶ್ನಿಸಿದ್ದಕ್ಕೆ ವೃದ್ಧನ ಮೇಲೆ ಹಲ್ಲೆ
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಒಂದರ ಹಿಂದೊಂದು ಅಪರಾಧ ಪ್ರಕರಣಗಳು ನಡೆಯುತ್ತಲೆ ಇವೆ. ಕೆಲ ದಿನಗಳಿಂದ ಕೊಲೆ, ದರೋಡೆ, ಹಲ್ಲೆ ಪ್ರಕರಣಗಳು ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಜನರು ಆತಂಕದ ನಡುವೆ ಬದುಕುವಂತಾಗಿದೆ.
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಒಂದರ ಹಿಂದೊಂದು ಅಪರಾಧ ಪ್ರಕರಣಗಳು ನಡೆಯುತ್ತಲೆ ಇವೆ. ಕೆಲ ದಿನಗಳಿಂದ ಕೊಲೆ, ದರೋಡೆ, ಹಲ್ಲೆ ಪ್ರಕರಣಗಳು ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಜನರು ಆತಂಕದ ನಡುವೆ ಬದುಕುವಂತಾಗಿದೆ. ನಿನ್ನೆಯೂ ಕೂಡ ಇಂತಹುದೇ ಒಂದು ಪ್ರಕರಣ ನಡೆದಿದ್ದು, ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿದ್ದ ಪುಂಡರನ್ನ ಪ್ರಶ್ನಿಸಿದ ಕಾರಣಕ್ಕೆ ವೃದ್ಧನ ಮೇಲೆ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಘಟನೆ ಹಿನ್ನೆಲೆ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ (Banglore Mysore highway) 60 ವರ್ಷದ ವೃದ್ಧನ ಮೇಲೆ ಪುಡಿ ರೌಡಿಗಳು ಹಲ್ಲೆ ನಡೆಸಿದ್ದಾರೆ. ತೂಬಿನಕೆರೆ (Tubinakere) ಗ್ರಾಮದ ಶಂಕರೇಗೌಡ (Shankare gowda) ಎಂಬುವರ ಮೇಲೆ ಹಲ್ಲೆ ನಡೆದಿದೆ. ನಿನ್ನೆ ಜಮೀನಿಗೆ ತೆರಳುವ ವೇಳೆ ಯುವಕರು ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿದ್ದನ್ನು ಕಂಡ ರೈತ ಶಂಕರೇಗೌಡ ಅವರನ್ನು ಪ್ರಶ್ನಿಸಿದ್ದಾರೆ. ಸರಿಯಾಗಿ ಚಾಲನೆ ಮಾಡಿ ಯಾರಿಗಾದರೂ ತೊಂದರೆಯಾದೀತು ಎಂದು ಬುದ್ದಿವಾದ ಹೇಳಿದ್ದಾರೆ. ಇಷ್ಟಕ್ಕೆ ಶಂಕರೇಗೌಡನ ಜೊತೆ ವಾಗ್ವಾದಕ್ಕಿಳಿದ ಇಬ್ಬರ ಯುವಕರು ವೃದ್ಧನೊಂದಿಗೆ ಅತಿರೇಕದಿಂದ ವರ್ತಿಸಿ ತಮ್ಮ ಬೈಕ್‌ನಲ್ಲಿದ್ದ ಲಾಂಗ್ ತಂದು ಹಲ್ಲೆ ನಡೆಸಿದ್ದಾರೆ.
Bengaluru Crime News: ಕೊಲೆ ಸಂಚು ರೂಪಿಸಿದ್ದ ರೌಡಿ ಶೀಟರ್ ಬಂಧನ: ಪಿಸ್ತೂಲ್, 5 ಜೀವಂತ ಗುಂಡು ಸೀಝ್
ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವ ಯುವಕರು ಸಾರ್ವಜನಿಕರು ಆಗಮಿಸುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ. ಸರಿಯಾಗಿ ಮೀಸೆ ಚಿಗುರದ ಪುಡಿರೌಡಿಗಳ ಕೃತ್ಯಕ್ಕೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದು ಪುಂಡರನ್ನ ಮಟ್ಟ ಹಾಕುವಂತೆ ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹಲ್ಲೆ ನಡೆಸಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಈ ಹಿಂದೆಯೂ ಹಲವು ಅಪರಾಧ ಪ್ರಕರಣಗಳಲ್ಲಿ ಈ ಯುವಕರು ಭಾಗಿಯಾಗಿರುವ ಬಗ್ಗೆ ಮಾಹಿತಿಗಳಿದ್ದು, ಇಂತಹವರಿಗೆ ಬುದ್ದಿ ಕಲಿಸದ ಪೊಲೀಸ್ ಇಲಾಖೆ ವಿರುದ್ಧವೇ ಸಾರ್ವಜನಿಕರು (Public) ಅಸಮಾಧಾನ ಹೊರ ಹಾಕಿದ್ದಾರೆ. ಪುಡಿರೌಡಿಗಳನ್ನು ಮಟ್ಟಹಾಕಿ ಜನರ ನೆಮ್ಮದಿ ಜೀವನಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಕೊಲೆಗೈದು ಪರಾರಿಯಾಗುವ ವೇಳೆ ಬೈಕ್ ಸೀಸರ್ ಕೈಗೆ ಸಿಕ್ಕಿಬಿದ್ದಿದ್ದ ಹಂತಕರು
ಕೆಆರ್ ಪೇಟೆ (KR Pete) ರೌಡಿಶೀಟರ್ ಅರುಣ್ (Arun)ಹತ್ಯೆ ನಡೆಸಿ ಪರಾರಿಯಾಗುತ್ತಿದ್ದ ಹಂತಕರನ್ನು ಬೈಕ್ ಸೀಸರ್‌ಗಳು ಅಡ್ಡಗಟ್ಟಿದ ವೇಳೆ ಮಾರಕಾಸ್ತ್ರ ಪ್ರದರ್ಶಿಸಿದ ವಿಡಿಯೋ ವೈರಲ್ ಆಗಿತ್ತು. ಕೆಆರ್ ಪೇಟೆ ಈಶ್ವರನ ದೇವಾಲಯಕ್ಕೆ (Ishwara Temple) ತೆರಳಿದ್ದ ವೇಳೆ ಅರುಣ್‌ನನ್ನು ಕೊಚ್ಚಿ ಕೊಲೆಗೈದಿದ್ದ ದುಷ್ಕರ್ಮಿಗಳು ಅವೆಂಜರ್ ಬೈಕ್ (Avenger Bike) ಮೂಲಕ ಎಸ್ಕೇಪ್ ಆಗಿದ್ರು. ಮೈಸೂರು ಜಿಲ್ಲೆ ಕೆಆರ್ ನಗರದಲ್ಲಿ ಹಂತಕರ ಬೈಕ್ ಅಡ್ಡಗಟ್ಟಿದ್ದ ಬೈಕ್ ಸೀಸರ್ಸ್ ಲೋನ್ ಕಟ್ಟದ ಹಿನ್ನೆಲೆ ಬೈಕ್ ಜಪ್ತಿ ಮಾಡುವುದಾಗಿ ಹೇಳಿದ್ರು. ಈ ವೇಳೆ ಪ್ರವೀಣ್ ಎಂಬುವನಿಗೆ ಕರೆ ಮಾಡಿ ಮಾತನಾಡಿದ ಆರೋಪಿಗಳು ಕೇಸ್ ಮಾಡಿ ಬರ್ತಿರುವುದಾಗಿ ಹೇಳುತ್ತಾರೆ. ಈ ವೇಳೆ ಏನು ಕೇಸ್ ಎಂಬ ಬೈಕ್ ಸೀಸರ್ ಪ್ರಶ್ನೆಗೆ ಉತ್ತರಿಸಿದ ಹಂತಕ ಕೆಆರ್ ಪೇಟೆಯಲ್ಲಿ ಕೊಲೆ ಮಾಡಿ ಬಂದಿದ್ದೇವೆ ಎನ್ನುತ್ತಾನೆ. ಜೊತೆಗೆ ಪ್ಲಾಸ್ಟಿಕ್ ಚೀಲದಿಂದ ಮುಚ್ಚಿದ ಲಾಂಗು ಮಚ್ಚುಗಳನ್ನು ಪ್ರದರ್ಶಿಸುತ್ತಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ರೌಡಿಶೀಟರ್ ಕೊಲೆಗೈದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರು- ಮೈಸೂರು ಹೆದ್ದಾರಿ ಕ್ರೆಡಿಟ್ ವಾರ್, ಪ್ರತಾಪ್ ಸಿಂಹಗೆ ಸುಮಲತಾ ಪರೋಕ್ಷ ಪಂಚ್!