ಹಾಸನ: ಮೈಮೇಲೆ ದೇವರು ಬಂದಿದೆ ಎಂದು ಕೋವಿಡ್‌ ರೋಗಿಯ ಮೇಲೆ ಸೆಕ್ಯುರಿಟಿ ಗಾರ್ಡ್‌ ಹಲ್ಲೆ

ಕೋವಿಡ್‌ ರೋಗಿ ಮೇಲೆ ಹಲ್ಲೆ ನಡೆಸಿದ ಸೆಕ್ಯುರಿಟಿ ಗಾರ್ಡ್‌| ಹಾಸನ ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ನಡೆದ ಘಟನೆ| ಕೊರೋನಾ ಸೋಂಕಿಗೆ ಒಳಗಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಮುಗಿಸಿ ಮನೆಗೆ ಹೋಗಬೇಕಿತ್ತು| ಅದೇ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್‌ ತನ್ನ ಮೇಲೆ ದೇವರು ಬಂದಿದೆ ಎಂದು ಹೇಳಿಕೊಂಡು ಕೈಗೆ ಸಿಕ್ಕ ಈ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ| 

Security Guard Assault on Corona Patient in Covid Hospital in Hassan

ಹಾಸನ(ಆ.17): ತನ್ನ ಮೈಮೇಲೆ ದೇವರು ಬಂದಿದೆ ಎಂದು ಹೇಳಿ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್‌ ಒಬ್ಬ ಕೋವಿಡ್‌ ರೋಗಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿರುವ ಕೋವಿಡ್‌ ಆಸ್ಪತ್ರೆಯಲ್ಲಿ ನಿನ್ನೆ(ಭಾನುವಾರ) ನಡೆದಿದೆ.

ಕೊರೋನಾ ಸೋಂಕಿಗೆ ಒಳಗಾಗಿದ್ದ ಮಹಿಳೆಯೊಬ್ಬರು 14 ದಿನಗಳ ಐಸೋಲೇಷನ್‌ನಲ್ಲಿ ಚಿಕಿತ್ಸೆ ಮುಗಿಸಿ ಮನೆಗೆ ಹೋಗಬೇಕಿತ್ತು. ಆದರೆ, ಅದೇ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್‌ ರಘು ಎಂಬಾತ ತನ್ನ ಮೇಲೆ ದೇವರು ಬಂದಿದೆ ಎಂದು ಹೇಳಿಕೊಂಡು ವಿಚಿತ್ರವಾಗಿ ವರ್ತಿಸುತ್ತಾ ಕೈಗೆ ಸಿಕ್ಕ ಈ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ರೋಗಿಯ ಮುಖ ಮತ್ತು ಕೈಗೆ ಗಾಯಗಳಾಗಿ ಮತ್ತದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುವಂತಾಗಿದೆ.

ಹಾಸನದ ಕಾರ್ಖಾನೆಯ 50 ಕಾರ್ಮಿಕರಿಗೆ ಒಂದೇ ಬಾರಿ ವಕ್ಕರಿಸಿದ ವೈರ​ಸ್‌

ಅಲ್ಲಿನ ಸಿಬ್ಬಂದಿ ಹೇಳುವ ಪ್ರಕಾರ ಸೆಕ್ಯುರಿಟಿ ಗಾರ್ಡ್‌ ರಘು ಈ ಹಿಂದೆ ಯಾವಾಗಲೂ ಈ ರೀತಿ ವರ್ತಿಸಿರಲಿಲ್ಲ. ಆದರೆ, ಇದೀಗ ಈ ಸೋಂಕಿತೆ ಮೇಲೆ ಈ ರೀತಿ ಹಲ್ಲೆ ಮಾಡಿರುವುದಕ್ಕೆ ಬೇರೆ ಕಾರಣವೇನಾದರೂ ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios