Asianet Suvarna News Asianet Suvarna News

ಮೇಘಾಲಯ, ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆ ಮತದಾನ ಆರಂಭ: ಮತ ಹಾಕಲು ಸಾಲುಗಟ್ಟಿ ನಿಂತಿರುವ ಜನತೆ

ಕಣಿವೆ ರಾಜ್ಯದಲ್ಲಿ ಎಲ್ಲಾ ಚುನಾವಣಾ ಅಧಿಕಾರಿಗಳು ಶನಿವಾರದಿಂದಲೇ ಮತಗಟ್ಟೆಗಳತ್ತ ತೆರಳುತ್ತಿದ್ದು, ಬೆಟ್ಟಗಳನ್ನು ಏರಿ, ಕೆಸರು ತುಂಬಿದ ನದಿಗಳನ್ನು ದಾಟಿ ಮತಗಟ್ಟೆಗಳನ್ನು ತಲುಪಿದ್ದಾರೆ.

voting for nagaland meghalaya assembly elections begins amid tight security ash
Author
First Published Feb 27, 2023, 7:51 AM IST

ಕೊಹಿಮಾ/ಶಿಲ್ಲಾಂಗ್‌ (ಫೆಬ್ರವರಿ 27, 2023): ನಾಗಾಲ್ಯಾಂಡ್‌ ಮತ್ತು ಮೇಘಾಲಯ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಸೋಮವಾರ ನಡೆಯಲಿದೆ. ಎರಡೂ ರಾಜ್ಯಗಳಲ್ಲಿ ತಲಾ 60 ಕ್ಷೇತ್ರಗಳಿದ್ದು, ಎರಡರಲ್ಲೂ ತಲಾ 1 ಕಡೆ ಅವಿರೋಧ ಆಯ್ಕೆ ನಡೆದಿದೆ. ಈ ಹಿನ್ನೆಲೆಯಲ್ಲಿ 59 ಕ್ಷೇತ್ರದಲ್ಲಿ ಮಾತ್ರ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಜನರು ಈಗಾಗಲೇ ಸಾಲುಗಟ್ಟಿ ತಮ್ಮ ಹಕ್ಕನ್ನು ಸಾಧಿಸಲು ಮತಗಟ್ಟೆಗಳ ಮುಂದೆ ನಿಂತಿದ್ದಾರೆ.

ಮೇಘಾಲಯದಲ್ಲಿ (Meghalaya) ಹಾಲಿ ಬಿಜೆಪಿ (BJP) -ಎನ್‌ಪಿಪಿ (NPP) ಅಧಿಕಾರದಲ್ಲಿದ್ದರೂ, ಈ ಸಲ ಎರಡೂ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸುವೆ. ಇದರ ಜತೆಗೆ ತೃಣಮೂಲ ಕಾಂಗ್ರೆಸ್‌ (Trinamool Congress) ಕೂಡ ಕಣದಲ್ಲಿದೆ. ಹೀಗಾಗಿ ತ್ರಿಕೋನ ಸಮರ ಏರ್ಪಟ್ಟಿದೆ.

ಇದನ್ನು ಓದಿ: ಮೋದಿ ನಿಮ್ಮ ಸಮಾಧಿ ತೋಡಲಾಗುತ್ತದೆ ಎಂಬ ಕಾಂಗ್ರೆಸ್‌ ಘೋಷಣೆಗೆ ಪ್ರಧಾನಿ ಎದಿರೇಟು

ಇನ್ನು ನಾಗಾಲ್ಯಾಂಡ್‌ನಲ್ಲಿ (Nagaland) ಹಾಲಿ ಅಧಿಕಾರದಲ್ಲಿರುವ ಎನ್‌ಡಿಪಿಪಿ (NDPP) ಹಾಗೂ ಬಿಜೆಪಿ (BJP)ಮೈತ್ರಿಕೂಟ ಮತ್ತೆ ಸ್ಪರ್ಧಿಸುತ್ತಿದೆ. ಕಾಂಗ್ರೆಸ್‌ (Congress) ಹಾಗೂ ಇತರ ಪ್ರಾದೇಶಿಕ ಪಕ್ಷಗಳೂ ಕಣದಲ್ಲಿವೆ.

ನಾಗಾಲ್ಯಾಂಡ್‌ನಲ್ಲಿ ಒಟ್ಟು 13 ಲಕ್ಷ ಮಂದಿ ಮತ ಚಲಾಯಿಸಲು ಅರ್ಹತೆಯನ್ನು ಪಡೆದುಕೊಂಡಿದ್ದು, ಕಣದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 183 ಅಭ್ಯರ್ಥಿಗಳಿದ್ದಾರೆ. ಇದರಲ್ಲಿ 19 ಮಂದಿ ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ. ಒಟ್ಟು 60 ವಿಧಾನಸಭಾ ಕ್ಷೇತ್ರಗಳಿರುವ ನಾಗಾಲ್ಯಾಂಡ್‌ನಲ್ಲಿ ಅಕುಲುಟೋ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಹಾಲಿ ಬಿಜೆಪಿ ಶಾಸಕ ಕಜೇಟೋ ಕಿನಿಮಿ ಪ್ರತಿಸ್ಪರ್ಧಿಗಳಿಲ್ಲದೇ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: 3 ಈಶಾನ್ಯ ರಾಜ್ಯಗಳಿಗೆ ಚುನಾವಣಾ ದಿನಾಂಕ ಘೋಷಣೆ: ಫೆಬ್ರವರಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ

ಇನ್ನು ಮೇಘಾಲಯದಲ್ಲಿ 59 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, 3,419 ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಕಣಿವೆ ರಾಜ್ಯದಲ್ಲಿ ಎಲ್ಲಾ ಚುನಾವಣಾ ಅಧಿಕಾರಿಗಳು ಶನಿವಾರದಿಂದಲೇ ಮತಗಟ್ಟೆಗಳತ್ತ ತೆರಳುತ್ತಿದ್ದು, ಬೆಟ್ಟಗಳನ್ನು ಏರಿ, ಕೆಸರು ತುಂಬಿದ ನದಿಗಳನ್ನು ದಾಟಿ ಮತಗಟ್ಟೆಗಳನ್ನು ತಲುಪಿದ್ದಾರೆ. ಈ ಎರಡು ರಾಜ್ಯಗಳಲ್ಲೂ ಫೆಬ್ರವರಿ 27ರಂದು ಮತದಾನ ನಡೆಯಲಿದ್ದು, ಮಾರ್ಚ್ 2ರಂದು ಫಲಿತಾಂಶ ಪ್ರಕಟವಾಗಲಿದೆ.

ನಾಗಾಲ್ಯಾಂಡ್‌ ಮತ್ತು ಮೇಘಾಲಯ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ ಪ್ರಚಾರಕ್ಕೆ ಶನಿವಾರ ತೆರೆಬಿದ್ದಿತ್ತು. ಈ ಎರಡು ರಾಜ್ಯಗಳಲ್ಲೂ ಫೆಬ್ರವರಿ 27ರಂದು ಮತದಾನ ನಡೆಯಲಿದ್ದು, ಮಾರ್ಚ್‌ 2ರಂದು ಫಲಿತಾಂಶ ಪ್ರಕಟವಾಗಲಿದೆ. ಇತ್ತೀಚೆಗೆ ಮುಗಿದ ತ್ರಿಪುರ (Tripura) ವಿಧಾನಸಭೆ ಚುನಾವಣಾ ಫಲಿತಾಂಶವೂ ಅಂದೇ ಪ್ರಕಟವಾಗಲಿದೆ.

ಇದನ್ನೂ ಓದಿ: ಭಾರತದ ಅತೀ ಸ್ವಚ್ಛ ಗ್ರಾಮವಿದು, ಊರೆಲ್ಲಾ ಹುಡುಕಿದರೂ ಒಂಚೂರು ಕಸವಿಲ್ಲ

Follow Us:
Download App:
  • android
  • ios