3 ಈಶಾನ್ಯ ರಾಜ್ಯಗಳಿಗೆ ಚುನಾವಣಾ ದಿನಾಂಕ ಘೋಷಣೆ: ಫೆಬ್ರವರಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ

 ನಾಗಾಲ್ಯಾಂಡ್, ತ್ರಿಪುರಾ, ಮೇಘಾಲಯ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ.

election commission announces poll dates for tripura meghalaya and nagaland ash

ನಾಗಾಲ್ಯಾಂಡ್, ತ್ರಿಪುರಾ, ಮೇಘಾಲಯ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಮಧ್ಯಾಹ್ನ 2.30 ರ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಈ ಮಾಹಿತಿ ನೀಡಿದೆ. ತ್ರಿಪುರಾದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತ ನಡೆಸುತ್ತಿದ್ದರೆ, ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ ಸಹ ಬಿಜೆಪಿ ಮೈತ್ರಿ ಸರ್ಕಾರದ ಭಾಗವಾಗಿದೆ. ಮಾರ್ಚ್‌ 12ರಂದು ನಾಗಾಲ್ಯಾಂಡ್‌ನಲ್ಲಿ ಪ್ರಸ್ತುತ ಸರ್ಕಾರದ ಐದು ವರ್ಷದ ಆಳ್ವಿಕೆ ಮುಗಿಯಲಿದ್ದು, ಅದೇ ರೀತಿ ಮೇಘಾಲಯದಲ್ಲಿ ಮಾರ್ಚ್‌ 15 ಕ್ಕೆ ಸರ್ಕಾರ 5 ವರ್ಷ ಪೂರ್ಣಗೊಳ್ಳಲಿದೆ. ಅದೇ ರೀತಿ, ತ್ರಿಪುರಾದಲ್ಲಿ ಮಾರ್ಚ್‌ 22 ಕ್ಕೆ ಆಡಳಿತಾರೂಢ ಸರ್ಕಾರ ಐದು ವರ್ಷ ಅಂತ್ಯಗೊಳ್ಳಲಿದ್ದು, ಅಷ್ಟರೊಳಗೆ 3 ರಾಜ್ಯಗಳಿಗೆ ಚುನಾವಣೆ ನಡೆಯಲಿದೆ.

ಫೆಬ್ರವರಿ 16 ರಂದು ತ್ರಿಪುರಾದಲ್ಲಿ (Tripura) ಚುನಾವಣೆ (Election) ನಡೆಯಲಿದ್ದರೆ, ಫೆಬ್ರವರಿ 27 ರಂದು ಮೇಘಾಲಯದಲ್ಲಿ (Meghalaya) ಹಾಗೂ ನಾಗಾಲ್ಯಾಂಡ್‌ನಲ್ಲಿ (Nagaland) ವಿಧಾನಸಭೆ ಚುನಾವಣೆ (Assembly Elections) ನಡೆಯಲಿದೆ. ಈಶಾನ್ಯದ (North Eastern) ಮೂರು ಸಹೋದರಿ ರಾಜ್ಯಗಳಲ್ಲೂ (States) ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಹಾಗೆ, ಮೂರೂ ರಾಜ್ಯಗಳ ಮತ ಎಣಿಕೆ ಮಾರ್ಚ್‌ 2 ರಂದು ನಡೆಯಲಿದೆ ಎಂದೂ ಚುನಾವಣಾ ಆಯೋಗ ಘೋಷಣೆ ಮಾಡಿದೆ.ಮೂರೂ ರಾಜ್ಯಗಳಲ್ಲೂ ತಲಾ 60 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ರಿಮೋಟ್‌ ಇವಿಎಂಗೆ ವಿಪಕ್ಷ ತೀವ್ರ ವಿರೋಧ

ಜನವರಿ 21, 2023 ರ ಶನಿವಾರ ತ್ರಿಪುರಾ ವಿಧಾನಸಭೆ ಚುನಾವಣೆ ಕುರಿತು ಚುನಾವಣಾ ಆಯೋಗ ಗೆಜೆಟ್‌ ಅಧಿಸೂಚನೆ ಹೊರಡಿಸಲಿದ್ದು, ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ ಜನವರಿ 31, 2023 ರ ಮಂಗಳವಾರ ಗೆಜೆಟ್‌ ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಹಾಗೆ, ನಾಮಿನೇಷನ್‌ ಸಲ್ಲಿಸಲು ತ್ರಿಪುರಾದಲ್ಲಿ ಜನವರಿ 30 ಕೊನೆಯ ದಿನಾಂಕವಾಗಿದ್ದರೆ, ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ ಫೆಬ್ರವರಿ 7 ರಂದು ಅಂತಿಮ ದಿನಾಂಕವಾಗಿದೆ. ಈ ನಾಮಪತ್ರಗಳ ಪರಿಶೀಲನೆ ತ್ರಿಪುರಾದಲ್ಲಿ ಜನವರಿ 31 ರಂದು ನಡೆಯಲಿದ್ದರೆ, ಉಳಿದ 2 ರಾಜ್ಯಗಳಲ್ಲಿ ಫೆಬ್ರವರಿ 8 ರಂದು ನಡೆಯಲಿದೆ. ಇನ್ನು, ತ್ರಿಪುರಾ, ಮೇಘಾಲಯ ಹಾಗೂ ನಾಗಾಲ್ಯಾಂಡ್‌ ಸೇರಿ 3 ಈಶಾನ್ಯ ರಾಜ್ಯಗಳಲ್ಲಿ ಮಾರ್ಚ್‌ 4  ರೊಳಗೆ ಚುನಾವಣೆ ನಡೆಯಬೇಕಿದೆ ಎಂದೂ ಚುನಾವಣಾ ಆಯೋಗ ಅಧಿಕೃತ ಮಾಹಿತಿ ನೀಡಿದೆ. 

ಇದನ್ನೂ ಓದಿ: Bengaluru: ರಾಜಧಾನಿಯಲ್ಲಿ ಈಗ 82 ಲಕ್ಷ ಮತದಾರರು: ತುಷಾರ್‌ ಗಿರಿನಾಥ್‌

 ಸಿಇಸಿ ರಾಜೀವ್‌ ಕುಮಾರ್‌ ನೇತೃತ್ವದ ತಂಡ ಮೂರು ಈಶಾನ್ಯ ರಾಜ್ಯಗಳಿಗೆ ಇತ್ತೀಚೆಗೆ ಭೇಟಿ ನೀಡಿದ್ದರು. ನಂತರ ಕಳೆದ ವಾರದಿಂದ ಚುನಾವಣಾ ಆಯೋಗ ಸರಣಿ ಸಭೆಗಳನ್ನು ನಡೆಸಿತ್ತು. . ಮೂರು ರಾಜ್ಯಗಳ ರಾಜಕೀಯ ಪಕ್ಷಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಕೆಂದ್ರೀಯ ಭದ್ರತಾ ಪಡೆ ಅಧಿಕಾರಿಗಳೊಂದಿಗೆ ಚುನಾವಣಾ ಆಯೋಗ ಈ ಸರಣಿ ಸಭೆಗಳನ್ನು ನಡೆಸಿದ್ದಾರೆ ಎಂದು ತಿಳಿದುಬಂದಿದೆ. 3 ಈಶಾನ್ಯ ರಾಜ್ಯಗಳ ಪರಿಸ್ಥಿತಿಯನ್ನು ಅವಲೋಕಿಸಿ, ಅಲ್ಲಿನ ಹವಾಮಾನ ಮುಂತಾದುವನ್ನು ಅವಲೋಕಿಸಿ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: ವಿಧಾನಸಭಾ ಚುನಾವಣೆಗೆ ಸಿದ್ಧತೆ: ರಾಜ್ಯದ 221 ಕ್ಷೇತ್ರದಲ್ಲಿ 5 ಕೋಟಿ ಮತದಾರರು

Latest Videos
Follow Us:
Download App:
  • android
  • ios