ಯಾರನ್ನು ದೇಶದಿಂದ ತಿರಸ್ಕರಿಸಲಾಗಿದೆಯೋ ಅವರು ಈಗ ಆಶಾಭಾವನೆ ಕಳೆದುಕೊಂಡಿದ್ದು, ಮೋದಿ, ನಿಮ್ಮ ಗೋರಿ ತೋಡಲಾಗುತ್ತದೆ ಎಂದು ಕೂಗುತ್ತಿದ್ದಾರೆ. ಆದರೆ ಜನರು ಇದರ ಬದಲಾಗಿ ಕಮಲ ಅರಳುತ್ತದೆ ಎಂದು ಹೇಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಶಿಲ್ಲಾಂಗ್‌ (ಫೆಬ್ರವರಿ 25, 2023): ‘ಮೋದಿ, ನಿಮ್ಮ ಸಮಾಧಿ ತೋಡಲಾಗುತ್ತದೆ’ ಎಂದು ಕಾಂಗ್ರೆಸ್‌ ನಾಯಕರು ನೀಡುತ್ತಿರುವ ಘೋಷಣೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶದೆಲ್ಲೆಡೆ ಜನರು ‘ಮೋದಿ, ನಿಮ್ಮ ಕಮಲ ಅರಳುತ್ತದೆ’ ಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಮೇಘಾಲಯದಲ್ಲಿ (Meghalaya) ನಡೆದ ಸಾರ್ವಜನಿಕ ರ್‍ಯಾಲಿಯಲ್ಲಿ (Public Rally) ಮಾತನಾಡಿದ ಮೋದಿ (Narendra Modi), ಬಿಜೆಪಿಯ (BJP) ಚಿಹ್ನೆಯಾದ ಕಮಲ (Lotus) ಈ ಬಾರಿ ರಾಜ್ಯದಲ್ಲಿ ಅರಳುತ್ತದೆ. ಬಿಜೆಪಿ ಸರ್ಕಾರ ರಾಜ್ಯದ ಜನತೆಯ ಅಭಿವೃದ್ಧಿಗಾಗಿ ಶ್ರಮಿಸಿದೆ ಎಂದು ಹೇಳಿದರು. ಯಾರನ್ನು ದೇಶದಿಂದ ತಿರಸ್ಕರಿಸಲಾಗಿದೆಯೋ ಅವರು ಈಗ ಆಶಾಭಾವನೆ ಕಳೆದುಕೊಂಡಿದ್ದು, ಮೋದಿ, ನಿಮ್ಮ ಗೋರಿ ತೋಡಲಾಗುತ್ತದೆ ಎಂದು ಕೂಗುತ್ತಿದ್ದಾರೆ. ಆದರೆ ಜನರು ಇದರ ಬದಲಾಗಿ ಕಮಲ ಅರಳುತ್ತದೆ ಎಂದು ಹೇಳುತ್ತಿದ್ದಾರೆ. ದೇಶ ಇದೀಗ ಹೊಸ ಎತ್ತರಕ್ಕೆ ಏರಿದ್ದು, ಇದಕ್ಕೆ ಮೇಘಾಲಯವೂ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಹಾಗಾಗಿ ಮೇಘಾಲಯದ ಯುವಕರು, ಮಹಿಳೆಯರು, ವ್ಯಾಪಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.

ಇದನ್ನು ಓದಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ದೆಹಲಿಯ ಎಟಿಎಂ ಆಗುತ್ತೆ, ಜೆಡಿಎಸ್‌ಗೆ ಮತ ಹಾಕಿದ್ರೆ ಕಾಂಗ್ರೆಸ್‌ಗೆ ಹೋದಂತೆ: ಅಮಿತ್ ಶಾ

ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಅವರನ್ನು ವಿಮಾನದಿಂದ ಕೆಳಗಿಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಮೋದಿ ವಿರುದ್ಧ ವಿವಾದಾತ್ಮಕ ಘೋಷಣೆಗಳನ್ನು ಕೂಗಿದ್ದರು. ಪಕ್ಷದ ಸಹೋದ್ಯೋಗಿ ಪವನ್ ಖೇರಾ ಅವರ ಬಂಧನ ವಿರೋಧಿಸಿ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಅವರು ಸರ್ವಾಧಿಕಾರಕ್ಕೆ ಧಿಕ್ಕಾರ ಹಾಗೂ ಮೋದಿ, ನಿಮ್ಮ ಸಮಾಧಿ ತೋಡಲಾಗುತ್ತದೆ ಸೇರಿದಂತೆ ಘೋಷಣೆಗಳನ್ನು ಕೂಗುವುದನ್ನು ಕೇಳಬಹುದು.

ಈ ಹಿನ್ನೆಲೆ ಕಾಂಗ್ರೆಸ್‌ ಘೋಷಣೆಗೆ ತಿರುಗೇಟು ನೀಡಿದ ಪ್ರಧಾನಿ, ಆಕ್ರಮಣಕಾರಿ ಚಿಂತನೆ ಮತ್ತು ಭಾಷೆ ಹೊಂದಿರುವ ಜನರಿಗೆ ದೇಶವು "ಸೂಕ್ತವಾದ ಉತ್ತರ" ನೀಡುತ್ತದೆ ಎಂದು ಹೇಳಿದರು. ನಾನು ಮೇಘಾಲಯದಲ್ಲಿ ಬಿಜೆಪಿಯನ್ನು ಎಲ್ಲೆಡೆ ನೋಡಬಹುದು. ಅದು ಬೆಟ್ಟಗಳು ಅಥವಾ ಬಯಲು, ಗ್ರಾಮ ಅಥವಾ ಪಟ್ಟಣವಾಗಿರಬಹುದು, ಕಮಲ ಅರಳುವುದನ್ನು ನಾನು ನೋಡಬಹುದು. ಆದರೆ, ದೇಶದಿಂದ ತಿರಸ್ಕರಿಸಲ್ಪಟ್ಟವರು, ದೇಶವು ಸ್ವೀಕರಿಸಲು ಹೆಚ್ಚು ಸಿದ್ಧರಿಲ್ಲದವರು, ಈಗ ಮೋದಿ, ನಿಮ್ಮ ಸಮಾಧಿ ತೋಡಲಾಗುತ್ತದೆ ಎಂದು ಜಪಿಸುತ್ತಿದ್ದಾರೆ. ಆದರೆ ದೇಶವು ಮೋದಿ ನಿಮ್ಮ ಕಮಲ ಅರಳುತ್ತದೆ ಎಂದು ಹೇಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಶುಕ್ರವಾರ ಶಿಲ್ಲಾಂಗ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

ಇದನ್ನೂ ಓದಿ: ಸಿಂಗಾಪುರಕ್ಕೂ ಮಾಡಿ ಫೋನ್‌ ಪೇ, ಪೇಟಿಎಂ: ಹೊಸ ಸೇವೆಗೆ ಪ್ರಧಾನಿ ಮೋದಿ ಚಾಲನೆ

"ದೇಶದ ಜನರು ಅಂತಹ ಆಕ್ರಮಣಕಾರಿ ಚಿಂತನೆ ಮತ್ತು ಭಾಷೆಯನ್ನು ಹೊಂದಿರುವ ಜನರಿಗೆ ಸೂಕ್ತವಾದ ಉತ್ತರವನ್ನು ನೀಡುತ್ತಾರೆ. ಮೇಘಾಲಯ ಮತ್ತು ನಾಗಾಲ್ಯಾಂಡ್ ಜನರು ಸಹ ಉತ್ತರವನ್ನು ನೀಡುತ್ತಾರೆ" ಎಂದು ಪ್ರಧಾನಿ ಮೋದಿ ಹೇಳಿದರು. ಹಾಗೆ, ಮೇಘಾಲಯಕ್ಕೆ "ಕುಟುಂಬ ಮೊದಲ" ಸರ್ಕಾರದ ಬದಲು "ಜನರ ಮೊದಲು" ಎಂಬ ಸರ್ಕಾರ ಬೇಕು ಎಂದೂ ಪ್ರಧಾನಿ ಹೇಳಿದ್ದಾರೆ.

ಇಂದು, ಮೇಘಾಲಯವು ಕುಟುಂಬ ಮೊದಲು ಅನ್ನೋದರ ಬದಲಾಗಿ ಮೊದಲು ಜನರು ಎನ್ನುವ ಸರ್ಕಾರವನ್ನು ಬಯಸುತ್ತದೆ. ಆದ್ದರಿಂದ ಇಂದು ಕಮಲ ಹೂವು ಮೇಘಾಲಯದ ಶಕ್ತಿ, ಶಾಂತಿ ಮತ್ತು ಸ್ಥಿರತೆಗೆ ಸಮಾನಾರ್ಥಕವಾಗಿದೆ. ನಾನು ಮೇಘಾಲಯದ ಬಗ್ಗೆ ಯೋಚಿಸುವಾಗ, ನಾನು ಪ್ರತಿಭಾವಂತ ಜನರು ಮತ್ತು ರೋಮಾಂಚಕ ಸಂಪ್ರದಾಯಗಳ ಬಗ್ಗೆ ಯೋಚಿಸುತ್ತೇನೆ. ಭರವಸೆ ಮತ್ತು ಅಭಿವೃದ್ಧಿಯ ಸಂದೇಶದೊಂದಿಗೆ ನಾನು ಇಲ್ಲಿದ್ದೇನೆ. ಭಾರತವು ಯಶಸ್ಸಿನ ಹೊಸ ಎತ್ತರವನ್ನು ಹೆಚ್ಚಿಸಿಕೊಳ್ಳುತ್ತಿದೆ ಮತ್ತು ಮೇಘಾಲಯವು ಅದಕ್ಕೆ ಬಲವಾದ ಕೊಡುಗೆ ನೀಡುತ್ತಿದೆ. ನಾವು ಅದನ್ನು ಮತ್ತಷ್ಟು ನಿರ್ಮಿಸಲು ಮತ್ತು ರಾಜ್ಯಕ್ಕಾಗಿ ಕೆಲಸ ಮಾಡಲು ಬಯಸುತ್ತೇವೆ "ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: ಟರ್ಕಿಗೆ ತೆರಳಿದ್ದ ಎನ್‌ಡಿಆರ್‌ಎಫ್‌ ತಂಡಕ್ಕೆ ಮೋದಿ ಮೆಚ್ಚುಗೆ: ಇನ್ನೊಬ್ಬರ ರಕ್ಷಣೆ ನಮ್ಮ ಕರ್ತವ್ಯ ಎಂದ ಪ್ರಧಾನಿ

ಮೇಘಾಲಯ ಫೆಬ್ರವರಿ 27 ರಂದು ನಾಗಾಲ್ಯಾಂಡ್ ಜೊತೆಗೆ ವಿಧಾನಸಭೆ ಚುನಾವಣೆ ಎದುರಿಸಲಿದ್ದು, ಮತಗಳ ಎಣಿಕೆ ಮಾರ್ಚ್ 2 ರಂದು ನಡೆಯಲಿದೆ.